ನೆಚ್ಚಿನ ನಟನನ್ನು ಭೇಟಿಯಾಗದೆ ನೊಂದ ಪವರ್ ಸ್ಟಾರ್ ಅಭಿಮಾನಿ ಆತ್ಮಹತ್ಯೆ

Published : Sep 04, 2018, 05:26 PM ISTUpdated : Sep 09, 2018, 10:24 PM IST
ನೆಚ್ಚಿನ ನಟನನ್ನು ಭೇಟಿಯಾಗದೆ ನೊಂದ ಪವರ್ ಸ್ಟಾರ್ ಅಭಿಮಾನಿ ಆತ್ಮಹತ್ಯೆ

ಸಾರಾಂಶ

ಮೋಮಟವಲ್ಲಿ ಅನಿಲ್ ಕುಮಾರ್  ಮೃತನು. ಈತ ಜಿಮ್ ತರಬೇತುದಾರನಾಗಿದ್ದು ಪವನ್ ಕಲ್ಯಾಣ್ ಅವರ ಅಪ್ಪಟ ಅಭಿಮಾನಿಯಾಗಿದ್ದು ತನ್ನ ಜೀವನದಲ್ಲಿ ಅವರನ್ನು ಭೇಟಿಯಾಗದ ಕಾರಣ ನೇಣಿಗೆ ಶರಣಾಗಿದ್ದಾನೆ. 

ವಿಜಯವಾಡ[ಸೆ.04]: ತನ್ನ ನೆಚ್ಚಿನ ನಟ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರನ್ನು ಭೇಟಿಯಾಗಲಿಲ್ಲವೆಂದು ನೊಂದ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯವಾಡದಲ್ಲಿ ನಡೆದಿದೆ.

ಮೋಮಟವಲ್ಲಿ ಅನಿಲ್ ಕುಮಾರ್  ಮೃತನು. ಈತ ಜಿಮ್ ತರಬೇತುದಾರನಾಗಿದ್ದು ಪವನ್ ಕಲ್ಯಾಣ್ ಅವರ ಅಪ್ಪಟ ಅಭಿಮಾನಿಯಾಗಿದ್ದು ತನ್ನ ಜೀವನದಲ್ಲಿ ಅವರನ್ನು ಭೇಟಿಯಾಗದ ಕಾರಣ ನೇಣಿಗೆ ಶರಣಾಗಿದ್ದಾನೆ.  ತಾನು ಮೃತಪಟ್ಟ ನಂತರ ತನ್ನ ಅಂತಿಮ ಸಂಸ್ಕಾರಕ್ಕೆ ಪವನ್ ಅವರು ಬರಬೇಕೆಂದು ಡೆತ್ ನೋಟ್'ನಲ್ಲಿ ಮನವಿ ಮಾಡಿಕೊಂಡಿದ್ದಾನೆ.

ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಈತನನ್ನು ನೆರೆಮನೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳೀಯ ಠಾಣೆಯಲ್ಲಿ 174 ಸೆಕ್ಷನ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಮೃತದೇಹವನ್ನು ಸರ್ಕಾರಿ ಅಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Abhishek Bachchan: ಮಗಳು ಆರಾಧ್ಯಾ ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ ಏನೋ..!?
'ನಿಮ್ಮ ಪ್ರೀತಿಯ ಪ್ರತಿ ಹನಿ ಅವರಿಗೆ ತಲುಪಿಸುತ್ತೇನೆ..' ಡೆವಿಲ್‌ ವೀಕ್ಷಿಸಿ ಮನತುಂಬಿ ಬರೆದ ವಿಜಯಲಕ್ಷ್ಮೀ ದರ್ಶನ್‌