
ದಾವಣಗೆರೆ (ಸೆ. 03): ನಟ ಸುದೀಪ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ದಾವಣಗೆರೆಯ ಉದ್ಯಮಿ ಆರ್.ಎಸ್.ಶೇಖರಪ್ಪ ಪುತ್ರ ಆರ್.ಎಸ್.ರಾಕೇಶ್ ಮತ್ತು ಸ್ನೇಹಿತರು ಕೊಡಗು ನೆರೆ ಸಂತ್ರಸ್ತರಿಗೆ 50 ಸಾವಿರದ ಚೆಕ್ ನೀಡಿದರು.
ತಮ್ಮ ನೆಚ್ಚಿನ ನಾಯಕ ಸುದೀಪ್ ಜನ್ಮದಿನಕ್ಕೆ ಬೆಳ್ಳಿ ಖಡ್ಗ ನೀಡಲು ಆರ್.ಎಸ್.ರಾಕೇಶ್ ನಿರ್ಧರಿಸಿದ್ದರು. ಆದರೆ, ಕೊಡಗು ಪ್ರವಾಹದ ಹಿನ್ನೆಲೆಯಲ್ಲಿ ಸುದೀಪ್ ಆಸೆಯಂತೆ ಕೊಡಗು ಸಂತ್ರಸ್ತರ ಪರಿಹಾರಕ್ಕಾಗಿ 50 ಸಾವಿರದ ಚೆಕ್ ಅನ್ನು ಸುದೀಪ್ ಅವರ ನಿವಾಸದಲ್ಲಿ ನೀಡುವ ಮೂಲಕ ಜನ್ಮದಿನಕ್ಕೆ ಶುಭ ಹಾರೈಸಿದರು.
ಕಿಚ್ಚ ಸುದೀಪ್ ಅವರ ತಂದೆ ಸಂಜೀವ್, ಬೆಂಗಳೂರಿನ ಹಲಸೂರು ಗೇಟ್‌ನ ಎಸಿಪಿ ಪಂಪಾಪತಿ, ಶಾಬನೂರು ಪ್ರವೀಣ್, ಲಿಂಗರಾಜ ಫಣಿಯಾಪುರ, ಜಗಳೂರು ತಾಲೂಕು ಗೌಡಗೊಂಡನಹಳ್ಳಿ ನಾಗರಾಜ, ರೇಣುಕಾರಾಜ, ದೇವರ ಬೆಳಕೆರೆ ನಿಂಗರಾಜ, ದೇವರಾಜ ಮತ್ತಿತರರಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.