ಒಂದಷ್ಟು ವಿಚಾರವನ್ನು ಬಿಟ್ಟು ಕೊಟ್ಟೂ ಮತ್ತಷ್ಟು ಕುತೂಹಲ ಹುಟ್ಟಿಸೋದು ನಿಜವಾದ ಕಸುಬುದಾರಿಕೆಯ ಲಕ್ಷಣ. ಸಿನಿಮಾ ವಿಚಾರದಲ್ಲಿ ಇದು ಯಶಸ್ಸಿನ ಸೂತ್ರವೂ ಹೌದು. ಅದನ್ನು ಅನುಕ್ತಾ ಚಿತ್ರ ತಂಡ ಸರಿಕಟ್ಟಾಗಿಯೇ ಪರಿಪಾಲಿಸಿಕೊಂಡು ಬರುತ್ತಿದೆ.
ಕೊಲೆಯ ಸುತ್ತಾ ಜರುಗುವ ಥ್ರಿಲ್ಲರ್ ಕಥೆ ಹೊಂದಿದ್ದರೂ ಒಟ್ಟಾರೆಯಾಗಿ ತುಳು ನಾಡಿನ ಸಮಸ್ತ ಸಂಸ್ಕøತಿಯತ್ತಲೂ ಬೆಳಕು ಚೆಲ್ಲಿದೆ ಎಂಬುದು ಅನುಕ್ತದ ಪ್ರಧಾನ ಆಕರ್ಷಣೆ. ಭೂತ ಕೋಲವನ್ನೂ ಕೂಡಾ ದರೆ ದೃಷ್ಯಾವಳಿಗಳಲ್ಲಿ ಸೆರೆ ಹಿಡಿಯಲಾಗಿದೆಯಂತೆ. ಇದಲ್ಲದೇ ಇದುವರೆಗೂ ಕ್ಯಾಮೆರಾ ಕಣ್ಣಿಗೆ ಬೀಳದ ಸೂಕ್ಷ್ಮ ವಿಚಾರಗಳನ್ನೂ ಅನುಕ್ತ ಮೂಲಕ ತೋರಿಸಲಾಗಿದೆಯಂತೆ. ಇದೂ ಕೂಡಾ ಅನುಕ್ತದ ಪ್ರಧಾನ ಅಂಶ.
ಅನುಕ್ತ: ಸಂಗೀತ ಭಟ್ ಪಾತ್ರ ಕಮಾಲ್ ಮಾಡುತ್ತಾ?
ಹರೀಶ್ ಬಂಗೇರ ನಿರ್ಮಾಣದ ಈ ಸಿನಿಮಾವನ್ನು ಅಶ್ವತ್ಥ್ ಸ್ಯಾಮಯವಲ್ ನಿರ್ದೇಶನ ಮಾಡಿದ್ದಾರೆ. ಇದೊಂದು ಕೊಲೆಯ ಸುತ್ತಾ ನಡೆಯುವ ಥ್ರಿಲ್ಲರ್ ಶೈಲಿಯ ಕಥೆ ಹೊಂದಿರೋ ಚಿತ್ರ. ಬಹುತೇಕ ದಕ್ಷಿಣ ಕನ್ನಡ ಜಿಲ್ಲೆಯ ಸುಂದರ ಲೊಕೇಶನ್ನುಗಳಲ್ಲಿಯೇ ಇದಕ್ಕೆ ಚಿತ್ರೀಕರಣ ನಡೆಸಲಾಗಿದೆಯಂತೆ. ಆದರೆ ಈ ಕೊಲೆಗೂ ಭೂತ ಕೋಲಕ್ಕೂ ಸಂಬಂಧವೇನು ಎಂಬ ವಿಚಾರ ಪ್ರೇಕ್ಷಕರ ಮನಸು ಕೊರೆಯುತ್ತಿದೆ. ಇದಕ್ಕೆ ಶೀಘ್ರದಲ್ಲಿಯೇ ಉತ್ತರವೂ ಸಿಗಲಿದೆ!
ಅನುಕ್ತ: ಇಲ್ಲಿ ಹೇಳಲಾಗದ್ದೇನೋ ಇದೆ!