ಇಬ್ಬರು ಫೇಮಸ್ ನಟಿಯರಾದ ಸಮಂತಾ ರುತ್ ಪ್ರಭು ಮತ್ತು ಅನುಷ್ಕಾ ಶರ್ಮಾ ಅವರು ಒಟ್ಟಾಗಿ ಒಂದು ವೆಬ್ಸೀರೀಸ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಮಂತಾ ರುತ್ ಪ್ರಭು (Samantha Ruth Prabhu) ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಭಾರತೀಯ ಚಿತ್ರರಂಗದ ಅದ್ಭುತ ನಟಿಯರು. ಇತ್ತೀಚೆಗಷ್ಟೇ ಸಮಂತಾ ತಮ್ಮ ಇತ್ತೀಚಿನ ಚಿತ್ರ 'ಶಾಕುಂತಲಂ' ಬಿಡುಗಡೆಗೆ ಸುದ್ದಿಯಲ್ಲಿದ್ದರೆ, ಅನುಷ್ಕಾ ನಾಲ್ಕು ವರ್ಷಗಳ ನಂತರ 'ಚಕ್ಡಾ ಎಕ್ಸ್‌ಪ್ರೆಸ್' ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳಲು ಸಜ್ಜಾಗಿದ್ದಾರೆ. ಸಮಂತಾ ನಟನೆಯ ‘ಶಾಕುಂತಲಂ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿತ್ತು. ಈ ಸಿನಿಮಾ ಸೋಲು ಕಂಡಿದೆ. ಸದ್ಯ ಅವರು ‘ಖುಷಿ’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ವಿಜಯ್ ದೇವರಕೊಂಡ ನಾಯಕ. ಇದೀಗ ಈ ಇಬ್ಬರೂ ನಟಿಯರನ್ನು ಒಂದೇ ಕಡೆ ನೋಡುವ ಭಾಗ್ಯ ಫ್ಯಾನ್ಸ್ಗೆ ಬಂದಿದೆ. ಏಕೆಂದರೆ ಅನುಷ್ಕಾ ಶರ್ಮಾ ಮತ್ತು ಸಮಂತಾ ರುತ್ ಪ್ರಭು ನಿಯಮಿತವಾಗಿ ಭೇಟಿಯಾಗುತ್ತಿದ್ದಾರೆ, ಇದಕ್ಕೆ ಕಾರಣ, ಮುಂಬರುವ ಅವರ ಹೊಸ ಯೋಜನೆಗಾಗಿ. ಅದೂ ಮಹಿಳಾ ಕೇಂದ್ರಿತ ಯೋಜನೆ. ಇದೇ ಕಾರಣಕ್ಕೆ, ಇತ್ತೀಚೆಗೆ, ಈ ಇಬ್ಬರು ನಟಿಯರು ಸಾಮಾಜಿಕ ಮಾಧ್ಯಮದಲ್ಲಿಯೂ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಬ್ಬರು ಹಾಕಿದ ಪೋಸ್ಟ್ಗೆ ಇನ್ನೊಬ್ಬರು ಕಮೆಂಟ್ ಮಾಡುತ್ತಿದ್ದಾರೆ.
ಅಷ್ಟಕ್ಕೂ ಈ ಇಬ್ಬರೂ ಒಟ್ಟಿಗೇ ಕಾಣಿಸಿಕೊಳ್ಳುತ್ತಿರುವುದು ವೆಬ್ ಸೀರಿಸ್ನಲ್ಲಿ. ಅನುಷ್ಕಾ ಶರ್ಮಾ (Anushka Sharma) ಸದ್ಯ ಬಾಲಿವುಡ್ನಲ್ಲಿ ಬ್ಯುಸಿಯಾಗಿದ್ರೆ, ಸಮಂತಾ ಟಾಲಿವುಡ್ನಲ್ಲಿ ಬಿಜಿ, ಇದರ ಹೊರತಾಗಿಯೂ ಬಾಲಿ ಮತ್ತು ಟಾಲಿಒಟ್ಟಿಗೇ ಮಹಿಳಾ ಪ್ರಧಾನ ವೆಬ್ಸೀರೀಸ್ನಲ್ಲಿ ಕಾಣಿಸಿಕೊಳ್ಳುವ ಮುನ್ಸೂಚನೆ ಸಿಕ್ಕಿದೆ. ಇವರಿಬ್ಬರೂ ವೆಬ್ ಸೀರಿಸ್ ಒಂದರಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅನುಷ್ಕಾ ಶರ್ಮಾಗೆ ದೊಡ್ಡ ಅಭಿಮಾನಿ ಬಳಗ ಇದೆ. ಸಮಂತಾ ಕೂಡ ಆ್ಯಕ್ಷನ್ ಸಿನಿಮಾ ಮೂಲಕ ಫೇಮಸ್ ಆಗಿದ್ದಾರೆ. ಈಗ ಇಬ್ಬರೂ ಸೇರಿ ಒಂದು ಹೊಸ ವೆಬ್ ಸೀರಿಸ್ ನಿರ್ಮಾಣ ಮಾಡಲು ಹೊರಟಿದ್ದಾರೆ. ಸಮಂತಾ ಅವರು ಇದರಲ್ಲಿ ನಟಿಸುತ್ತಿದ್ದಾರೆ. ಅನುಷ್ಕಾ ಶರ್ಮಾ ಪತಿ, ವಿರಾಟ್ ಕೊಹ್ಲಿಯವರ ಭಾವ ಕರ್ಣೇಶ್ ಶರ್ಮಾ (Karnesh Sharma) ಅವರು ಈ ವೆಬ್ಸೀರೀಸ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.
ಸಮಂತಾರಿಂದ ದೂರವಾದ್ಮೇಲೆ KISS ಕೊಟ್ಟವರೆಷ್ಟು? ನಾಗಚೈತನ್ಯ ಬಾಯಿಬಿಟ್ಟ ರಹಸ್ಯ
ಕರ್ಣೇಶ್ ಶರ್ಮಾ ಅವರು ಈ ಮೊದಲು ‘ಪಾತಾಳ್ ಲೋಕ್’ (Patal Lok) ವೆಬ್ ಸೀರಿಸ್ ಹಾಗೂ ‘ಬುಲ್ಬುಲ್’, ‘ಪರಿ’ ಮೊದಲಾದ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಈಗ ಅವರು ವೆಬ್ ಸೀರಿಸ್ ನಿರ್ದೇಶನಕ್ಕೆ ಕಾಲಿಡುತ್ತಿದ್ದಾರೆ. ಈ ವೆಬ್ ಸೀರಿಸ್ಗೆ 25 ಕೋಟಿ ರೂಪಾಯಿ ಖರ್ಚಾಗಲಿದೆ. ಸಮಂತಾಗೆ ಕಥೆ ಇಷ್ಟವಾಗಿದ್ದು, ಅದನ್ನು ನಿರ್ಮಾಣ ಮಾಡಲು ಅವರು ಕೂಡ ಆಸಕ್ತಿ ತೋರಿಸಿದ್ದಾರೆ.
ಅಂದಹಾಗೆ, ಸಮಂತಾ ಇತ್ತೀಚೆಗೆ ವೆಬ್ ಸೀರಿಸ್ (Web Series) ಮಾಡಿದ್ದಾರೆ. ಅವರ ‘ದಿ ಫ್ಯಾಮಿಲಿ ಮ್ಯಾನ್ 2’ ಸರಣಿ ಹಿಟ್ ಆಗಿತ್ತು. ಈ ವೆಬ್ ಸೀರಿಸ್ ನಿರ್ದೇಶನ ಮಾಡಿದ್ದ ರಾಜ್ ಮತ್ತು ಡಿಕೆ ಹೊಸ ವೆಬ್ ಸೀರಿಸ್ ಡೈರೆಕ್ಷನ್ ಮಾಡುತ್ತಿದ್ದಾರೆ. ಇಂಗ್ಲಿಷ್ ‘ಸಿಟಾಡೆಲ್’ನ ಭಾರತದ ವರ್ಷನ್ ಇದಾಗಿದ್ದು, ಸಮಂತಾ ಇದರಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ವರುಣ್ ಧವನ್ ಕೂಡ ಇದರಲ್ಲಿ ನಟಿಸಿದ್ದಾರೆ. ಇದರಲ್ಲಿ ಸಾಕಷ್ಟು ಆ್ಯಕ್ಷನ್ ಇರಲಿದೆ. ಮತ್ತೊಂದೆಡೆ ಸಮಂತಾ ರುತ್ ಪ್ರಭು ವೆಬ್-ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದು ರುಸ್ಸೋ ಸಹೋದರನ ವೆಬ್-ಸರಣಿಯ ಭಾರತೀಯ ರೂಪಾಂತರವಾದ 'ಸಿಟಾಡೆಲ್', 'ಸಿಟಾಡೆಲ್.' ಭಾರತೀಯ ಆವೃತ್ತಿಯನ್ನು ರಾಜ್ ಮತ್ತು ಡಿಕೆ ನಿರ್ದೇಶಿಸುತ್ತಿದ್ದಾರೆ. ವರದಿಗಳ ಪ್ರಕಾರ, ಸಮತಾ ರುತ್ ಪ್ರಭು ವೆಬ್-ಸರಣಿಯಲ್ಲಿ ವರುಣ್ ಧವನ್ ಜೊತೆಗೆ ಹೈ-ಆಕ್ಟೇನ್ ಆಕ್ಷನ್ ಅನ್ನು ನಿರ್ವಹಿಸಲಿದ್ದಾರೆ. ನಟಿ ಜನವರಿಯಲ್ಲಿ ಪಾತ್ರಕ್ಕಾಗಿ ಚಿತ್ರೀಕರಣವನ್ನು ಪ್ರಾರಂಭಿಸಿದರು ಮತ್ತು ಅಂದಿನಿಂದ, ಅವರು ತಮ್ಮ ಮೂಗೇಟಿಗೊಳಗಾದ ಕೈಗಳು ಅಥವಾ ತರಬೇತಿ ಮತ್ತು ಸಾಹಸ ಪ್ರದರ್ಶಕ ಮತ್ತು ಸಾಹಸ ನಿರ್ದೇಶಕ (Director)ಯಾನಿಕ್ ಬೆನ್ ಅವರೊಂದಿಗೆ ಸಾಹಸಗಳನ್ನು ಪ್ರದರ್ಶಿಸುವ ದೃಶ್ಯಗಳನ್ನು ಸೆಟ್‌ಗಳಿಂದ ಹಂಚಿಕೊಳ್ಳುತ್ತಿದ್ದಾರೆ.
ವಿರಾಟ್ ಕೊಹ್ಲಿಜೀ... ಪ್ಲೀಸ್ ಹೆಂಡ್ತಿಗೆ ಒಂದು ಚಡ್ಡಿ ಕೊಡಿಸಿ ಅಂತಿದ್ದಾರೆ ನೆಟ್ಟಿಗರು!
ಕೆಲಸದ ಮುಂಭಾಗದಲ್ಲಿ, ಅನುಷ್ಕಾ ಕೊನೆಯದಾಗಿ 2018 ರಲ್ಲಿ ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಜೊತೆಗೆ 'ಜೀರೋ' (Zero) ಚಿತ್ರದಲ್ಲಿ ಪೂರ್ಣ ಪ್ರಮಾಣದ ಚಿತ್ರದಲ್ಲಿ ಕಾಣಿಸಿಕೊಂಡರು. ಇತ್ತೀಚೆಗೆ, ಅವರು ಟ್ರಿಪ್ಟಿ ಡಿಮ್ರಿ ಮತ್ತು ಬಾಬಿಲ್ ಖಾನ್ ನಟಿಸಿದ ಒಟಿಟಿ ಚಿತ್ರ 'ಕ್ಲಾ'ದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು.