
ಮುಂಬೈ (ಅ.25): ಬಾಜೀರಾವ್ ಮಸ್ತಾನಿಯ ದಿವಾನಿ ಸಾಂಗನ್ನೂ ಮೀರಿಸುವಂತಿದೆ ಬಿಡುಗಡೆಯಾಗಿರೋ ಪದ್ಮಾವತಿ ಸಿನಿಮಾದ ಘೂಮರ್ ಸಾಂಗ್.
ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಅವಕಾಶ ಗಿಟ್ಟಿಸೋದೆ ಕಷ್ಟ. ಅಂತದ್ರಲ್ಲಿ ದೀಪಿಕ ತುಂಬಾ ಅದೃಷ್ಟವಂತೆ. ಬ್ಯಾಕ್ ಟು ಬ್ಯಾಕ್ ಎರಡೆರದಡು ಸಿನಿಮಾ. ಶ್ರೇಯಾ ಘೋಷಾಲ್, ಸ್ವರೂಪ್ ಖಾನ್ ಧ್ವನಿಯಲ್ಲಿ ಮೂಡಿಬಂದಿರುವ ಘೂಮರ್ ಸಾಂಗ್ ಒಮ್ಮೆ ಕೇಳಿದ್ರೆ ಸಾಕು ಸಂಜಯ್ ಲೀಲಾ ಸ್ವತಃ ನೀಡಿರೋ ಸಂಗೀತ ಕಿವಿಯಲ್ಲಿ ಮತ್ತೆ ಮತ್ತೆ ರಿಂಗಣವಾಗುವಂತಿದೆ. ಒಮ್ಮೆ ದೀಪಿಕ ಪದ್ಮಾವತಿ ಲುಕ್ ನಿಮ್ಮ ಕಣ್ಣಲ್ಲಿ ಸೆರೆಯಾದರೆ ಮುಗೀತು ಕನಸಲ್ಲೂ ಕಾಡುತ್ತಿರುವಂತಾಗುತ್ತೆ. ವೀರವನಿತೆ ರಜಪೂತ ರಾಣಿಪದ್ಮಾವತಿಯಾಗಿ ದೀಪಿಕ - ಪದ್ಮಾವತಿಯ ಒಂದು ನೋಟಕ್ಕೆ ಆಕೆಯನ್ನ ಪಡಿಯಲು ಅಲ್ಲಾವುದ್ದೀನ್ ಖಿಲ್ಜಿ ಮಾಡುವ ದುಸ್ಸಾಹಸ. ಎಲ್ಲವೂ ಸಿನಿಮಾದ ಹೈಲೈಟ್ ಸದ್ಯ ಘೂಮರ್ ಹಾಡು ಬಿಟೌನ್ ಮಂದಿಯ ಕಣ್ಣು ಕುಕ್ಕುತ್ತಿದೆ. ಬನ್ಸಾಲಿ ಪ್ರೊಡಕ್ಷನ್ಸ್ ನ ಪದ್ಮಾವತಿ ಡಿಸೆಂಬರ್ 1ಕ್ಕೆ ತೆರೆ ಕಾಣಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.