
ಹಿಂದಿ ನಟಿ ರಾಖಿ ಸಾವಂತ್ ಇದ್ದಲ್ಲಿ ಮನೋರಂಜನೆ ಗ್ಯಾರಂಟಿ. ಪರ್ಸನಲ್ ಇರಲಿ ಪ್ರೊಫೆಷನಲ್ ಲೈಫ್ ಇರಲಿ ರಾಖಿ ಸಾವಂತ್ ಲೈಫ್‌ಸ್ಟೈಲ್ ಫುಲ್ ಖುಲ್ಲಾಂಖುಲ್ಲಾ. ಕನ್ನಡದ ಅದರಲ್ಲೂ ಮೈಸೂರಿನ ಹುಡುಗ ಅದಿಲ್ ಖಾನ್‌ನನ್ನು ಮದ್ವೆಯಾಗಿ ಜೈಲಿನಲ್ಲಿ ಕಂಬಿ ಎಣಿಸುವಂತೆ ಮಾಡಿದ್ದ ರಾಖಿ ಸಾವಂತ್ ಈಗ ಮತ್ತೊಂದು ಮದ್ವೆ ಆಗ್ತಾರಾ? ಅದಿಲ್ ಖಾನ್ ದುರಾನಿಯನ್ನು ಮದ್ವೆಯಾಗುವ ಮೊದಲು ಉದ್ಯಮಿ ರಿತೇಶ್ ಸಿಂಗ್ ಅವರನ್ನು ಮದ್ವೆಯಾಗಿದ್ದ ರಾಖಿ ಸಾವಂತ್ ಮತ್ತೊಂದು ಮದ್ವೆ ಆಗ್ತಾರೋ ಇಲ್ವೋ ಗೊತ್ತಿಲ್ಲ, ಆದರೆ ನಟನೊಬ್ಬನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ನನಗೆ ಗಂಡ ಸಿಕ್ಕಿದ್ದಾನೆ ಎಂದು ಹೇಳುವ ಮೂಲಕ ನಟನನ್ನೇ ಕಕ್ಕಾಬಿಕ್ಕಿಯಾಗುವಂತೆ ಮಾಡಿದ್ದಾರೆ. ರಾಖಿ ಸಾವಂತ್.
ಹೌದು ಹಿಂದಿ ಕಲರ್ಸ್ ಚಾನೆಲ್‌ನಲ್ಲಿ ಪ್ರಸಾರವಾಗುವ ಪತ್ನಿ ಪತಿ ಔರ್ ಪಂಗಾ ರಿಯಾಲಿಟಿ ಶೋಗೆ ಗ್ರಾಂಡ್ ಎಂಟ್ರಿ ಕೊಟ್ಟ ರಾಖಿ ಸಾವಂತ್ ಅಲ್ಲಿದ್ದ ನಟ ಅಭಿಷೇಕ್ ಕುಮಾರ್ ಅವರನ್ನು ತಬ್ಬಿಬ್ಬಾಗುವಂತೆ ಮಾಡಿದ್ದಾರೆ. ಈ ಶೋದಲ್ಲಿ ಅಭಿಷೇಕ್ ಕುಮಾರ್ ಪರ್ಫೆಕ್ಟ್ ಆಗಿರುವ ಪತ್ನಿಗಾಗಿ ಹುಡುಕಾಟ ನಡೆಸ್ತಿದ್ರೆ, ಇದ್ದಕ್ಕಿದ್ದಂತೆ ಆ ಶೋಗೆ ಎಂಟ್ರಿಕೊಟ್ಟ ರಾಖಿ ಸಾವಂತ್ ಅಭಿಷೇಕ್ ಕುಮಾರ್ ಅವರನ್ನು ಎಳೆದಾಡುತ್ತಾ ಆತನನ್ನೇ ನೋಡುತ್ತಾ ನನಗೆ ಪತಿ ಸಿಕ್ಕಿದ್ರು ಎಂದಿದ್ದು, ಈ ವೇಳೆ ಅಭಿಷೇಕ್ ಗಾಬರಿಯಾಗಿದ್ದಾರೆ. ಈ ಸಂದರ್ಭದವನ್ನೇ ಚೆನ್ನಾಗಿ ಬಳಸಿಕೊಂಡು ಅಲ್ಲಿದ್ದ ಇತರ ಸ್ಪರ್ಧಿಗಳು ಅಭಿಷೇಕ್‌ನನ್ನು ಎಳೆದುಕೊಂಡು ಬಂದು ರಾಖಿ ಹತ್ತಿರ ಬಿಡುವ ಮೂಲಕ ಮತ್ತಷ್ಟು ಅಭಿಷೇಕ್ ಕಾಲೆಳೆದಿದ್ದಾರೆ.
ರಾಖಿ ಮಾತಿಗೆ ಕಕ್ಕಾಬಿಕ್ಕಿಯಾದ ನಟ ಅಭಿಷೇಕ್
ಈ ಶೋದಲ್ಲೇ ನಡೆದ ಅವಿಕಾ ಗೋರ್ ಮತ್ತು ಮಿಲಿಂದ್ ಚಾಂದ್ವಾನಿ ಅವರ ವಿವಾಹ ಸಂಭ್ರಮದ ಸಮಯದಲ್ಲಿಯೇ ರಾಖಿ ಸಾವಂತ್, ಅಭಿಷೇಕ್ ಅವರನ್ನು ನೋಡುತ್ತಾ ನಾಟಕೀಯವಾಗಿ ಮುಝೆ ಪತಿ ಮಿಲ್ ಗಯಾ ಹೈ! ಎಂದು ಘೋಷಿಸಿದರು. ಅವರ ಮಾತು ಕೇಳಿ ಸಾಮಾನ್ಯವಾಗಿ ಸರಾಗವಾಗಿ ಮಾತನಾಡುವ ಅಭಿಷೇಕ್ ಅವರು ತಬ್ಬಿಬ್ಬಾದರು. ಈ ವೇಳೆ ಮುಜುಗರವನ್ನು ನಿಯಂತ್ರಿಸಲು ಅಭಿಷೇಕ್ ತಾನು ತಮಾಷೆ ಮಾಡ್ತಿದ್ದೆ ನನಗೆ ಹುಡುಗಿ ಬೇಡ ಎಂದು ಹೇಳುತ್ತಿದ್ದರೆ ಅಲ್ಲಿದ್ದ ಹುಡುಗರು ಆತನನ್ನು ಎತ್ತಿಕೊಂಡು ಹೋಗುವುದನ್ನು ನೋಡಬಹುದು. ಇದು ಅಲ್ಲಿದ್ದ ಪ್ರೇಕ್ಷಕರನ್ನು ಇನ್ನಷ್ಟು ರಂಜಿಸಿದೆ.
ಇತ್ತ ರಾಖಿ ಸಾವಂತ್ ಅಂತು ಕೇವಲ ತಮ್ಮ ಮಾತಿಗೆ ಸೀಮಿತವಾಗದೇ ಎಂದಿನಂತೆ ಡ್ರಾಮಾ ಶುರು ಮಾಡಿದ್ದು, ಆತನ ಸುತ್ತಾ ಸುತ್ತಾ ಸಾಗುತ್ತಾ ಕುಬೂಲ್ ಹೈ (ನಾನು ಇದನ್ನು ಒಪ್ಪಿಕೊಳ್ಳುವೆ) ಎಂದು ಮೂರು ಮೂರು ಬಾರಿ ಹೇಳಿ ಆತನನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ರಾಖಿ ಅವರ ಡ್ರಾಮಾ ನೋಡಿ ಗಾಬರಿಯಾದ ಅಭಿಷೇಕ್ ಸುರಕ್ಷಿತ ಜಾಗವನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ. ನಂತರ ಅಲ್ಲಿನ ಡಾನ್ಸ್‌ಫ್ಲೋರ್‌ಗೆ ಬಂದರೂ ಅಲ್ಲಿಗೂ ಬಂದ ರಾಖಿ ಆತನನ್ನು ತಬ್ಬಿಕೊಳ್ಳುವುದಕ್ಕೆ ಮುಂದಾಗಿ ಕಾಲನ್ನು ಹಿಡಿದುಕೊಂಡಿದ್ದಾರೆ. ಈ ವೇಳೆ ರಾಖಿ ಆ ಕಡೆ ಬಂದ್ರೆ ಅಭಿಷೇಕ್ ಈ ಕಡೆ ಓಡುತ್ತಿದ್ದ ದೃಶ್ಯವೂ ಕಂಡು ಬಂತು ಜೊತೆಗೆ ಅಭಿಷೇಕ್‌ನ ಬಳಿ ಹೋಗುವ ರಭಸದಲ್ಲಿ ರಾಖಿ ಬಿದ್ದಿದ್ದು ಆಯ್ತು. ಒಟ್ಟಿನಲ್ಲಿ ರಾಖಿಯ ಡ್ರಾಮಾದಿಂದಾಗಿ ಈ ಪತಿಪತ್ನಿ ಔರ್ ಫಂಗಾಗೆ ಒಳ್ಳೆ ಮಜಾ ಬಂದಿದೆ.
ಇದೇ ಸಮಯವನ್ನು ಬಳಸಿಕೊಂಡ ಕಾಮಿಡಿಯನ್ ಮುನಾವರ್ ಅಭಿಷೇಕ್ ಕುಮಾರ್ ರಾಖಿಗೊಂದು ಶಯರಿ ಹೇಳಬೇಕು ಎಂದು ಕಾಲೆಳೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಭಿಷೇಕ್ ಕುಮಾರ್ ಇಲ್ಲ, ಡಾಕ್ಟರ್ ಬೇಡ ಎಂದಿದ್ದಾರೆ ಎಂದು ಹೇಳಿದ್ದಾರೆ. ಒಂದು ವೇಳೆ ಶಯರಿ ಹೇಳಿದ್ರೆ ಇಲ್ಲೇ ಸತ್ತೋಗ್ತೇನೆ ಎಂದು ಅಭಿಷೇಕ್ ಹೇಳ್ತಿದ್ರೆ. ಇತ್ತ ಸುಮ್ಮನಿರದ ರಾಖಿ ಸಾವಂತ್ ನನಗಾಗಿ ಶಯರಿ ಹಾಡಿ ಸಾಯುವಂತೆ ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ಈ ಎಪಿಸೋಡ್‌ಗೆ ರಾಖಿಯ ಹೈಡ್ರಾಮಾದಿಂದಾಗಿ ಮಜಾ ಬಂದಿದೆ.
ಇದನ್ನೂ ಓದಿ: ನಟಿ ಮದ್ವೆಯಲ್ಲಿ ಮಂಗಳಸೂತ್ರವೇ ಮಿಸ್, ಇಲ್ಲೂ ಬೇಕಾ ನಾಟಕವೆಂದ ನೆಟ್ಟಿಗರು?
ಇದನ್ನೂ ಓದಿ: ತಾನು ಸಾಕಿ ಬೆಳೆಸಿದ ಬೃಹತ್ ಅಶ್ವತ್ಥ ಮರಕ್ಕೆ ಕತ್ತರಿ ಹಾಕಿದ ಕಿಡಿಗೇಡಿಗಳು: ಕಣ್ಣೀರಿಟ್ಟ ವೃದ್ಧ ಮಹಿಳೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.