ರವಿಚಂದ್ರನ್‌ ಮಗಳ ಮದುವೆ ಕಾರ್ಡ್‌ ಬೆಲೆ ಇಷ್ಟೊಂದಾ?

By Web Desk  |  First Published Apr 19, 2019, 12:53 PM IST

ನಟ ರವಿಚಂದ್ರನ್ ಪುತ್ರಿ ಗೀತಾಂಜಲಿ ಮೇ 28- 29 ರಂದು ವೈಟ್‌ ಪೆಟಲ್ಸ್‌ನಲ್ಲಿ ಉದ್ಯಮಿ ಅಜಯ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.


ಕ್ರೇಜಿ ಸ್ಟಾರ್ ರವಿಚಂದ್ರನ್ ಮುದ್ದಿನ ಪುತ್ರಿ ಗೀತಾಂಜಲಿ ಹಸೆಮಣೆ ಏರಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಮದುವೆಯಾಗುತ್ತಿದ್ದಾರೆ.

ಅಂಬರೀಶ್ ಹುಟ್ಟುಹಬ್ಬದಂದೇ ಕ್ರೇಜಿ ಸ್ಟಾರ್ ಮಗಳ ಮದುವೆ!

Tap to resize

Latest Videos

ಸಿನಿಮಾದಲ್ಲೇ ಸೂಪರ್ ಸೆಟ್ ಹಾಕುವ ರವಿಚಂದ್ರನ್ ತನ್ನ ಮಗಳ ಮದುವೆಗೆ ಸುಮಾರು 40 ಕ್ಯಾಮೆರಾ ಸೆಟಪ್‌, ಹತ್ತು ಸಾವಿರ ಜನ ಸೋಫಾದ ಮೇಲೆ ಕೂತು ಆರಾಮಾಗಿ ಮದುವೆ ನೋಡುವ ವ್ಯವಸ್ಥೆ ಮಾಡಲಾಗಿದೆ.

ಮದುವೆ ಇನ್ನಷ್ಟು ನಾದಮಯವಾಗಲು ಹಂಸಲೇಖ ಸಂಗೀತ ಕಾರ್ಯಕ್ರಮ ಇರುತ್ತದೆ. ಅಷ್ಟೇ ಅಲ್ಲದೆ ತಂದೆ-ಮಗಳ ಭಾಂದವ್ಯಕ್ಕೆ ಹಾಡೊಂದನ್ನು ಕಂಪೋಸ್ ಮಾಡಿ ಗಿಫ್ಟ್ ಆಗಿ ನೀಡುತ್ತಿದ್ದಾರೆ. ಇನ್ನು ಮದುವೆ ಆಮಂತ್ರಣ ಪತ್ರಿಕೆಯನ್ನು ಅದ್ದೂರಿಯಾಗಿ ಮಾಡಲಾಗಿದೆ. ಒಂದು ಆಮಂತ್ರಣ ಪತ್ರಿಕೆ ಬೆಲೆಯೆಷ್ಟು ಗೊತ್ತಾ?

ಕನ್ನಡ ಚಿತ್ರರಂಗದಲ್ಲೇ ಇದೇ ಮೊದಲ ಬಾರಿಗೆ 3D ಆಮಂತ್ರಣ ಪತ್ರಿಕೆ ಮಾಡಿಸಲಾಗಿದೆ ಅದರ ಮೇಲೆ ಕಾರ್ಡ್‌ನಲ್ಲಿ ಅತಿಥಿಗಳ ಹೆಸರು ಪ್ರಿಂಟ್‌ ಮಾಡಿಸಲಾಗಿದೆ. ಅಷ್ಟೇ ಅಲ್ಲದೆ ಪತ್ರಿಕೆಯ ಮೇಲೆ ರವಿಚಂದ್ರನ್ ಫೋಟೋ ಮತ್ತು ಕುಟುಂಬ ಸದಸ್ಯರ ಹೆಸರು ಇದೆ. ಒಂದು ಆಮಂತ್ರಣ ಪತ್ರಿಕೆ ಸುಮಾರು 3 ಸಾವಿರ ಬೆಲೆ ಬಾಳುತ್ತದೆ ಅದರ ಜೊತೆ ಗಿಫ್ಟ್ ಕೂಡ ನೀಡಲಾಗುತ್ತದೆ.

 

click me!