
Venkat K Narayana-Yash-Radhika Pandit: ನಿನ್ನೆ, ಅಂದರೆ 08 ಆಗಸ್ಟ್ 2026ರಂದು ಬಹುನಿರೀಕ್ಷೆಯ ಟಾಕ್ಸಿಕ್ ಟ್ರೇಲರ್ ಬಿಡುಗಡೆಯಾಗಿ ಜಗತ್ತಿನಾದ್ಯಂತ ಭಾರೀ ಹವಾ ಸೃಷ್ಟಿಸಿರುವುದು ಗೊತ್ತೇ ಇದೆ. ನಿನ್ನೆ ಬೆಂಗಳೂರಿನ ಕಪಾಲಿ ಮಾಲ್‌ನ ಎಎಂಬಿ ಸಿನಿಮಾಸ್ ಹಾಲ್‌ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ, ಟಾಕ್ಸಿಕ್ ಚಿತ್ರದ ಇಡೀ ಟೀಮ್ ಹಾಜರಾಗಿತ್ತು. ಟ್ರೇಲರ್ ಲಾಂಚ್ ಜೊತೆಗೆ, ಟೀಮ್‌ನ ಸಾಕಷ್ಟು ಜನರು ವೇದಿಕೆಯ ಮೇಲೆ ಮಾತನ್ನಾಡಿದ್ದಾರೆ. ಅವರಲ್ಲಿ ನಿರ್ಮಾಪಕರಾದ ವೆಂಕಟ್ ಕೆ ನಾರಾಯಣ ವಾರು ಆಡಿರುವ ಮಾತು ಸಾಕಷ್ಟು ಜನರಿಗೆ ಅಚ್ಚರಿ ತಂದಿತು. ಅದರೆ, ಬಳಿಕ ಅವರು ಕೊಟ್ಟ ಕ್ಲಾರಿಟಿ ಎಲ್ಲರಿಗೂ ಅವರ ಮಾತಿನ ಒಳಮರ್ಮ ಅರ್ಥವಾಗುವಂತೆ ಮಾಡಿತು. ಹಾಗಿದ್ದರೆ ನಿರ್ಮಾಪಕ ವೆಂಕಟ್ ಕೆ ನಾರಾಯಣ ಅವರು ಹೇಳಿರುವ ಮಾತೇನು? ಈ ಸ್ಟೊರಿ ನೋಡಿ..
ನಿರ್ಮಾಪಕ 'ಕೆವಿಎನ್' ಸಂಸ್ಥೆಯ ಮಾಲೀಕರಾದ ವೆಂಕಟ್ ಅವರು ಯಶ್‌ಗಿಂತ ಮೊದಲು 'ರಾಧಿಕಾ ಪಂಡಿತ್' ಅವರಿಗೆ ಧನ್ಯವಾದ ಹೇಳಿದರು. ಎಲ್ಲರೂ ಅಚ್ಚರಿ ಪಡುತ್ತಿದ್ದಂತೆ ವೆಂಕಟ್ ಅವರು 'ಹೌದು ನಾನು ಉದ್ದೇಶಪೂರ್ವಕವಾಗಿಯೇ ಯಶ್ ಬದಲು ರಾಧಿಕಾ ಅವರಿಗೇ ಧನ್ಯವಾದ ಹೇಳಿದ್ದೇನೆ. ಕಾರಣ, ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿಯೇ ನಾನು ಮೊಟ್ಟಮೊದಲ ಬಾರಿಗೆ ಯಶ್ ಅವರನ್ನು ಭೇಟಿ ಆಗಿದ್ದು. ಅಂದು ನಾನು ಆ ಹುಟ್ಟುಹಬ್ಬಕ್ಕೆ ಬರದೇಹೋಗಿದ್ದರೆ ಬಹುಶಃ ಯಶ್ ಜೊತೆ ಸಿನಿಮಾ ಮಾಡುವನನ್ನ ಈ ಕನಸು ಇಷ್ಟು ಬೇಗ ನನಸಾಗುತ್ತಿರಲಿಲ್ಲ. ಈ ಕಾರಣಕ್ಕೆ ನಾನು ಯಶ್‌ಗಿಂತ ಮೊದಲು ಅವರ ಪತ್ನಿ ರಾಧಿಕಾಗೆ ಧನ್ಯವಾದ ಹೇಳುತ್ತೇನೆ' ಎಂದಿದ್ದಾರೆ.
ಆ ಬಳಿಕ ವೆಂಟಕ್ ನಾರಾಯಣ ಅವರು ಯಶ್ ಅವರಿಗೂ ಧನ್ಯವಾದ ಹೇಳಿದ್ದಾರೆ. ಈ ಸಿನಿಮಾ ಇಷ್ಟೊಂದು ರಿಚ್ ಆಗಿ, ಜಗತ್ತಿಗೇ ರೀಚ್ ಆಗುವಂತೆ ಆಗಲು ಸ್ವತಝ ಯಶ್ ಅವರ ಅಪಾರ ಪರಿಶ್ರಮ ಹಾಗೂ ಕೆಲಸದ ಮೇಲಿನ ಬದ್ಧತೆ ಕಾರಣ ಎಂದಿದ್ದಾರೆ. ನಿರ್ದೇಶಕಿ ಗೀತು ಮೋಹನ್‌ದಾಸ್ ಅವರಿಗೂ ವಿಶೇಷ ಧನ್ಯವಾದ ಹೇಳಿದ್ದಾರೆ. ಬಳಿಕ ಅವರು, ನಟಿ ನಯನತಾರಾ, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾನಿ, ಹುಮಾ ಖುರೇಶಿ ಹಾಗೂ ತಾರಾ ಸುತಾರಿಯಾ, ವಿವೇಕ್ ಒಬೆರಾಯ್, ಸುದೇವ್ ನಾಯರ್ ಸೇರಿದಂತೆ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರಿಗೆ, ಕೊನೆಗೆ ಮತ್ತೊಮ್ಮೆ ನಟ ಯಶ್ ಹಾಗೂ ರಾಧಿಕಾ ಪಂಡಿತ್ ಅವರಿಗೆ ವಿಶೇಷವಾದ ಧನ್ಯವಾದ ಹೇಳಿದ್ದಾರೆ.
ಅಂದಹಾಗೆ, ಟಾಕ್ಸಿಕ್ ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಚಿತ್ರೀಕರಿಸಲಾಗಿದ್ದು, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಆವೃತ್ತಿಗಳಲ್ಲಿಯೂ ಬಿಡುಗಡೆಯಾಗಲಿದೆ. 26 ಆಗಸ್ಟ್ 2026 ರಂದು ಈ ಸಿನಿಮಾ ಜಗತ್ತಿನಾದ್ಯಂತ ತೆರೆಗೆ ಬರಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.