ಸತೀಶ್ ನೀನಾಸಂಗೆ ಸಾಥ್ ಕೊಟ್ಟ ಪವರ್ ಸ್ಟಾರ್!

By Kannadaprabha News  |  First Published Jan 29, 2019, 10:25 AM IST

ನೀನಾಸಂ ಸತೀಶ್‌ ನಟನೆಯ ‘ಚಂಬಲ್‌’ ಚಿತ್ರ ಸಾಕಷ್ಟುಗಮನ ಸೆಳೆಯುತ್ತಿದೆ. ತಮಿಳು ನಟ ಧನುಷ್‌ ಚಿತ್ರದ ಟೀಸರ್‌ ಬಿಡುಗಡೆ ಮಾಡಿದರು. ಈಗದ ಕನ್ನಡದ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರು ಚಿತ್ರದ ಟ್ರೇಲರ್‌ ಬಿಡುಗಡೆ ಮಾಡುತ್ತಿದ್ದಾರೆ. 


ಈ ಹಿನ್ನೆಲೆ ಚಿತ್ರದ ಬಗ್ಗೆ ಸಾಕಷ್ಟುಕುತೂಹಲ ಮನೆ ಮಾಡಿದೆ. ಚಿತ್ರದ ಮೇಕಿಂಗ್‌ ಹಾಗೂ ನೀನಾಸಂ ಸತೀಶ್‌ ಅವರ ಲುಕ್‌ಗಳನ್ನು ನೋಡಿದ ಮೇಲೆ ಸ್ವತಃ ಸತೀಶ್‌ ಅವರಿಗೇ ಚಿತ್ರದ ಮೇಲಿನ ಭರವಸೆ ಹೆಚ್ಚಾಗಿದೆಯಂತೆ. ಹೀಗಾಗಿ ಪುನೀತ್‌ ಅವರನ್ನೇ ಚಿತ್ರದ ಟ್ರೇಲರ್‌ ಬಿಡುಗಡೆಗೆ ಅಹ್ವಾನಿಸಿದ್ದಾರೆ. ಜ.31ರಂದು ಬೆಳಗ್ಗೆ ಚಿತ್ರದ ‘ಚಂಬಲ್‌’ ಚಿತ್ರದ ಟ್ರೇಲರ್‌ ಬಿಡುಗಡೆ ನಡೆಯಲಿದೆ. ಜೇಕಬ್‌ ವರ್ಗೀಸ್‌ ನಿರ್ದೇಶನದ ಈ ಚಿತ್ರಕ್ಕೆ ಇತ್ತೀಚೆಗಷ್ಟೇ ಸೆನ್ಸಾರ್‌ ಆಗಿದ್ದು, ಯಾವುದೇ ಕಟ್‌ ಇಲ್ಲದೇ ಯು/ಎ ಸರ್ಟಿಫಿಕೆಟ್‌ ಸಿಕ್ಕಿದೆ.

ತಮಿಳು ನಟನಿಂದ ಕನ್ನಡ ಚಿತ್ರದ ಟೀಸರ್ ರಿಲೀಸ್!

Tap to resize

Latest Videos

ಈ ಹಿಂದೆ ಪುನೀತ್‌ ಅವರು ‘ಅಯೋಗ್ಯ’ ಚಿತ್ರದ ಹಾಡು ಬಿಡುಗಡೆ ಮಾಡಿದ್ದರು. ಈಗ ಟ್ರೇಲರ್‌ ಬಿಡುಗಡೆ ಮಾಡಲಿದ್ದಾರೆ. ಆ ಮೂಲಕ ಸತೀಶ್‌ ಅವರ ಮತ್ತೊಂದು ಗೆಲುವಿಗೆ ಅಪ್ಪು ಸಾಥ್‌ ನೀಡಿದ್ದಾರೆ. ‘ಒಬ್ಬ ಅಮಾಯಕ ಯುವಕ ಹೇಗೆ ದುಷ್ಟಕೂಟದಲ್ಲಿ ಸಿಲುಕಿಕೊಳ್ಳುತ್ತಾನೆ, ಹೇಗೆ ಆಚೆ ಬರುತ್ತಾನೆ ಎಂಬುದನ್ನ ರೋಮಾಂಚನಕಾರಿಯಾಗಿ ವಿವರಿಸುವ ಪ್ರಯತ್ನವೇ ಈ ‘ಚಂಬಲ್‌’ ಚಿತ್ರದ್ದು. ಇಂಥ ಪವರ್‌ಫುಲ್‌ ಚಿತ್ರದ ಟ್ರೇಲರ್‌ನ್ನು ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರು ಬಿಡುಗಡೆ ಮಾಡಿಕೊಡುತ್ತಿರೋದು ಸಂತಸದ ವಿಷಯ’ ಎನ್ನುತ್ತಾರೆ ನಟ ಸತೀಶ್‌. ರೋಜರ್‌ ನಾರಾಯಣ್‌, ಸೋನು ಗೌಡ, ಸರ್ದಾರ್‌ ಸತ್ಯ, ಅಚ್ಯುತ್‌ ಕುಮಾರ್‌ ಮುಂತಾದವರು ಚಿತ್ರದಲ್ಲಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ.

ಚಂಬಲ್ ಚಿತ್ರಕ್ಕೆ ಸೋನು ಗೌಡ ಭರ್ಜರಿ ಫೋಟೋಶೂಟ್ !

click me!