ಇದೇನ್ ’ಪುರಾಣ’ ಮಾಡ್ಕೊಂಡ್ರು ರಾಧಿಕಾ ಪಂಡಿತ್?

First Published 12, Sep 2018, 1:25 PM IST
Highlights

ನಿರೂಪ್ ಭಂಡಾರಿ- ರಾಧಿಕಾ ಪಂಡಿತ್ ಕಾಂಬಿನೇಶನ್ ಚಿತ್ರಕ್ಕೆ ಟೈಟಲ್ ಫಿಕ್ಸ್ | ಭಾರೀ ಕುತೂಹಲ ಮೂಡಿಸಿದೆ ಈ ಚಿತ್ರ | 

ಬೆಂಗಳೂರು (ಸೆ. 12): ನಿರೂಪ್ ಭಂಡಾರಿ ಮತ್ತು ರಾಧಿಕಾ ಪಂಡಿತ್ ಜತೆಯಾಗಿ ನಟಿಸುತ್ತಿರುವ ಚಿತ್ರಕ್ಕೆ ಇದೀಗ ಟೈಟಲ್ ಫಿಕ್ಸ್ ಆಗಿದೆ.

ಈ ಚಿತ್ರದ ಹೆಸರು ‘ಆದಿ ಲಕ್ಷ್ಮಿ ಪುರಾಣ’. ವಿ. ಪ್ರಿಯಾ ನಿರ್ದೇಶನದ, ರಾಕ್‌ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ ಚಿತ್ರವಿದು. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದ್ದು, ಇದೀಗ ಟೈಟಲ್ ಫಿಕ್ಸ್ ಆಗಿದೆ. ಪ್ರೀತಾ ಜಯರಾಮನ್ ಈ ಚಿತ್ರದ ಛಾಯಾಗ್ರಾಹಕಿ. 

ಸಿನಿಮಾ, ದಾಂಪತ್ಯದ ಗುಟ್ಟು ಬಿಚ್ಚಿಟ್ಟ ರಾಧಿಕಾ ಪಂಡಿತ್

ನಿರ್ಮಾಪಕ ರಾಕ್‌ಲೈನ್ ಪ್ರೊಡಕ್ಷನ್‌ನಲ್ಲೂ ಇದು ಮೊದಲ ಸಿನಿಮಾ. ‘ರಂಗಿತರಂಗ’ ಖ್ಯಾತಿಯ ನಿರೂಪ್ ಭಂಡಾರಿ ಕಾಂಬಿನೇಷ್‌ನಲ್ಲೂ ಇದು ಮೊದಲ ಸಿನಿಮಾ. ಇಂತಹ ಹಲವು ವಿಶೇಷತೆಗಳ ನಡುವೆ ಮದುವೆ ನಂತರ ಮತ್ತೆ ಕ್ಯಾಮೆರಾ ಎದುರಿಸಿ ಬಂದಿರುವ ರಾಧಿಕಾ ಹೇಳುವುದೇನು?

ಮದುವೆಯ ನಂತರ ಮೊದಲ ಬಾರಿ ರಾಧಿಕಾ ತೆರೆಮೇಲೆ; ಹೊಸ ಚಿತ್ರದ ಬಗ್ಗೆ ಹೇಳುವುದೇನು?

 

 

Last Updated 19, Sep 2018, 9:24 AM IST