ಜಗ್ಗೇಶ್ ಹಾಗೂ ಸುಧಾರಾಣಿ ಅಭಿನಯದ ‘ಪ್ರೀಮಿಯರ್ ಪದ್ಮಿನಿ’ ಚಿತ್ರದ ಎರಡನೇ ಹಾಡು ಬಿಡುಗಡೆ ಆಗಿದೆ.
‘ನಾ ಹುಡುಕೋ ನಾಳೆ... ’ ಎಂಬ ಹಾಡನ್ನು ಬರೆದಿದ್ದು ಡಾ. ನಾಗೇಂದ್ರ ಪ್ರಸಾದ್. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಸರಿಗಮಪ ಖ್ಯಾತಿಯ ನಿಹಾಲ್ ಕಂಠ ಸಿರಿಯಲ್ಲಿ ಮೂಡಿ ಬಂದಿರುವ ಈ ಹಾಡನ್ನು ಇತ್ತೀಚೆಗಷ್ಟೇ ನಟ ರಕ್ಷಿತ್ ಶೆಟ್ಟಿಲಾಂಚ್ ಮಾಡಿದರು.
ಮಧುಬಾಲಾ ಜೊತೆ ಪ್ರೀಮಿಯರ್ ಪದ್ಮಿನಿ ಹತ್ತಿದ ಜಗ್ಗೇಶ್!
ಇದೇ ವೇಳೆ ಅವರು ಮಾತನಾಡಿ, ‘ಚಿತ್ರದ ಶೀರ್ಷಿಕೆ ಮುದ್ದಾಗಿದೆ. ಒಂದು ಕಾಲದಲ್ಲಿ ನನಗೂ ಆ ಕಾರಿನ ಮೇಲೆ ಮೋಹವಿತ್ತು. ಅಷ್ಟೊಂದು ಜನಪ್ರಿಯತೆ ಹೊಂದಿದ್ದ ಕಾರು ಅದು. ಅದರ ಹೆಸರಲ್ಲಿ ಸಿನಿಮಾ ಬರುತ್ತಿದೆ ಎನ್ನುವುದ ನನಗೂ ಕುತೂಹಲವಿದೆ. ನಾಗೇಂದ್ರ ಪ್ರಸಾದ್ ಒಳ್ಳೆಯ ಹಾಡನ್ನು ಕೊಟ್ಟಿದ್ದಾರೆ. ಕೇಳುತ್ತ ಮೈ ಮರೆಯುವಷ್ಟುಸೊಗಸಾದ ಸಾಹಿತ್ಯ, ಅದಕ್ಕೆ ಅಷ್ಟೇ ಹಿತವಾದ ಸಂಗೀತ ಮತ್ತು ಧ್ವನಿಯಿದೆ’ ಎಂದರು. ಶ್ರುತಿ ನಾಯ್ಡು ನಿರ್ಮಾಣದಲ್ಲಿ ರಮೇಶ್ ಇಂದಿರಾ ನಿರ್ದೇಶಿಸಿದ ಈ ಚಿತ್ರಕ್ಕೆ ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದು, ರಿಲೀಸ್‌ಗೆ ರೆಡಿ ಆಗಿದೆ. ಅಣ್ಣಯ್ಯ ಖ್ಯಾತಿಯ ಬಹುಭಾಷೆ ತಾರೆ ಮಧುಬಾಲ ಕೂಡ ಈ ಚಿತ್ರದ ಮತ್ತೊಂದು ಆಕರ್ಷಣೆ.
ಕ್ಯಾಮೆರಾ ಮುಂದೆ ಜಗ್ಗೇಶ್ ಭಾವುಕರಾಗಿದ್ದು ಯಾಕೆ?