
ಕೆ.ಮಂಜು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರ 'ಪಡ್ಡೆಹುಲಿ' ಮೂಲಕ ಮಗ ಶ್ರೇಯಸ್‌ರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಹೀರೂನನ್ನು ಪರಚಯಿಸುವ ಹಾಡಿನಲ್ಲಿ ವಿಷ್ಣು ದಾದ ಮಿಂಚಲಿದ್ದಾರೆ.
ಈ ಹಾಡನ್ನು ಫೆಬ್ರವರಿ 2ರಂದು ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ವಿಷ್ಣು ಅಭಿಮಾನಿಗಳು ಮಧ್ಯಾಹ್ನ 2 ಗಂಟೆಗೆ ಬಿಡುಗಡೆ ಮಾಡಲಿದ್ದಾರೆ. ಈ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರೂ ಪಾಲ್ಗೊಳ್ಳಬಹುದು.
ಸಾಹಸ ಸಿಂಹನ ಜರ್ನಿಗೊಂದು ರ‍್ಯಾಪ್ ಸಲಾಂ ಮಾಡಿದ ‘ಪಡ್ಡೆಹುಳಿ’
ಕೆಲವು ದಿನಗಳ ಹಿಂದೆ 'ಪಡ್ಡೆಹುಲಿ' ಚಿತ್ರದಲ್ಲಿರುವ ರ‍್ಯಾಂಪ್ ಹಾಡೊಂದನ್ನು ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಥೇಟ್ 'ನಾಗರಹಾವು' ಚಿತ್ರದ ವಿಷ್ಣು ಗೆಟಪ್ಪಿನಂತೆಯೇ ಶ್ರೇಯಸ್ ನಟಿಸಿದ್ದಾರೆ. ಈ ಹಾಡೂ ಹಿಟ್ ಆಗುತ್ತದೆ. ಚಿತ್ರವೂ 100 ದಿನ ಪೂರೈಸುವುದರಲ್ಲಿ ಅನುಮಾನವೇ ಇಲ್ಲ ಎನ್ನುವುದು ಕನ್ನಡ ಚಿತ್ರಾಭಿಮಾನಿಗಳ ಅಭಿಮತ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.