ರಜಿನಿಕಾಂತ್ 'ದರ್ಬಾರ್'ಗೆ ರಾಜ್‌ ಪುತ್ರ ವಿಲನ್?

By Web Desk  |  First Published Apr 19, 2019, 2:03 PM IST

ದರ್ಬಾರ್ ಚಿತ್ರದಲ್ಲಿ 'ತಲೈವಾ' ಚಿತ್ರಕ್ಕೆ ಖ್ಯಾತ ನಟ ರಾಜ್‌ ಬಬ್ಬರ್ ಪುತ್ರ ಪ್ರತೀಕ್ ಬಬ್ಬರ್ ವಿಲನ್‌ ಆಗಿ ಅಭಿನಯಿಸುತ್ತಿದ್ದಾರೆ.


ಖಡಕ್ ಐಪಿಎಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸೂಪರ್ ಸ್ಟಾರ್ ರಜಿನಿಕಾಂತ್ ವಿರುದ್ಧ ಇದೇ ಮೊದಲ ಬಾರಿ ಖ್ಯಾತ ನಟ ರಾಜ್ ಬಬ್ಬರ್ ಪುತ್ರ ಪ್ರತೀಕ್ ಬಬ್ಬರ್ ಅಭಿನಯಿಸುತ್ತಿದ್ದಾರೆ.

ರಜಿನಿ 167 ನೇ ಸಿನಿಮಾವಾದ ದರ್ಬಾರ್ ಸದ್ಯಕ್ಕೆ ಮುಂಬೈನಲ್ಲಿ ಚಿತ್ರೀಕರಣ ನಡೆಯುತ್ತಿದ್ದು ರಜನಿ ಲುಕ್‌ಗೆ ಅಭಿಮಾನಿಗಳು ಫುಲ್ ಬೋಲ್ಡ್ ಆಗಿದ್ದಾರೆ.

Tap to resize

Latest Videos

 

ರಜಿನಿ ಜೊತೆ ತೆರೆ ಹಂಚಿಕೊಂಡು ಅಭಿನಯಿಸುವುದು ಹಲವಾರು ಕಲಾವಿದರ ಕನಸು. ಆ ಅವಕಾಶವನ್ನು ತನ್ನದಾಗಿಸಿಕೊಂಡವರು ಭಾಗಿ-2 ಚಿತ್ರದ ವಿಲನ್ ಪ್ರತೀಕ್.

ಐಪಿಎಸ್ ‘ದರ್ಬಾರ್’ ಶುರು ಮಾಡಿದ ತಲೈವಾ..!

 

ಬಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾಗಳನ್ನು ಅಭಿನಯಿಸಿರುವ ಪ್ರತ್ರೀಕ್‌ಗೆ ಬಿಗ್ ಹಿಟ್‌ ತಂದು ಕೊಟ್ಟ ಸಿನಿಮಾ ಭಾಗಿ-2. ಪ್ರತೀಕ್ ಅಭಿನಯಕ್ಕೆ ಫುಲ್ ಇಂಪ್ರೆಸ್ ಆದ ನಿರ್ದೇಶಕ ಮುರುಗದಾಸ್ ದರ್ಬಾರ್ ಚಿತ್ರದಲ್ಲಿ ಬಬ್ಬರ್ ಪಾತ್ರ ಹೇಗೆ ಬರುತ್ತದೆ ಎಂದು ಎಕ್ಸೈಟ್ ಆಗಿದ್ದಾರೆ.

click me!