
ರಾಜ್ ಬಿ ಶೆಟ್ಟಿ ವರ್ಕ್ ಮಾಡಿಲ್ಲ ಅನ್ನೋದು ಕನ್ಫರ್ಮ್!
ರಿಷಬ್ ಶೆಟ್ಟಿ (Rishab Shetty) ನಟನೆ-ನಿರ್ದೇಶನದ 'ಕಾಂತಾರ ಚಾಪ್ಟರ್ 1' ಸಿನಿಮಾಗೆ ರಾಜ್ ಬಿ ಶೆಟ್ಟಿ (Raj B Shetty) ಯಾಕೆ ಕೆಲಸ ಮಾಡಿಲ್ಲ? ಈ ಮೊದಲು ತೆರೆಗೆ ಬಂದಿದ್ದ 'ಕಾಂತಾರ' ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿಯವರು ಕೆಲಸ ಮಾಡಿದ್ದರು. ಆದರೆ, ಇದೀಗ ಬಿಡುಗಡೆಯಾಗಿ ಸೂಪರ್ ಹಿಟ್ ದಾಖಲಿಸಿ, ಕೇವಲ ಒಂದೇ ವಾರದಲ್ಲಿ ರೂ. 509.25 ಕೋಟಿ ಗಳಿಸಿ ದಾಖಲೆ ಬರೆದಿರೋ 'ಕಾಂತಾರ ಚಾಪ್ಟರ್ 1' (Kantara Cahpter 1) ಸಿನಿಮಾಗೆ ರಾಜ್ ಬಿ ಶೆಟ್ಟಿ ವರ್ಕ್ ಮಾಡಿಲ್ಲ ಅನ್ನೋದು ಕನ್ಫರ್ಮ್ ಆಗಿದೆ. ಆದರೆ, ಯಾಕೆ ಅವರು ರಿಷಬ್ ಜೊತೆಯಾಗಿಲ್ಲ? ಈ ಪ್ರಶ್ನೆ ಈಗಲೂ ಹಲವರನ್ನು ಕಾಡುತ್ತಿದೆ. ಅದಕ್ಕೆ ಉತ್ತರವನ್ನು ಸ್ವತಃ ರಾಜ್ ಬಿ ಶೆಟ್ಟಯವರೇ ಸ್ವಲ್ಪ ಕಾಲದ ಹಿಂದೆ, ಅಂದರೆ ಇಂಟರ್‌ವ್ಯೂ ಒಂದರಲ್ಲಿ ಈ 'ಕಾಂತಾರ ಚಾಪ್ಟರ್ 1' ಸಿನಿಮಾ ಬಿಡುಗಡೆಗೂ ಮೊದಲೇ ಹೇಳಿದ್ದಾರೆ. ಅದು ಈಗ ಸೋಷಿಯಲ್ ಮೀಡಿಯಾ ಮೂಲಕ ವೈರಲ್ ಆಗ್ತಿದೆ.
ಈ ಸಂಗತಿ ಬಗ್ಗೆ ಹಲವರಿಗೆ ಅಸಮಾಧಾನ ಹಾಗೂ ಸಂದೇಹ ಇದೆ. ಯಾಕೆ ಹೀಗಾಯ್ತು? ಯಾಕೆ ರಿಷಬ್ ಜೊತೆ ಅವರ ಆತ್ಮೀಯ ಸ್ನೇಹಿತ ರಾಜ್ ಬಿ ಶೆಟ್ಟಿಯವರಾಗಲೀ ಅಥವಾ ರಕ್ಷಿತ್ ಶೆಟ್ಟಿಯವರಾಗಲೀ ಯಾಕೆ ಕೆಲಸ ಮಾಡಿಲ್ಲ? ಈ ಬಗ್ಗೆ ರಾಜ್ ಬಿ ಶೆಟ್ಟಿಯವರು ಸ್ವಲ್ಪ ಸಮಯದ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು ಈಗ ವೈರಲ್ ಅಗಿದೆ. ಹಾಗಿದ್ದರೆ ಈ ಸೀಕ್ರೆಟ್ ಬಗ್ಗೆ ರಾಜ್ ಬಿ ಶೆಟ್ಟಿಯವರು ಏನು ಹೇಳಿದ್ದಾರೆ? ಮುಂದೆ ನೋಡಿ..
ಮೊದಲ 'ಕಾಂತಾರ' ಸಿನಿಮಾ ಆದಾಗ, ಸಂಬಂಧಪಟ್ಟ ಜನರಿಂದ 'ಮತ್ತೆ ಮಾಡ್ಬೆಡಿ' ಅನ್ನೋ ಅಭಿಪ್ರಾಯ ಬಂತು. ನಾನು ಆವಾಗ 'ಆಯ್ತು, ಮಾಡೋದು ಬೇಡ ಅಂದ್ಕೊಂಡೆ. ಒಂದು ಸಾರಿ ಅಂದ್ಕೊಂಡ್ಮೇಲೆ ನಂಗೆ ಮತ್ತೆ ಈ ಸಿನಿಮಾದ ಕೆಲಸದಲ್ಲಿ ಹೋಗೋದಕ್ಕೆ ಆಗಿಲ್ಲ. ಹೀಗಾಗಿ ನಂಗೆ ಈಗಿನ 'ಕಾಂತಾರ ಚಾಪ್ಟರ್ 1' ಸಿನಿಮಾದಲ್ಲಿ ದೈವ ಇದೆಯಾ ಇಲ್ಲವಾ ಅಂತೇನೂ ಗೊತ್ತಿಲ್ಲ. ಜೊತೆಗೆ, ನಾನು ನನ್ನ ಸಿನಿಮಾದ ಪ್ರೊಡಕ್ಷನ್‌ನಲ್ಲಿ, ನಟನೆಯಲ್ಲಿ ಹಾಗೂ ಬೇರೆ ಕೆಲಸಗಳಲ್ಲಿ ತುಂಬಾ ಬ್ಯುಸಿ ಆಗಿರೋದ್ರಿಂದನೂ ನಂಗೆ ಈ ಕಾಂತಾರ-1 ಸಿನಿಮಾದಲ್ಲಿ ತೊಡಗಿಸಿಕೊಳ್ಳಲು ಆಗಲಿಲ್ಲ.
'ಮಾಡ್ಬೇಡಿ ಅಂತ ಯಾರು ಹೇಳಿದ್ದು' ಎಂಬ ಪ್ರಶ್ನೆಗೆ ಕೂಡ ರಾಜ್ ಬಿ ಶೆಟ್ಟಿಯವರು ಉತ್ತರ ಕೊಟ್ಟಿದ್ದಾರೆ. ಅದು ಬೇರೆ ಯಾರೂ ಅಲ್ಲ, ಜನಗಳು.. ಜನಗಳು ಅಂದ್ರೆ ಅಲ್ಲಿನ, ಅದಕ್ಕೆ ಸಂಬಂಧಪಟ್ಟ ಜನರಿಗೆ ಧಕ್ಕೆ ಆಗಿದೆ ಅಂತ ಹೇಳಿಕೆ ಬಂದಾಗ, ಇಶ್ಯೂ ಆದಾಗ, ಅವರ ಕಾಮೆಂಟ್ಸ್, ಟ್ಯಾಗ್ ಬಂದಾಗ.. ಈ ಥರ ಮಾಡ್ಬಾರ್ದಿತ್ತು ಅನ್ನೋ ಮಾತು ಬಂದಾಗ.. ನಾನು ಹಿಂದೆ ಸರಿದೆ. ಆದ್ರೆ, ಕಾಂತಾರ ಸಿನಿಮಾ ಮಾಡಿದಾಗ ನಮ್ಮ ಇಂಟೆನ್‌ಶನ್ ಅದು ಆಗಿರಲಿಲ್ಲ, ಫಸ್ಟ್ ನಾನು ಆ ಸಿನಿಮಾದಲ್ಲಿ ಇನ್‌ವಾಲ್ವ್ ಆಗಿರುವಾಗ ನನ್ನ ನನಗಂತೂ ಆ ತರಹದ ಯಾವುದೇ ಉದ್ದೇಶ ಇರಲಿಲ್ಲ. ಆದರೆ, ಆಮೇಲೆ 'ದೈವದ ಸಿನಿಮಾ ಮಾಡಬಾರದಿತ್ತು' ಅನ್ನೋ ಅಭಿಪ್ರಾಯ ಜನರಿಂದ ಬಂತು.
ಅದು ನನ್ನ ಮನಸ್ಸಿಗೆ ಹೇಗೆ ಅನ್ನಿಸ್ತು ಅಂದ್ರೆ, 'ಇದು ಯಾವ್ ಥರ ಅಂದ್ರೆ, ನಾನು ನಡೆದುಕೊಂಡು ಎಲ್ಲೋ ಹೋಗ್ತಾ ಇರ್ತೀನಿ, ಏನೋ ಒಂದು ಏಟ್ ಆಯ್ತು.. ಅದಕ್ಕೆ, ನನಗೆ ಯಾರಾದ್ರೂ ನೀನು ನಡೆದುಕೊಂಡು ಹೋಗಿದ್ರಿಂದ ಹೀಗಾಯ್ತು ಅಂತ ಹೇಳಿದ್ರೆ, ಓ ಹೌದಾ, ನನ್ ಇನ್‌ಟೆನ್‌ಶನ್ ಅದಲ್ಲ, ಆದ್ರೆ ನಾನು ಆ ದಾರಿಯಲ್ಲಿ ನಡೆದುಕೊಂಡು ಹೋಗಿದ್ರಿಂದ ಹೀಗಾಯ್ತು ಅಂತ ಹೇಳ್ತಿದಾರೆ ಅಂದ್ರೆ, ಹೌದಾ, ಹಾಗಿದ್ರೆ ನಾನು ಇನ್ಮೇಲೆ ಆ ದಾರಿಯಲ್ಲಿ ನಡೆದುಕೊಂಡು ಹೋಗಲ್ಲ ಅಂತ ನಾನು ಡಿಸಿಜನ್ (ನಿರ್ಧಾರ) ತಗೊಂಡೆ.
ಜೊತೆಗೆ, ಕಾಂತಾರ ಸಿನಿಮಾ ಶೂಟಿಂಗ್ ವೇಳೆ ಹಲವಾರು ಅವಘಡಗಳು ನಡೆದಿವೆ. ಆಗೆಲ್ಲಾ ಸೋಷಿಯಲ್ ಮೀಡಿಯಾಗಳಲ್ಲಿ ಕಾಂತಾರ ಟೀಮ್ ದೈವದ ಪರ್ಮಿಶನ್ ತಗೊಂಡಿಲ್ಲ, ಈ ಸಿನಿಮಾ ಮಾಡ್ಬಾರ್ದಿತ್ತು ಅಂತೆಲ್ಲಾ ರೂಮರ್ ಹಬ್ಬಿತ್ತು ಅಂತ ರಾಜ್ ಬಿ ಶೆಟ್ಟಿಯವರ ಗಮನ ಸೆಳೆದಾಗ, 'ರಿಷಬ್ ತುಂಬಾ ದೈವ ನಂಬಿಕೆ ಉಳ್ಳವರು, ಯಾವ್ದೇ ರೀತಿಯಲ್ಲಿ ಅದು ತಪ್ಪು ಅಂತ ಗೊತ್ತಾದ್ರೆ ಅದನ್ನು ಮಾಡದೇ ಇರುವವರು. ಆದ್ರೂ ಅವ್ರು ಅದನ್ನ ಮಾಡ್ತಾ ಇದಾರೆ ಅಂದ್ರೆ, ನನ್ ಅನಿಸಿಕೆ ಪ್ರಕಾರ ಆ ಶಕ್ತಿನೇ ಅವ್ರನ್ನ ನಡೆಸ್ತಾ ಇದೆ ಅಂತ ಅರ್ಥ. ಒಮ್ಮೆ ಈ ಸಿನಿಮಾ ಮಾಡಬಾರ್ದು ಅಂತಿದ್ರೆ, ಆ ದೈವ ಶಕ್ತಿಗೆ ಅದನ್ನ ತಡೆಯೋಕೆ ಜಾಸ್ತಿ ಟೈಂ ಬೇಕು ಅಂತ ನನಗೆ ಅನಿಸಲ್ಲ.
ನನಗೆ ಎಲ್ಲಾ ವಿಷಯ ಸರಿಯಾಗಿ ಗೊತ್ತಿಲ್ಲ. ನಾನೂ ಕೂಡ ದೈವವನ್ನು ನಂಬುವವನು ಆದ ಕಾರಣ, ನಾನು ಆಗ, "ಈ ಸಿನಿಮಾ ಮಾಡ್ಬಾರ್ದಿತ್ತು' ಅನ್ನೋ ಮಾತು ಬಂದಾಗ ನಾನು ಮುಂದೆ ಈ ಸಿನಿಮಾಗೆ ಏನೂ ಕೆಲಸ ಮಾಡಲ್ಲ ಅಂತ ಹೇಳಿ ಅದ್ರಿಂದ ಹೊರಗೆ ಬರಬೇಕಾಯ್ತು. ಆದ್ರೆ, ನನಗೆ ನಂಬಿಕೆ ಇದೆ, ರಿಷಬ್ ಆ ವಿಷ್ಯದಲ್ಲಿ ತುಂಬಾ ನಂಬಿಕೆ ಇರೋರು. ದೈವ ಹಾಗೂ ಜನರ ನಂಬಿಕೆಗಳ ಬಗ್ಗೆ, ಅದನ್ನೆಲ್ಲ ಸರಿಯಾಗಿ ತಿಳಿದುಕೊಂಡು ರಿಷಬ್ ಜಾಗರೂಕತೆಯಿಂದ ನಡೆದಕೊಳ್ತಾ, ತಗ್ಗಿ ಬಗ್ಗಿ ನಡೆಯುವಂಥಾ ಮನುಷ್ಯರೇ ಅವ್ರು..
ನನಗಿಂತ ಜಾಸ್ತಿ ದೇವರ ಹೆಸರನ್ನು ತೆಗಿತಾ, ನನಗಿಂತ ಜಾಸ್ತಿ ಕೈಮುಗಿತಾ, ನನಗಿಂತ ಹೆಚ್ಚು ದೇವಸ್ಥಾನಗಳಿಗೆ ಹೋಗ್ತಾ ಇರೋ ವ್ಯಕ್ತಿ ರಿಷಬ್... ನೀವು ಅವ್ರ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಯಾವುದೇ ಫೋಟೋ ನೋಡಿದ್ರೂ ಅವ್ರು ಹೆಚ್ಚಾಗಿ ಯಾವುದೋ ದೇವಸ್ಥಾನಗಳಲ್ಲೇ ಇರ್ತಾರೆ. ನನಗಿಂತ ಹೆಚ್ಚು ಶ್ರದ್ಧೆ, ನಂಬಿಕೆ ಉಳ್ಲವರು ರಿಷಬ್ ಶೆಟ್ಟಿ. ಹೀಗಾಗಿ ಅವರು ಎಲ್ಲಾ ಜಾಗ್ರತೆ ತೆಗೆದುಕೊಂಡು ಮಾಡ್ತಾರೆ ಅನ್ನೋದು ನನ್ನ ನಂಬಿಕೆ. ನಂಗೆ ಸರಿಯಾಗಿ ಗೊತ್ತಿಲ್ಲ, ಅದು ಏನಾಗ್ತಿದೆ ಹೇಗಾಗ್ತಿದೆ, ಅದಕ್ಕೂ ಇದಕ್ಕೂ ಏನ್ ಸಂಬಂಧ ಅಂತೆಲ್ಲಾ.. ಆದ್ರೆ, ಏನೇ ಆದ್ರೂ ಈ ಸಿನಿಮಾ ಚೆನ್ನಾಗಿ ಆಗುತ್ತೆ.. ಈ ಸಿನಿಮಾ ಚೆನ್ನಾಗಿ ಓಡುತ್ತೆ..!
ಜನರ ಭಾವನೆಗಳಿಗೆ ಧಕ್ಕೆ ಆಗ್ಬಾರ್ದು ಅನ್ನೋದು ನನ್ನ ಆಶಯ, ಹಾಗೇ ರಿಷಬ್ ಮಾಡ್ತಾರೆ ಅನ್ನೋದು ನನ್ನ ನಂಬಿಕೆ. ಆದ್ರೆ, ರಿಷಬ್ ನನಗಿಂತ ನಂಬಿಕಸ್ಥ, ನನಗಿಂತ ಹೆಚ್ಚು ದೇವರು-ದೈವವನ್ನು ನಂಬುವವರು. ಸೋ, ಹೀಗಾಗಿ ಅವರು ಯಾವುದೇ ರೀತಿಯಲ್ಲಿ ಜನರಿಗೆ ಹರ್ಟ್ ಮಾಡ್ಬೇಕು ಅನ್ನೋ ರೀತಿಯಲ್ಲಿ ಇನ್‌ವಾಲ್ವ್ ಆಗಿರಲ್ಲ ಅನ್ನೋದು ನನ್ನ ನಂಬಿಕೆ..' ಎಂದಿದ್ದಾರೆ ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ. ಆದರೆ, ಈಗ ಮತ್ತೆ ವಿವಾದ 'ಕಾಂತಾರ ಚಾಪ್ಟರ್ 1' ಸಿನಿಮಾದ ಬೆನ್ನು ಬಿದ್ದಿದೆ. ಮುಂದೇನು ಎಂಬುದನ್ನು ಕಾದು ನೋಡಬೇಕಿದೆ..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.