ಇಬ್ಬರ ನಡುವಿನ ಗಾಢ ಸ್ನೇಹ ಪ್ರೀತಿಯ ಕಡೆಗೆ ಮಗ್ಗಲು ಬದಲಿಸುತ್ತಿದೆಯೇ ಎನ್ನುವ ಚರ್ಚೆಗಳೂ ಈಗ ಟಾಲಿವುಡ್ ಅಂಗಳದಲ್ಲಿ ಸದ್ದಾಗುತ್ತಿದೆ.
ಪ್ರಭಾಸ್ 38ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಲಕ್ಷಾಂತರ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ನೂರಾರು ಬಂಧುಗಳು ಬಗೆ ಬಗೆಯ ಗಿಫ್ಟ್ಗಳನ್ನು ನೀಡಿದ್ದಾರೆ. ಆದರೆ ಈಗ ವೈರಲ್ ಆಗುತ್ತಿರುವುದು ಪ್ರಭಾಸ್‌ಗೆ ಅನುಷ್ಕಾ ಶೆಟ್ಟಿ ಕೊಟ್ಟಿರುವ ಗಿಫ್ಟ್ ಸುದ್ದಿ. ಪ್ರಭಾಸ್ ಮತ್ತು ಅನುಷ್ಕಾ ನಡುವೆ ಏನೋ ಇದೆ ಎನ್ನುವ ಸುದ್ದಿ ಅಭಿಮಾನಿಗಳಿಗೆ ಪಾಲಿಗೆ ಆಗಾಗ ತಂಗಾಳಿಯಾಗಿ ಸುಳಿಯುತ್ತಲೇ ಇದೆಯಾದರೂ ಈ ಬಾರಿ ಅದರ ಹವಾ ಜೋರಾಗಿಯೇ ಇದೆ. ಅದಕ್ಕೆ ಕಾರಣ ಈಗ ಅನುಷ್ಕಾ ಗಿಫ್ಟ್ ಮಾಡಿರುವ ವಾಚ್.
ಅಂದಹಾಗೆ ಪ್ರಭಾಸ್‌ಗೆ ಫ್ಯಾನ್ಸಿ ವಾಚ್'ಗಳೆಂದರೆ ಬಹಳ ಇಷ್ಟವಂತೆ. ಹಾಗಾಗಿಯೇ ಅನುಷ್ಕಾ ಈ ಗಿಫ್ಟ್ ಮಾಡಿದ್ದಾಳೆ. ಇಬ್ಬರ ನಡುವಿನ ಗಾಢ ಸ್ನೇಹ ಪ್ರೀತಿಯ ಕಡೆಗೆ ಮಗ್ಗಲು ಬದಲಿಸುತ್ತಿದೆಯೇ ಎನ್ನುವ ಚರ್ಚೆಗಳೂ ಈಗ ಟಾಲಿವುಡ್ ಅಂಗಳದಲ್ಲಿ ಸದ್ದಾಗುತ್ತಿದೆ. ಇದೂ ಅಲ್ಲದೇ ಪ್ರಭಾಸ್ ಈ ಹಿಂದೆಯೇ ‘ಒಬ್ಬ ನಟ ಮತ್ತು ನಟಿ ಎರಡಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದರೆ, ಹೆಚ್ಚು ಕ್ಲೋಸ್ ಆಗಿ ಇದ್ದರೆ ಗುಸುಗುಸುಗಳು ಶುರುವಾಗುವುದು ಸಹಜ. ಅದಕ್ಕೆಲ್ಲಾ ನಾವು ತಲೆಕೆಡಿಸಿಕೊಳ್ಳಬೇಕಿಲ್ಲ. ಒಳ್ಳೆಯ ಸ್ನೇಹಿತರಾಗಿಯೇ ಇರೋಣ’ ಎಂದು ಅನುಷ್ಕಾಗೆ ಹೇಳಿದ್ದ ಮಾತಿನ ಆಧಾರದ ಮೇಲೆ ಇಬ್ಬರ ನಡುವೆ ಕೇವಲ ಸ್ನೇಹವಷ್ಟೇ ಇರಬಹುದೇನೋ ಎಂದೂ ಹಲವರು ಅಂದುಕೊಂಡಿದ್ದಾರೆ.