ಸುಮಲತಾರನ್ನು ಮದುವೆ ಆಗ್ತೀನಿ ಎಂದ ನಟನಿಗೆ ರೇಗಿಸಿದ ಅಂಬಿ ?

Published : Jun 11, 2019, 01:22 PM IST
ಸುಮಲತಾರನ್ನು ಮದುವೆ ಆಗ್ತೀನಿ ಎಂದ ನಟನಿಗೆ ರೇಗಿಸಿದ ಅಂಬಿ ?

ಸಾರಾಂಶ

  ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ಗೆ ಮೊದಲು ಪ್ರಪೋಸ್ ಮಾಡಿದ ಹುಡುಗ ಹಾಗೂ ಮೊದಲ ಕ್ರಶ್ ಯಾರೆಂದು ರಿವೀಲ್ ಆಗಿದೆ. ಈ ಹುಡುಗನಿಗೆ ಅಂಬಿ ಸಿಕ್ಕಾಗಲೆಲ್ಲಾ ಈ ಮಾತು ಹೇಳುತ್ತಿದ್ದರಂತೆ. ಯಾರು ಆ ನಟ ಏನು ಆ ಮಾತು ಇಲ್ಲಿದೆ ನೋಡಿ.

ಸುಮಾರು ಮೂವತ್ತು ವರ್ಷಗಳ ಕಾಲ ಚಿತ್ರರಂಗದಲ್ಲಿ ಮಿಂಚಿದ ಬಹುಭಾಷ ನಟಿ ಸುಮಲತಾ ಸಿನಿ ಜರ್ನಿ ಶುರು ಮಾಡಿದಾಗ ಈ ನಟ ಪುಟ್ಟ ಬಾಲಕನಾಗಿದ್ದಾಗ ಫಸ್ಟ್ ಪ್ರಪೋಸ್ ಮಾಡಿದ್ದರಂತೆ.

ಹೌದು ಸುಮಲತಾಗೆ ಫಸ್ಟ್ ಪ್ರಪೋಸ್ ಮಾಡಿದ್ದು ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಸುಮಲತಾ ಮೊದಲ ಸಿನಿಮಾ 'ರವಿಚಂದ್ರನ್' ಮಾಡುವಾಗ ಅವರು 16 ವರ್ಷದ ಟೀನೆಜ್ ಹುಡುಗಿ. ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್‌ಗೆ 6 ವರ್ಷವಷ್ಟೇ. ಶೂಟಿಂಗ್ ಮುಗಿಸಿಕೊಂಡು ಇಬ್ಬರು ಸೆಟ್‌ನಲ್ಲೇ ಆಟವಾಡುತ್ತಾ ಸಮಯ ಕಳೆಯುತ್ತಿದ್ದರು.

ಸುಮಲತಾ ಮೇಲೆ ಅಂಬಿಗೆ ಲವ್ವಾಗಿದ್ದು ಹೇಗೆ ಗೊತ್ತಾ?

 

ಒಂದು ದಿನ ಶೂಟಿಂಗ್‌ ನಂತರ ಪುನೀತ್ ಮನೆಗೆ ಹೋಗಿ 'ನಾನು ಮದುವೆ ಆಗುವುದಾದರೆ ಅದು ಸುಮಲತಾರನ್ನೇ ಎಂದು ನಿರ್ಧರಿಸಿದ್ದೇನೆ' ಎಂದು ಹೇಳಿಕೊಂಡಿದ್ದಾರೆ. 'ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ ನಾನು' ಎಂಬ ಹಾಡನ್ನು ಕೇಳಿ ಪ್ರಪೋಸ್ ಮಾಡಿದ್ದು ಎಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸುಮಲತಾ ನೆನಪಿಸಿಕೊಂಡಿದ್ದಾರೆ.

ಅಂಬರೀಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಮಲತಾ ಈ ವಿಚಾರವನ್ನು ಅಂಬಿಯೊಂದಿಗೆ ಹಂಚಿಕೊಂಡಿದ್ದರಂತೆ. ಅಂದಿನಿಂದ ಪುನೀತ್ ಅಂಬಿಯನ್ನು ಮೀಟ್ ಮಾಡಿದಾಗಲೆಲ್ಲಾ 'ನನ್ನ ಮಗನೇ ನೀನು ಅವಾಗಲೇ ನನ್ನ ಹೆಂಡತಿನಾ ಮದುವೆ ಆಗ್ತೀನಿ ಅಂತ ಹೇಳಿದ್ಯಾ' ಎಂದು ರೇಗಿಸುತ್ತಿದ್ದರಂತೆ.

ಇನ್ನು 13 ವರ್ಷವಿದ್ದಾಗ ಸುಮಲತಾ 'ಮನ್ಮದ ಲೀಲಾ' ಚಿತ್ರ ನೋಡಿ ಕಮಲ್ ಹಾಸನ್‌ಗೆ ಫುಲ್ ಫಿದಾ ಆಗಿದ್ದರಂತೆ. ಸುಮಲತಾ ಪುಸ್ತಕವೊಂದರಲ್ಲಿ ಕಮಲ್ ಹಾಸನ್ ಫೋಟೋ ಅಂಟಿಸಿ ಇಟ್ಟುಕೊಂಡಿದ್ದರಂತೆ!

ಮಂಡ್ಯದ ಹೆಣ್ಣು ಸುಮಲತಾಗೆ ಇತ್ತು ಇವರ ಮೇಲೆ ಕ್ರಶ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?