
ತಮಿಳು ಸೂಪರ್ ಹಿಟ್ ಚಿತ್ರ ‘96’ ಇದೀಗ ಕನ್ನದಲ್ಲಿ ರಿಮೇಕ್ ಆಗುತ್ತಿದ್ದು, ಈ ಚಿತ್ರದ ಮುಖ್ಯ ಪಾತ್ರವೊಂದಕ್ಕೆ ಕಿರುತೆರೆಯ ನಟಿಯೊಬ್ಬರು ಆಯ್ಕೆಯಾಗಿರುವುದು ವಿಶೇಷ.
ಕನ್ನಡಲ್ಲಿ ‘99’ ಎಂಬ ಟೈಟಲ್ ಇದ್ದು, ಈಗಾಗಲೇ ಚಿತ್ರೀಕರಣ ಶುರುವಾಗಿದೆ. ತಮಿಳಿನ 96 ಚಿತ್ರದಲ್ಲಿ ಎಲ್ಲರ ಗಮನ ಸೆಳೆದ ಪಾತ್ರವೇ ಜೂನಿಯರ್ ಜಾನು. ಇದನ್ನು ಕನ್ನಡದಲ್ಲಿ ಅಚ್ಚು ಕಟ್ಟಾಗಿ ಮಾಡಲು ಕಿರುತೆರೆ ನಟಿ ಸಮೀಕ್ಷಾ ಆಯ್ಕೆಯಾಗಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಸುಬ್ಬಲಕ್ಷ್ಮಿ ಸಂಸಾರ’ ಧಾರವಾಹಿಯಲ್ಲಿ ನೆಗೆಟಿವ್ ರೋಲ್ ಮಾಡುತ್ತಿದ್ದರು ಸಮೀಕ್ಷಾ.
6 ವರ್ಷದ ನಂತರ ಮತ್ತೆ ಒಂದಾದ ಜೋಡಿ!
ತಮಿಳು ಚಿತ್ರ ಈ ಪಾತ್ರದಿಂದಲೇ ಯಶಸ್ಸು ಕಂಡಿದ್ದೆಂದರೂ ತಪ್ಪಾಗುವುದಿಲ್ಲ. ಅಂಥ ಸ್ಕೂಲ್ ಹುಡುಗಿ ಜಾನು ಪಾತ್ರ ತಮಿಳರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇಂಥ ಅದ್ಭುತ ಪಾತ್ರಕ್ಕೆ ಸಮೀಕ್ಷಾ ಆಯ್ಕೆ ಆಗಿದ್ದು, ಚಿತ್ರರಂಗದಲ್ಲಿ ಹೆಸರು ತಂದು ಕೊಡುವ ನಿರೀಕ್ಷೆ ಇದೆ.
ಸಮೀಕ್ಷಾ ಶಿವಮೊಗ್ಗ ಮೂಲದ ನಟಿ. ಕೇವಲ ಕಿರುತೆರೆ ಮಾತ್ರವಲ್ಲ, ಈಗಾಗಲೇ ಅನೇಕ ಚಿತ್ರಗಳಲ್ಲಿಯೂ ನಟಿಸಿ ಸೈ ಎನಿಸಿ ಕೊಂಡಿದ್ದಾರೆ. ಇತ್ತೀಚೆಗ ಬಿಡುಗಡೆಯಾದ ಚಿತ್ರ ‘ದಿ ಟೆರೆರಿಸ್ಟ್’ ನಲ್ಲಿಯೂ ಪಾತ್ರವೊಂದನ್ನು ನಿರ್ವಹಿಸಿದ್ದರು. ಇನ್ನು ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಲೀಡ್ ಮಾತ್ರ ಮಾಡಲಿದ್ದಾರೆ.
'ರೋಮಿಯೋ' ಚಿತ್ರದಲ್ಲಿ ಗಣೇಶ್‌ಗೆ ಯಶಸ್ವಿ ಜೋಡಿ ಎಂಬ ಭಾವನೆ ಮೂಡುವಂತೆ ಮಾಡಿದ್ದ ಭಾವನಾ ಈ ಚಿತ್ರದ ಹೀರೋಯಿನ್. ಈ ಕಲರ್‌ಫುಲ್ ಜೋಡಿ ಅದೆಷ್ಟರ ಮಟ್ಟಿಗೆ ಈ ಚಿತ್ರದಲ್ಲಿ ಮೋಡಿ ಮಾಡುತ್ತೋ ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.