
ನೆರೆ ಸಂತ್ರಸ್ತರಿಗೆ ಸಹಾಯ ಮಾಡುತ್ತಿರುವ ಸಂಸ್ಥೆಗಳಿಗೆ ಹಾಗೂ ಕೈಲಾಗುತ್ತಿರುವಷ್ಟು ಸಹಾಯ ಮಾಡುತ್ತಿರುವ ಸಾಮಾನ್ಯರಿಗೆ ಧನ್ಯವಾದ ಹೇಳುತ್ತಾ, ಪರಭಾಷಿಗರ ಮೇಲೆ ರಾಜ್ ಮೊಮ್ಮಗ ಫುಲ್ ಗರಂ ಆಗಿದ್ದಾರೆ. ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಮಾಡಿರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನೆರೆ ಸಂತ್ರಸ್ತರಿಗೆ ಕೊಲ್ಲೂರು ದೇವಳದಿಂದ 1 ಕೋಟಿ ರು. ನೆರವು
ಉತ್ತರ ಕರ್ನಾಟಕದ ಭಾರಿ ಮಳೆಯಿಂದ ಲಕ್ಷಾಂತರ ಜನರ ಜೀವನ ಬೀದಿಗೆ ಬಂದಿದೆ. ಪ್ರವಾಹ ಸಂತ್ರಸ್ತರಿಗೆ ಸಹಕರಿಸಲು ಹೊರಗಿನ ಯಾವ ಸೆಲೆಬ್ರಿಟಿ, ಸ್ಟಾರ್‌ಗಳು ಬಂದಿಲ್ಲವೆಂದು ರಾಜ್ ಮೊಮ್ಮಗ ಯುವರಾಜ್ ರಾಘವೇಂದ್ರ ರಾಜ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಒಂದು ಆಲೋಚನೆ- ನಮ್ಮ ಕರ್ನಾಟಕದ ಎಷ್ಟೋ ಜಿಲ್ಲೆಗಳಲ್ಲಿ ಜಲಪ್ರಳಯದ ಪರಿಣಾಮ ಲಕ್ಷಾಂತ ಜನರು ಸಂಕಷ್ಟದಲ್ಲಿದ್ದಾರೆ. ಅವರಲ್ಲಿ ನೂರಾರು ಜನರು ನಿರಾಶ್ರಿತರಾಗಿದ್ದಾರೆ. ಆಹಾರವಿಲ್ಲ, ಮೂಲ ಸೌಕರ್ಯಗಳಿಲ್ಲ. ನಾವು ಕನ್ನಡಿಗರು, ಇಲ್ಲಿನ ಸಂಘ ಸಂಸ್ಥೆಗಳು, ಸೇನ ದಳಗಳು, ಕರ್ನಾಟಕ ಸರ್ಕಾರ ಎಲ್ಲರೂ ಒಂದಾಗಿ ಕೈಲಾದಷ್ಟು ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇವೆ...ಆದರೆ ಎಲ್ಲಾ ಹೊರಗಿನ ಸೆಲೆಬ್ರಿಟಿಗಳು/ಸ್ಟಾರ್‌ಗಳು, ರಾಜಕಾರಣಿಗಳು ತಮ್ಮ ಚಲನಚಿತ್ರಗಳನ್ನು ಪ್ರಚಾರ ಮಾಡಲು, ತಮ್ಮ ಬ್ರಾಂಡ್ ಅನ್ನು ಉತ್ತೇಜಿಸಲು, ನಮ್ಮ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲು , ಮತ ಕೇಳಲು ಕರ್ನಾಟಕಕ್ಕೆ ಬರುವವರು ಎಲ್ಲಿದ್ದಾರೆ? ಇಲ್ಲಿ ಬರೋದು, ಸಹಾಯ ಮಾಡೋದ್ ಇರಲಿ, ನನಗೆ ಯಾರ ಟ್ವೀಟ್ , ಪೋಸ್ಟ್ ನೋಡಿದ ನೆನಪೂ ಆಗುತ್ತಿಲ್ಲ! ಅಂದ ಹಾಗೆ , ಸಹಾಯ ಮಾಡಲು ಮುಂದೆ ಬಂದಿರುವ ಎಲ್ಲರಿಗೂ ನಮ್ಮ ಕೋಟಿ ವಂದನೆಗಳು. ನಾನು ಏನಾದರೂ ತಪ್ಪು ಹೇಳುತ್ತಿದ್ದರೆ ಕ್ಷಮೆ ಇರಲಿ..’ಎಂದು ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಬರೆದಿದ್ದಾರೆ.
ಸಿಎಂ ಪರಿಹಾರ ನಿಧಿಗೆ ಡಿಕೆಶಿ 50 ಲಕ್ಷ ರು. ನೆರವು
ಅಷ್ಟೇ ಅಲ್ಲದೆ ತಾತನ ಟ್ರೋಲ್ ಫೋಟೋವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಸಿನಿಮಾ ಪ್ರಚಾರ ಮಾಡಲು ಡಿಯರ್ ಕಾಮ್ರೆಡ್ ಚಿತ್ರ ತಂಡ ಬಂದಿತ್ತು. ಅಲ್ಲದೇ ಸಾಕಷ್ಟ ಪರ ಬಾಷಾ ಚಿತ್ರಗಳನ್ನು ಪ್ರಚಾರ ಮಾಡಲು ನಮ್ಮ ರಾಜ್ಯಕ್ಕೆ ಬರುತ್ತವೆ. ಅಲ್ಲದೇ ನೆರೆ ರಾಜ್ಯಗಳ ಕಲಾವಿದರನ್ನು ಕನ್ನಡಿಗರು ತಮ್ಮ ಮಾತೃ ಭಾಷೆಯ ನಟರಂತೆಯೇ ಗೌರವಿಸುತ್ತಾರೆ, ಪ್ರೀತಿಸುತ್ತಾರೆ. ಆದರೆ ಯಾರೂ ಉತ್ತರ ಕರ್ನಾಟಕಕ್ಕೆ ಇನ್ನೂ ಸಹಾಯ ಮಾಡಲು ಮುಂದಾಗಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.