ಅಂದು 1 ಸಾವಿರ ರೂ. ಸಂಭಾವನೆಗೆ ಪರದಾಡಿದ್ದ Premada Oorali ನಟ ಶ್ರೀರಾಮ್​! ಈಗ ಸಿಕ್ಕಿದ್ದೆಷ್ಟು

Published : Oct 12, 2026, 11:54 AM IST
Shree Raam

ಸಾರಾಂಶ

ಯಾವುದೇ ದೊಡ್ಡ ಪ್ರಚಾರವಿಲ್ಲದೆ ಬಿಡುಗಡೆಯಾದ 'ಪ್ರೇಮದ ಊರಲಿ' ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಈ ಚಿತ್ರದ ನಾಯಕ ಶ್ರೀರಾಮ್ ಒಮ್ಮೆ ಕೇವಲ 1000 ರೂ. ಸಂಭಾವನೆಗೂ ಪರದಾಡಿದ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇಂಜಿನಿಯರಿಂಗ್ ಮುಗಿಸಿರುವ ಇವರು ತಮ್ಮ ಪ್ರಸ್ತುತ ಸಂಭಾವನೆಯ ಬಗ್ಗೆ ಹೇಳಿದ್ದೇನು?

ಬೆಂಗಳೂರು: ಪ್ರೇಮದ ಊರಲಿ ಸಿನಿಮಾ ಧೂಳೆಬ್ಬಿಸುತ್ತಿದೆ. ಸೆಪ್ಟೆಂಬರ್​ 25ರಂದು ಬಿಡುಗಡೆಯಾಗಿರುವ ಈ ಸಿನಿಮಾ ಹವಾ ಈಗಲೂ ನಿಂತಿಲ್ಲ. ಎಲ್ಲಿಯೂ ಹೆಚ್ಚಿನ ಪ್ರಚಾರವಿಲ್ಲದೇ ತಣ್ಣಗೆ ಸದ್ದಿಲ್ಲದೇ ಬಿಡುಗಡೆಯಾಗಿದ್ದ ಪ್ರೇಮದ ಊರಲಿ ಸಿನಿಮಾ, ಜನರ ಬಾಯಿಯಿಂದ ಬಾಯಿಗೆ ಹೋಗಿಯೇ ಈ ಪರಿಯಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದೆ. ಯಾವ ಸಿನಿಮಾ ಹೇಗೆ ಓಡತ್ತೆ ಎಂದು ಹೇಳುವುದು ಕಷ್ಟವಾದರೂ ಇಂಥ ಸಿನಿಮಾಗಳಿಗೂ ಜನರು ಒಲವು ತೋರುತ್ತಾರೆ ಎನ್ನುವುದಕ್ಕೆ ಈ ಸಿನಿಮಾ ಸಾಕ್ಷಿಯಾಗಿದೆ. ದೊಡ್ಡ ದೊಡ್ಡ ಸ್ಟಾರ್​ ನಟರು ಇಲ್ಲದೆಯೂ ಸಿನಿಮಾ ಗೆಲ್ಲಬಹುದು ಎನ್ನುವುದನ್ನು ಕನ್ನಡಿಗರು ತೋರಿಸಿಕೊಟ್ಟಿದ್ದಾರೆ.

ಅಂದಹಾಗೆ ಸಂತು ಪಾತ್ರದ ಮೂಲಕ ಎಲ್ಲರ ಮನಸ್ಸನ್ನು ಗೆದ್ದವರು ನಾಯಕ ಶ್ರೀರಾಮ್​. ಆದರೆ ಕೆಲವೇ ವರ್ಷಗಳ ಹಿಂದೆ ಒಂದು ಸಾವಿರ ರೂಪಾಯಿ ಸಂಭಾವನೆ ಪಡೆಯಲೂ ಇವರ ಹೆಣಗಾಡಿದ್ದು ಇದೆ. ಆ ಸಂಭಾವನೆ ಕೂಡ ಇವರಿಗೆ ಕೊಟ್ಟಿರಲಿಲ್ಲವಂತೆ. ಎಷ್ಟೋ ರೂಪಾಯಿ ಸಂಭಾವನೆಗೆ ಮಾತನಾಡಿ ಕೊನೆಗೆ ಹಣವನ್ನು ಕೊಡದೇ, ಕಾಡಿ ಬೇಡಿದ್ದರಂತೆ. ದೇವರ ಹುಂಡಿಗೆ ಹಾಕುವುದಕ್ಕಾದರೂ ಒಂದಷ್ಟು ದುಡ್ಡು ಕೊಡಿ ಎಂದು ಕಾಡಿ ಬೇಡಿದಾಗ ಒಂದು ಸಾವಿರ ಕೊಡುವುದಾಗಿ ಹೇಳಿ ಅದಕ್ಕೂ ಹೇಗೆ ಸತಾಯಿಸಿದ್ದರು ಎನ್ನುವ ಬಗ್ಗೆ ನಟ ಶ್ರೀರಾಮ್​ ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ರಿವೀಲ್​ ಮಾಡಿದ್ದಾರೆ.

ಇಂಜಿನಿಯರ್ ಆಗಿದ್ದ ನಟ

ಅಂದಹಾಗೆ ನಟ ಶ್ರೀರಾಮ್​, ಇವರು ಸಿನಿಮಾ ರಂಗಕ್ಕೆ ಬರುವ ಮುನ್ನ ಇಂಜಿನಿಯರಿಂಗ್ ಪದವಿ ಮುಗಿಸಿದ್ದರು. ಶ್ರೀರಸ್ತು ಶುಭಮಸ್ತು (2016), ನೀಲಿ (2016-18), ಅವಳುಂ ನಾನುಂ (ತಮಿಳು, 2018), ಇಷ್ಟದೇವತೆ (2019-20) ಮತ್ತು ಕನ್ಯಾಕುಮಾರಿ (2021) ಗಳಲ್ಲಿ ನಾಯಕನಾಗಿ ನಟಿಸಿ ಅಪಾರ ಪ್ರೇಕ್ಷಕರನ್ನು ಗಳಿಸಿದ್ದರು. 2017ರ ರಿಷಭಪ್ರಿಯ ಎಂಬ ಕಿರುಚಿತ್ರದ ಮೂಲಕ ಗಮನ ಸೆಳೆದ ಇವರು, 2018ರಲ್ಲಿ 'ಇರುವುದಿಲ್ಲವ ಬಿಟ್ಟು' ಸಿನಿಮಾದ 'ಆಕಾಶ್' ಪಾತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಹೀರೊ ಆಗಿ ಪದಾರ್ಪಣೆ ಮಾಡಿದರು. ನಂತರ ಕೋಟಿಗೊಬ್ಬ 3 (ಕ್ಯಾಮಿಯೋ), ಗಜಾನನ ಆಂಡ್ ಗ್ಯಾಂಗ್ (2022) ಮತ್ತು ಪ್ರಶಂಸೆ ಗಳಿಸಿದ 'ಹೊಂದಿಸಿ ಬರೆಯಿರಿ' (2023) ಸಿನಿಮಾದಲ್ಲಿ 'ಕುಮಾರ್' ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದರು.

ಪ್ರೇಮದ ಊರಲಿಗೆ ಸಿಕ್ಕಿದ್ದೆಷ್ಟು?

ಆಗ ಒಂದು ಸಾವಿರ ರೂಪಾಯಿಗೆ ಪರದಾಡಿದ್ದ ನಟ ಈಗ ಎಲ್ಲರ ಮನಸ್ಸನ್ನು ಕದ್ದಿದ್ದಾರೆ. ಹಾಗಿದ್ದರೆ ಪ್ರೇಮದ ಊರಲಿ (Premada Oorali) ಸಿನಿಮಾಕ್ಕೆ ಅವರಿಗೆ ಸಿಕ್ಕ ಸಂಭಾವನೆ ಎಷ್ಟು ಎಂದು ಪ್ರಶ್ನಿಸಿದಾಗ, ನಟ ಜಾಣ್ಮೆಯಿಂದ ನುಣುಚಿಕೊಂಡರು. ಎಷ್ಟು ಕೊಡುತ್ತಾರೋ ಕೊಡಲಿ, ಒಂದಿಷ್ಟು ಕೊಡುತ್ತಾರೆ ಬಿಡಿ ಎಂದು ಉತ್ತರಿಸಿದರೇ ವಿನಾ ಎಷ್ಟು ಸಂಭಾವನೆಗೆ ಮಾತಾಗಿದೆ, ಈ ಪರಿಯ ಸಕ್ಸಸ್​ ಬಳಿಕ ಎಷ್ಟು ಕೊಡಲು ಒಪ್ಪಿಕೊಂಡಿದ್ದಾರೆ ಎನ್ನುವ ಬಗ್ಗೆ ಎಲ್ಲಿಯೂ ರಿವೀಲ್​ ಮಾಡಲಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಿಸ್ಟರ್‌ ಬೀಸ್ಟ್‌ ಪ್ರತಿ ವಿಡಿಯೋಕ್ಕೆ ಮೆಸ್ಸೇಜ್‌ ಹಾಕ್ತಿದ್ದ ಹುಡುಗಿ, ಕೊನೆಗಾಗಿದ್ದನ್ನು ನಂಬೋಕಾಗ್ತಿಲ್ಲ !
ರಣಬಾಲಿ ಸಿನಿಮಾ ರಿಲೀಸ್‌ಗೂ ಮುನ್ನ ಎಚ್ಚೆತ್ತ ರಶ್ಮಿಕಾ, ಕನ್ನಡ ಸಿನಿಮಾದ ಬಗ್ಗೆ ಅಪರೂಪಕ್ಕೆ ಪೋಸ್ಟ್‌!