
ಗಿರೀಶ್ ಕಾರ್ನಾಡ್ ಪುಣೆ ಫಿಲ್ಮ್ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಹೇಮಾಮಾಲಿನಿ ತಾಯಿ ಜಯಾ ಚಕ್ರವರ್ತಿ ‘ಸ್ವಾಮಿ’ ಚಿತ್ರ ನಿರ್ಮಿಸುತ್ತಿದ್ದರು. ಈ ಚಿತ್ರದಲ್ಲಿ ನಟಿಸಲು ಕಾರ್ನಾಡರಿಗೆ ಭಾರಿ ಒತ್ತಾಯ ಮಾಡುತ್ತಿದ್ದರು.
ಕಡೆ ನಾಟಕ ಬರೆದು ಸಾವಿನ ಸುಳಿವು ನೀಡಿದ್ದ ಕಾರ್ನಾಡ್ !
ಕಾರ್ನಾಡರಿಗೆ ಪಾತ್ರ ಕೊಡುವುದು ಮತ್ತು ಅವರನ್ನು ತನ್ನ ಮಗಳು ಹೇಮಾಮಾಲಿನಿ ಜತೆ ಮದುವೆ ಮಾಡುವುದು ಜಯಾ ಐಡಿಯಾ ಆಗಿತ್ತು. ಯಾಕೆಂದರೆ ಆಗ ಹೇಮಾಮಾಲಿನಿ ಹಾಗೂ ಧರ್ಮೇಂದ್ರ ಪ್ರೇಮಿಸುತ್ತಿದ್ದರು. ಧರ್ಮೇಂದ್ರರಿಗೆ ಆಗಲೇ ಮದುವೆಯಾಗಿದ್ದರಿಂದ ಅವರ ಜತೆ ಮದುವೆ ಜಯಾಗೆ ಇಷ್ಟವಿರಲಿಲ್ಲ.
ಜಯಾರಿಗೆ ಕಾರ್ನಾಡ್ ಅಂದ್ರೆ ಇಷ್ಟ. ಹೇಮಾಮಾಲಿನಿಯವರಿಗೂ ಕಾರ್ನಾಡರ ಮೇಲೆ ಪ್ರೀತಿ. ಅದನ್ನು ಹೊರಹಾಕಿದ್ದು ‘ರತ್ನದೀಪ್’ ಚಿತ್ರದ ಸಮಯದಲ್ಲಿ. ಆ ಚಿತ್ರಕ್ಕೆ ಕಾರ್ನಾಡ್ ಹಾಗೂ ಹೇಮಾಮಾಲಿನಿ ಜೋಡಿ.
ಬಹಳ ದಿನಗಳ ನಂತರ ಟ್ವಿಟರ್‌ಗೆ ವಾಪಸ್ಸಾದ ಶೃತಿ ಹರಿಹರನ್
ಚಿತ್ರೀಕರಣದ ಸಂದರ್ಭದಲ್ಲಿ ಹೇಮಾಮಾಲಿನಿ ಅವರು ಕಾರ್ನಾಡರಿಗೆ, ‘ನಾವಿಬ್ಬರು ಮದುವೆ ಆಗುತ್ತಿದ್ದೇವೆ ಎಂದು ಪತ್ರಿಕೆಗಳಲ್ಲಿ ಸುದ್ದಿ ಬರುತ್ತಿದೆ. ಎಲ್ಲರು ಹಾಗೆ ಅಂದುಕೊಳ್ಳುತ್ತಿದ್ದಾರೆ’ ಎಂದಿದ್ದರು. ಕಾರ್ನಾಡರದು ನೇರ ಮಾತು. ‘ಥ್ಯಾಂಕ್ಸ್, ಪತ್ರಿಕೆಗಳಲ್ಲಿ ಏನು ಬರುತ್ತಿದೆ ಎನ್ನುವುದು ನನಗೆ ಮುಖ್ಯವಲ್ಲ. ನಾನು ಮದುವೆ ಆಗುವ ಹುಡುಗಿ ಸರಸ್ವತಿ ಅಮೆರಿಕದಲ್ಲಿದ್ದಾಳೆ’ ಎಂದರು. ಹೇಮಾಮಾಲಿನಿಯ ಪ್ರೇಮ ನಿವೇದನೆ, ಆಕೆಯ ತಾಯಿ ಜಯಾ ಚಕ್ರವರ್ತಿಯ ಪ್ರಪೋಸಲ್ ಅನ್ನು ಒಂದೇ ಮಾತಲ್ಲಿ ತಿರಸ್ಕರಿಸಿಬಿಟ್ಟರು ಕಾರ್ನಾಡ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.