
ವಾರಕ್ಕೆ ಐದಾರು ಸಿನಿಮಾಗಳನ್ನು ತೆರೆಗೆ ಬಿಡುತ್ತಿದ್ದ ನಿರ್ಮಾಪಕರು, ಕಳೆದ ಆರೆಂಟು ವಾರಗಳ ಸೋಲಿನಿಂದ ಕಂಗೆಟ್ಟಿರುವುದರ ಜತೆಗೇ, ಈಗ ಹಬ್ಬಿರುವ ಚುನಾವಣೆಯ ರಂಗಿಗೆ ಅಕ್ಷರಶಃ ಬೆದರಿದ್ದಾರೆ. ಅದರ ಪರಿಣಾಮವಾಗಿ ಈ ವಾರ ಒಂದೇ ಒಂದು ಚಿತ್ರವೂ ಬಿಡುಗಡೆಗೆ ಸಿದ್ಧವಾಗಿಲ್ಲ. ಮೇ 8ರ ತನಕ ಚುನಾವಣಾ ಪ್ರಚಾರದ ಅಬ್ಬರ ಇರುತ್ತದೆ. ಸಿನಿಮಾ ನಟರೆಲ್ಲರೂ ಅದರಲ್ಲೇ ತೊಡಗಿಕೊಂಡಿದ್ದಾರೆ. ಪ್ರೇಕ್ಷಕರಿಗೆ ಸಿನಿಮಾ ನಟರನ್ನು ನೋಡುವುದರಲ್ಲಿ ಇರುವ ಉತ್ಸಾಹ ಅವರ ಸಿನಿಮಾಗಳನ್ನು ನೋಡುವುದರಲ್ಲಿ ಇದ್ದಂತಿಲ್ಲ.
ಇಂಥ ಹೊತ್ತಲ್ಲಿ ಸಿನಿಮಾ ಬಿಡುಗಡೆ ಮಾಡಿದರೆ ಕೈತುಂಬ ನಷ್ಟಖಾತ್ರಿ. ಎಲ್ಲವೂ ಸರಿಯಾಗಿದ್ದಾಗಲೇ ಸಿನಿಮಾ ಮಂದಿರಕ್ಕೆ ಜನ ಬರುತ್ತಿಲ್ಲ. ಪ್ರಚಾರದ ಜತೆ ಐಪಿಎಲ್ ಮತ್ತು ಮಳೆಯೂ ಸೇರಿಕೊಂಡಿದೆ ಎನ್ನುವುದು ಚಿತ್ರೋದ್ಯಮದ ಮಾತು. ಪುಟ್ಟ ಭಯ ಚಿತ್ರಕ್ಕೆ ಚುನಾವಣೆಯ ದೊಡ್ಡ ಭಯವೇ ಕಾಡಿದೆ. ‘ನಮ್ಮ ಚಿತ್ರದ ಪ್ರೀಮಿಯರ್ ಪ್ರದರ್ಶವನ್ನು ಮೇ.6ಕ್ಕೆ ಆಯೋಜಿಸಲಾಗಿತ್ತು. ಮೇ.6ಕ್ಕೆ ಬೆಂಗಳೂರಿನಲ್ಲಿ ನರೇಂದ್ರ ಮೋದಿ ಅವರು ರೋಡ್ ಶೋ ಇದೆ, ಇದರಿಂದ ಟ್ರಾಪಿಕ್ ಜಾಮ್ ಆಗಲಿದೆ.
ಅಂತರಪಟದ ರವಿ ರಾಷ್ಟ್ರಪ್ರಶಸ್ತಿ ಪಡೆದ ಚಿತ್ರದ ನಾಯಕ ಗೊತ್ತಾ?
ಹೀಗಾಗಿ ನಮ್ಮ ಸಿನಿಮಾ ಮುಂದಕ್ಕೆ ಹಾಕಿದ್ದೇವೆ’ ಎಂದು ಚಿತ್ರತಂಡ ಹೇಳಿಕೆ ನೀಡಿದೆ. ಕಳೆದ ವಾರ ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’, ರಾಘವೇಂದ್ರ ರಾಜ್‌ಕುಮಾರ್ ಅಭಿನಯದ ‘ರಾಘು’ ಸೇರಿದಂತೆ ಕೆಲವು ಸಿನಿಮಾಗಳು ತೆರೆಕಂಡಿದ್ದವು. ಇವುಗಳಲ್ಲಿ ರಾಘವೇಂದ್ರ ಸ್ಟೋರ್ಸ್ ಹವಾ ಈ ವಾರವೂ ಮುಂದುವರಿದಿದೆ. ಚುನಾವಣೆಯ ಕಾರಣ ಬೇರೆ ಚಿತ್ರಗಳು ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಈ ವಾರವೂ ಉತ್ತಮ ಕಲೆಕ್ಷನ್ ಮಾಡುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.
ನರೇಶ್, ಪವಿತ್ರಾ ಲೋಕೇಶ್ 'ಮತ್ತೆ ಮದುವೆ'ಗೆ ಡೇಟ್ ಫಿಕ್ಸ್- ಕಿಸ್ಸಿಂಗ್ ಟೀಸರ್ ಬಿಡುಗಡೆ
ಇನ್ನೊಂದೆಡೆ ತಮಿಳು ಮೂಲದ ಪ್ಯಾನ್ ಇಂಡಿಯಾ ಚಿತ್ರ ‘ಪೊನ್ನಿಯಿನ್ ಸೆಲ್ವನ್’ ಅಬ್ಬರ ಜೋರಾಗಿದೆ. ಮುಂದಿನ ವಾರವೂ ಇದೇ ಸ್ಥಿತಿ ಮುಂದುವರಿಯಲಿದೆ. ಯಾವುದೇ ಚಿತ್ರತಂಡ ಇಲ್ಲಿಯವರೆಗೆ ಮೇ.12ರಂದು ಸಿನಿಮಾ ಬಿಡುಗಡೆಯನ್ನು ಘೋಷಿಸಿಲ್ಲ. ಮೇ.19ಕ್ಕೆ ‘ಡೇರ್ ಡೆವಿಲ್ ಮುಸ್ತಫಾ’ ಸೇರಿದಂತೆ ಕೆಲವೊಂದು ಸಿನಿಮಾಗಳು ಬಿಡುಗಡೆ ಕಾಣಲಿವೆ. ಅಲ್ಲಿಗೆ ಕನ್ನಡ ಚಿತ್ರರಂಗದ ಪಾಲಿಗೆ ಮೇ ಬಡತನದ ಮಾಸವೆಂದೇ ಹೇಳಬಹುದು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.