’ಒಂದು ಮೊಟ್ಟೆಯ ಕತೆ’ ತೆಲುಗಿಗೆ ರಿಮೇಕ್

By Web DeskFirst Published Sep 19, 2018, 2:46 PM IST
Highlights

’ಒಂದು ಮೊಟ್ಟೆಯ ಕತೆ’ ಹಾಸ್ಯ ಪ್ರಧಾನವಾದ ಚಿತ್ರ. ಎಲ್ಲಾ ವರ್ಗದ ಪ್ರೇಕ್ಷಕರ ಮನಗೆದ್ದಿದೆ. ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಕೂಡಾ ಸಿಕ್ಕಿದೆ. ಈ ಚಿತ್ರವನ್ನು ತೆಲುಗಿಗೆ ರಿಮೇಕ್ ಮಾಡುವ ಮಾತು ಕೇಳಿ ಬರುತ್ತಿದೆ. 

ಬೆಂಗಳೂರು (ಸೆ.19):  ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ತೆಲುಗು ಚಿತ್ರರಂಗದಲ್ಲಿ ಹವಾ ಕ್ರಿಯೇಟ್ ಮಾಡಿದ್ದಾರೆ. ಅವರು ನಿರ್ದೇಶಿಸಿದ ‘ಯೂಟರ್ನ್’ 4 ದಿನದಲ್ಲಿ 1 ಕೋಟಿ ಕಲೆಕ್ಷನ್ ಮಾಡಿದೆ. ಈ ಸಂದರ್ಭದಲ್ಲಿ
ಪವನ್ ಕುಮಾರ್ ಜತೆ ಮಾತುಕತೆ.

ವಾಟ್ ನೆಕ್ಟ್ಸ್ ?
ಟಾಲಿವುಡ್‌ನಲ್ಲಿ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ. ಒಂದಂತೂ ಸತ್ಯ, ತಕ್ಷಣವೇ ತೆಲುಗಿನಲ್ಲೇ ಮತ್ತೊಂದು ಸಿನಿಮಾ ನಿರ್ದೇಶಿಸುವ ಅವಕಾಶ ಸಿಕ್ಕರೂ ಅದು ತೆಲುಗು ಮತ್ತು ಕನ್ನಡ ಎರಡು ಭಾಷೆಯಲ್ಲೂ ನಿರ್ಮಾಣ ಆಗಬೇಕು ಎನ್ನುವುದು ನನ್ನ ಡಿಮ್ಯಾಂಡ್ ಆಗಿರುತ್ತೆ.

‘ಯುಟರ್ನ್’ ರೆಸ್ಪಾನ್ಸ್ ಬಗ್ಗೆ ಹೇಳೋದಾದ್ರೆ...

ಸಿನಿಮಾ ಗೆಲ್ಲುತ್ತೆ ಎನ್ನುವ ವಿಶ್ವಾಸ ಇತ್ತು. ಆದರೆ ಆರಂಭದಲ್ಲೇ ಇಷ್ಟು ದೊಡ್ಡ ಎಂಟ್ರಿ ಸಿಗುತ್ತೆ ಎನ್ನುವ ನಿರೀಕ್ಷೆ ಇರಲಿಲ್ಲ. ಈಗ ನಿರೀಕ್ಷೆ ಮೀರಿದ ಪ್ರತಿಕ್ರಿಯೆ ಸಿಗುತ್ತಿದೆ. ಟಾಲಿವುಡ್ ಒಂದರಲ್ಲೇ ಕೇವಲ ನಾಲ್ಕು ದಿನದ ಕಲೆಕ್ಷನ್ 14 ಕೋಟಿ ದಾಟಿದೆ. ತಮಿಳಿನಲ್ಲೂ ಅಂಥದ್ದೇ ರೆಸ್ಪಾನ್ಸ್ ಸಿಗುತ್ತಿದೆ. ಸಮಂತಾ ಅವರಿಗೆ ಇಂತಹ ರೆಸ್ಪಾನ್ಸ್ ಹೊಸದೇನೂ ಅಲ್ಲ. ಯಾಕಂದ್ರೆ ಅವರು ಎರಡು ಭಾಷೆಯಲ್ಲೂ ಸ್ಟಾರ್ ನಟಿ. ನನಗೆ ಇದು ಹೊಸದು. ನಿರ್ಮಾಪಕಿ ಆಗಿ ಅವರು ನನ್ನ ಮೇಲೆ ಇಟ್ಟಿದ್ದ ನಂಬಿಕೆ ಹುಸಿ ಆಗಿಲ್ಲ. ಆ ಕಾರಣಕ್ಕೆ ಖುಷಿ ಆಗುತ್ತಿದೆ.

ಟಾಲಿವುಡ್ ಪ್ರತಿಕ್ರಿಯೆ ಹೇಗಿದೆ?

ಇದು ಸ್ಟಾರ್ ನಿರ್ದೇಶಕರೇ ಇರುವ ಚಿತ್ರೋದ್ಯಮ. ಆದರೂ ಈಗ ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ಮೂಲಕ ನನ್ನನ್ನು ನಾನು ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಕೆಲವು ನಿರ್ಮಾಪಕರು, ನಿರ್ದೇಶಕರು ಫೋನ್ ಕಾಲ್ ಮಾಡಿ, ವಿಶ್ ಹೇಳಿದ್ದಾರೆ. ಸಹಜವಾಗಿಯೇ ಇದು ಪ್ರೋತ್ಸಾಹ ಎಂದೆನಿಸುತ್ತಿದೆ.

ನಿರ್ದೇಶಕನಾಗಿ ಕನ್ನಡ ಮತ್ತು ತೆಲುಗು ಚಿತ್ರೋದ್ಯಮದಲ್ಲಿ ನೀವು ಕಂಡ ವ್ಯತ್ಯಾಸ ಏನು?

ಅಂತಹ ವ್ಯತ್ಯಾಸವೇನಿಲ್ಲ. ಆದರೆ ಒಂದು ಚಿತ್ರದ ಮೇಕಿಂಗ್ ಮತ್ತು ಮಾರ್ಕೆಟಿಂಗ್ ವಿಚಾರದಲ್ಲಿ ಸಾಕಷ್ಟು ವ್ಯತ್ಯಾಸ ಇರೋದು ನಿಜ. ಯಾಕಂದ್ರೆ ಅವೆರಡಕ್ಕೂ ಒಂದಕ್ಕೊಂದು ಸಂಬಂಧವಿದೆ. ಮಾರ್ಕೆಟ್ ದೊಡ್ಡದು ಎನ್ನುವ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಬಂಡವಾಳ ಹಾಕಿ ಸಿನಿಮಾ ಮಾಡುವ ಪ್ರವೃತ್ತಿ ಅಲ್ಲಿದೆ. ನಿರ್ದೇಶಕನಾದವನು ಅಲ್ಲಿಗೆ ಹೋದಾಗ ನಿಂತಾಗ ಅಲ್ಲಿನ ನಿರ್ಮಾಣ ಶೈಲಿಗೆ ತಕ್ಕಂತೆ ಯೋಚಿಸಬೇಕಾಗುತ್ತದೆ. ಇಲ್ಲಿಗೆ ಬಂದರೆ ಇಲ್ಲಿನ ಪರಿಸ್ಥಿತಿಗೆ ತಕ್ಕಂತೆ ಯೋಚಿಸಬೇಕಾಗುತ್ತದೆ.

ಸಮಂತಾ ಮತ್ತು ನಿಮ್ಮ ಗೆಳೆತನ ಬಗ್ಗೆ ಹೇಳೋದಾದ್ರೆ..

ಕನ್ನಡದಲ್ಲಿ ನಾನು ‘ಯುಟರ್ನ್’ ಟ್ರೇಲರ್ ಲಾಂಚ್ ಮಾಡಿದಾಗ ಅದನ್ನವರು ಯುಟ್ಯೂಬ್‌ನಲ್ಲಿ ನೋಡಿದ್ದರು. ಇಂಪ್ರೆಸ್ ಆಗಿದ್ದರು. ಚೆನ್ನಾಗಿದೆ ಅಂತಲೂ ಕಾಮೆಂಟ್ ಮಾಡಿದ್ದರು. ಮುಂದೊಂದು ದಿನ ಅದನ್ನು ತೆಲುಗು ಮತ್ತು ತಮಿಳಿಗೆ ರಿಮೇಕ್ ಮಾಡುವುದಾದರೆ ತಾವೇ ಬಂಡವಾಳ ಹಾಕುವುದಾಗಿ ಮುಂದೆ ಬಂದರು. ಆ ಕಾರಣಕ್ಕೆ ಮುಖಾಮುಖಿ ಭೇಟಿ ಆಯಿತು. ಚಿತ್ರಕ್ಕೀಗ ಸಿಗುತ್ತಿರುವ  ರೆಸ್ಪಾನ್ಸ್ ಅವರೊಂದಿಗಿನ ಒಡನಾಟ, ನನ್ನ ಮೇಲಿನ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಅವರ ಜೊತೆ ಮತ್ತೊಂದು ಸಿನಿಮಾ ಮಾಡುತ್ತೀರಾ?

ಆ ರೀತಿ ನಾನೂ ಯೋಚಿಸಿಲ್ಲ. ಅವರು ಕೂಡ ಅಂತಹ ಮಾತೂ ಹೇಳಿಲ್ಲ. ಅಂತಹ ಸಂದರ್ಭ ಬಂದ್ರೆ ಖುಷಿಯ ವಿಚಾರವೇ. ಮುಕ್ತವಾಗಿ ಒಪ್ಪಿಕೊಳ್ಳುತ್ತೇನ್ನುವುದು ನಿಜವೇ ಹೌದು. ಆದರೆ ನನ್ನ ಡಿಮ್ಯಾಂಡ್ ಆ ಸಿನಿಮಾ ಕನ್ನಡದಲ್ಲೂ ನಿರ್ಮಾಣ ಆಗಬೇಕು ಅನ್ನೋದು. ಅದಕ್ಕವರು ಒಪ್ಪುತ್ತಾರಾ ಗೊತ್ತಿಲ್ಲ.

ನಿಮ್ಮ ‘ನಿಕೋಟಿನ್’ ಸಿನಿಮಾದ ಕತೆ ಎಲ್ಲಿಗೆ ಬಂತು?

ಇದೊಂದು ಬಿಗ್ ಬಜೆಟ್ ಸಿನಿಮಾ. ಹೆಚ್ಚು ಕಡಿಮೆ 10 ರಿಂದ 15 ಕೋಟಿ ಬಂಡವಾಳ ಬೇಕಾಗುತ್ತೆ. ಅದಕ್ಕೆ ತಕ್ಕಂತೆ ನಟ-ನಟಿಯರು ಬೇಕು. ಆ ನಿಟ್ಟಿನಲ್ಲೇ ನಾನು ಒಂದಿಬ್ಬರು ಸ್ಟಾರ್ ನಟರನ್ನು ಅಪ್ರೋಚ್ ಮಾಡಿ, ನಟಿಸುವಂತೆ ಕೇಳಿದೆ. ಅವರು ತಮ್ಮ ಫ್ಯಾನ್ಸ್‌ಗೆ ಈ ಕತೆ ಹಿಡಿಸಲ್ಲ ಅಂತ ತಿರಸ್ಕರಿಸಿದರು. ಹಾಗಂತ ಅಷ್ಟು ದೊಡ್ಡ ಬಜೆಟ್‌ಗೆ ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡುವುದು ಕಷ್ಟ. ಹಾಗಾಗಿ ಅದು ಅರ್ಧದಲ್ಲಿ
ನಿಂತಿದೆ. ಇಷ್ಟರಲ್ಲೇ ಚಾಲನೆ ಸಿಗಲಿದೆ.

-ದೇಶಾದ್ರಿ ಹೊಸ್ಮನೆ 

click me!