
ಕಣ್ಸನ್ನ ಚೆಲುವೆ ಪ್ರಿಯಾ ವಾರಿಯರ್ ಈಗ ಬಾಲಿವುಡ್ ಕಡೆ ಮುಖ ಮಾಡಿದ್ದಾರೆ. ಅದರಲೂ ಏವರ್‌ಗ್ರೀನ್ ನಟಿ ಶ್ರೀದೇವಿ ಜೀವನಾಧಾರಿತ ಚಿತ್ರದ ಮೂಲಕ. ಆದರೆ ಟೀಸರ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ.
'ಒರು ಅಡಾರ್ ಲವ್' ಚಿತ್ರದಲ್ಲಿ ಕಣ್ಣು ಹೊಡೆದು, ಪಡ್ಡೆ ಹುಡುಗರ ನಿದ್ದೆಗೆಡಿಸಿದ ಪ್ರಿಯಾ ರಾತ್ರೋರಾತ್ರಿ ನ್ಯಾಷನಲ್ ಕ್ರಷ್ ಆಗಿದ್ದರು. ಇದೀಗ ಅದೇ ವೇದಿಕೆಯಲ್ಲಿ ಛೀ...ಥೂ ಎಂದು ಬಯ್ಯಿಸಿಕೊಳ್ಳುತ್ತಿದ್ದಾರೆ. 'ಶ್ರೀದೇವಿ ಬಂಗ್ಲೋ' ಚಿತ್ರದ ಟೀಸರ್ ಬಾತ್ ಟಬ್ ಲುಕ್ ಇದೀಗ ಟೀಕೆಗೆ ಗುರಿಯಾಗಿದೆ.
ಕಣ್ಸನ್ನೆಗೆಲ್ಲ ಕಂಪ್ಲೆಂಟ್ ದಾಖಲಿಸೋಕಾಗುತ್ತಾ? ಸುಪ್ರೀಂ ಪ್ರಶ್ನೆ
ಈ ರೀತಿ ಚಿತ್ರೀಕರಿಸುವುದನ್ನು ಚೀಪ್ ಟ್ಯಾಕ್ಟಿಕ್ ಎಂದು ಶ್ರೀದೇವಿ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಪ್ರಿಯಾ ಜನಪ್ರಿಯತೆಯೂ ಕುಸಿಯುತ್ತಿದೆ. ಕಣ್ಣು ಹೊಡೆದ ಒಂದೇ ರಾತ್ರಿಯಲ್ಲಿ ದಕ್ಕಿಸಿಕೊಂಡ ಸುಮಾರು 50 ಸಾವಿರ ಇನ್‌ಸ್ಟಾಗ್ರಾಮ್ ಫಾಲೋಯರ್ಸ್ ಕೂಡ ಕಡಿಮೆ ಆಗಿದ್ದಾರೆ.
ಶ್ರೀದೇವಿ ಪಾತ್ರದಾರಿಯಾಗಿ ನಡೆದಾಡಿಕೊಂಡು ಧೂಮಪಾನ ಮಾಡಿದ್ದು, ಕೇರಳದ ಅಭಿಮಾನಿಗಳಿಗೆ ಅರಗಿಸಿಕೊಳ್ಳುವುದು ಕಷ್ಟವಾಗಿದೆ. ಈ ಟೀಸರ್ ಜನರನ್ನು ಮೆಚ್ಚಿಸುವಲ್ಲಿ ವಿಫಲವಾಗಿದೆ. ಶ್ರೀದೇವಿ ಸಾವಿನ ಸುದ್ದಿ ಹಿಡಿದುಕೊಂಡು ಜನರ ಮನಸ್ಸಿಗೆ ಹತ್ತಿರವಾಗುವಂಥ ದುಷ್ಟಸಾಹಸಕ್ಕೆ ಕೈ ಹಾಕಿರುವ ನಿರ್ದೇಶಕನಿಗೂ ಜನರೀಗ ಉಗಿಯುತ್ತಿದ್ದಾರೆ.
ದುಬೈನ ಖಾಸಗಿ ಹೊಟೇಲ್‌ವೊಂದರ ಬಾತ್‌ಟಬ್‌ನಲ್ಲಿ ಕೊನೆಯುಸಿರೆಳೆದು ತೇಲುತ್ತಿದ್ದ ಶ್ರೀದೇವಿ ದೇಹದಂತೆ ಮಲಗಿದ ಪ್ರಿಯಾ ವಾರಿಯರ್ ಹಾಗೂ ಚಿತ್ರ ನಿರ್ದೇಶಕನ ವಿರುದ್ಧ, ಶ್ರೀದೇವಿ ಪತಿ ಬೋನಿ ಕಪೂರ್ ಈಗಾಗಲೇ ಕೋರ್ಟ್ ಮೆಟ್ಟಿಲೇರಿದ್ದಾರೆ.
ತಮ್ಮ ಸಂಬಂಧಿಕರ ಮದುವೆಗೆ ತೆರಳಿದ್ದ ಸೌಂದರ್ಯದ ಖನಿ ಶ್ರೀದೇವಿ ದುಬೈನ ಹೊಟೇಲ್‌ವೊಂದರ ಬಾತ್‌ಟಬ್‌ನಲ್ಲಿ ಬಿದ್ದು, ಕಳೆದ ವರ್ಷ ಫೆ.24ಕ್ಕೆ ಕೊನೆಯುಸಿರೆಳೆದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.