ಕನ್ನಡವೇ ನಮ್ಮಮ್ಮ ಎನ್ನುತ್ತಾ ಸಾಹಸ ಸಿಂಹರಿಗೆ ತಲೆಬಾಗಿದ ‘ಪಡ್ಡೆ ಹುಲಿ’

Published : Feb 04, 2019, 08:32 PM ISTUpdated : Feb 04, 2019, 08:41 PM IST
ಕನ್ನಡವೇ ನಮ್ಮಮ್ಮ ಎನ್ನುತ್ತಾ ಸಾಹಸ ಸಿಂಹರಿಗೆ ತಲೆಬಾಗಿದ ‘ಪಡ್ಡೆ ಹುಲಿ’

ಸಾರಾಂಶ

ಕನ್ನಡ ಚಿತ್ರರಂಗ ಚಂದನವನಕ್ಕೆ ಹೊಸ ಹೊಸ ಪ್ರತಿಭೆಗಳು ಕಾಲಿಟ್ಟು ತಮ್ಮ ಪ್ರಯೋಗಳ ಮೂಲಕ ಗಮನ ಸೆಳೆಯುತ್ತಾರೆ.  ಪ್ರತಿಭೆಗೆ ಜನ ಮನ್ನಣೆ  ನೀಡಿದರೆ ಸೂಪರ್ ಸ್ಟಾರ್‌ಗಳಾಗಿ ಮಿಂಚುತ್ತಾರೆ. ಅಂಥದ್ದೆ ಒಂದು ಪ್ರತಿಭೆ ಹೊಸ ಪ್ರಯೋಗ ಮಾಡಿದೆ. ಯುವ ಪ್ರತಿಭೆ ಶ್ರೇಯಸ್  ಪಡ್ಡೆಹುಲಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದು  ಯುಟ್ಯೂಬ್‌ನಲ್ಲಿ ಚಿತ್ರದ ಹಾಡು ಬಿಡುಗಡೆಯಾಗಿದೆ.

ಬೆಂಗಳೂರು[ಫೆ.04]  ಕನ್ನಡತನವನ್ನು ಸಾರುವ, ಸಾಹಸ ಸಿಂಹ ವಿಷ್ಣುವರ್ಧನ್ ಅವರ ನಾಗರಹಾವು ಚಿತ್ರ ನೆನಪಿಸುವ, ಚಿತ್ರದುರ್ಗದ ಕಲ್ಲಿನ ಕೋಟೆಯ ಇತಿಹಾಸ ಹೇಳುವ ಹಾಡೊಂದನ್ನು ಯುಟ್ಯೂಬ್‌ನಲ್ಲಿ ನೋಡಿ ಆನಂದಿಸಬಹುದಾಗಿದೆ.

ಸಾಹಸ ಸಿಂಹ ವಿಷ್ಣುವರ್ಧನ್ ಆರಾಧಕರಲ್ಲಿ ನಿರ್ಮಾಪಕ ಕೆ. ಮಂಜು ಒಬ್ಬರು. ಮಂಜು ಅವರ ಪುತ್ರ  ಶ್ರೇಯಸ್  'ಪಡ್ಡೆಹುಲಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ.

ವಿಷ್ಣು ಸ್ಮಾರಕ ಎಲ್ಲಿ : ಫೈನಲ್ ನಿರ್ಧಾರ ತಿಳಿಸಿದ ಅನಿರುದ್ಧ್

ಗುರು ದೇಶಪಾಂಡೆ ನಿರ್ದೇಶನದಲ್ಲಿ ಹುಲಿ ಮೂಡಿಬರುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಬ್ಯಾನರ್‌ನ ಪಿಆರ್‌ಕೆ ಆಡಿಯೋದ ಮೂಲಕ ಹಾಡು ಲಾಂಚ್ ಮಾಡಲಾಗಿದೆ. ಪುನೀತ್, ಉಪೇಂದ್ರ, ರಕ್ಷಿತ್ ಶೆಟ್ಟಿ, ಶರಣ್ ಸೇರಿದಂತೆ ಅನೇಕರು ಶ್ರೇಯಸ್‌ಗೆ ಶುಭ ಕೋರಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಟ ಪ್ರಭಾಸ್ ಅವರದ್ದು ಅಂಬಾನಿಗಿಂತಲೂ ಶ್ರೀಮಂತ ಕುಟುಂಬ; ರಾಜಮನೆತದ ಲಕ್ಷ ಎಕರೆ ಭೂಮಿಯನ್ನ ದಾನ ಮಾಡಿದ್ದೇ ಹೆಚ್ಚು!
Bhagyalakshmi Serial: ಭಾಗ್ಯ ಯಾರ ಜೊತೆ ಸಂಸಾರ ಮಾಡ್ಬೇಕು? ಜ್ಯೋತಿಷಿ ಮಾತು ಕೇಳಿ ಕುಸುಮಾಗೆ ದಿಗ್ಭ್ರಮೆ!