
ಚೆನ್ನೈ: ಬಣ್ಣದ ಲೋಕವೇ ಹಾಗೆ. ಬೆರಳೆಣಿಕೆಯಷ್ಟು ನಟ-ನಟಿಯರು ಬಿಟ್ಟು ಉಳಿವರ ಪಾಡು ಹೀಗೇನೇ. ಟಾಪ್ನಲ್ಲಿದ್ದು, ಸುದ್ದಿ ಮಾಡುವಷ್ಟು ದಿನ ಅವರಿಗೆ ಅಭಿಮಾನಿಗಳು, ಅಭಿಮಾನಿ ಬಳಗಗಳು. ಆದರೆ ನಟನೆಗೆ ಅವಕಾಶವಿಲ್ಲದೇ ಒಂದರ ಮೇಲೊಂದರಂತೆ ಸೋಲಿನ ಸರಮಾಲೆಯೇ ಆದರೆ, ಬಹುತೇಕ ತಾರೆಯರ ಬದುಕು ಯಾರಿಗೂ ಬೇಡವಾಗುತ್ತದೆ. ಚಿತ್ರರಂಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಯಾವ ಮಟ್ಟಿಗಾದರೂ ಇಳಿಯುವ ಸ್ಥಿತಿ ನಿರ್ಮಾಣವಾಗಿಬಿಡುತ್ತದೆ. ಇನ್ನು ನಟಿಯರ ಪಾಡು ಬೇರೆ ಹೇಳಬೇಕಾಗಿಲ್ಲ. ಇಂಥವರನ್ನೇ ಕಾದು ಕುಳಿತಿರುವ ಸಿನಿ ಲೋಕದ ಬಕಪಕ್ಷಿಗಳಿಗೆ ನಟಿಯರು ಆಹಾರವಾಗಿ ಬಿಡುತ್ತಾರೆ. ಅಂಥವರಲ್ಲಿ ಒಬ್ಬರು ಕೆಲ ವರ್ಷಗಳ ಹಿಂದೆ ಸ್ಟಾರ್ ನಟರ ಜೊತೆ ಗುರುತಿಸಿಕೊಂಡು ಫೇಮಸ್ ಆಗಿದ್ದ ಬಹುಭಾಷಾ ನಟಿ ನಿಶಾ ನೂರ್.
ಟಿಕ್ ಟಿಕ್ (1981), ಕಲ್ಯಾಣ ಅಗತಿಗಳು, ಅಯ್ಯರ್ ದಿ ಗ್ರೇಟ್ (1990), ಮತ್ತು ದೇವಾಸುರಂ (1993) ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಶ್ರೀ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಹಾತ್ಯಂ / ಶ್ರೀ ರಾಘವೇಂದ್ರ (1985) ಸೇರಿದಂತೆ ಹಲವು ಬ್ಲಾಕ್ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ ನಟಿ ಈಕೆ. ರಜನಿಕಾಂತ್, ಕಮಲ್ ಹಾಸನ್‌ರಂತಹ ದಿಗ್ಗಜ ನಟರ ಜೊತೆಯೂ ನಟಿಸಿದರು. ಆದರೆ ಅದೃಷ್ಟ ಎನ್ನುವುದು ಎಲ್ಲರ ಜೀವನದಲ್ಲಿ ಬಾಗಿಲು ಓಪನ್ ಮಾಡಿಯೇ ಇರುವುದಿಲ್ಲವಲ್ಲ. ಅದ್ಭುತ ನಟನೆ, ಸೌಂದರ್ಯವತಿ, ದೊಡ್ಡ ದೊಡ್ಡ ಸ್ಟಾರ್ಗಳ ಜೊತೆ ಗುರುತಿಸಿಕೊಂಡಿದ್ದರೂ, ಅದೊಂದು ಹಂತದಲ್ಲಿ ಆಕೆಗೆ ಅವಕಾಶಗಳೇ ಇಲ್ಲವಾಗಿ ಹೋಯಿತು! 80-90ರ ದಶಕದಲ್ಲಿಯೇ ಗ್ಲಾಮರಸ್ ಲುಕ್ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ನಿದ್ದೆ ಕದ್ದ ನಟಿ ಈಕೆ. ಸ್ವಿಮ್ಮಿಂಗ್ ಸೂಟ್ನಲ್ಲಿ ಆಗಲೇ ಮಿಂಚಿದ್ದರು.
ನಿಶಾ ನೂರ್ ನಟಿಸಿದ ಚಿತ್ರಗಳು ತಮಿಳಿನ 'ಮಂಗಲ ನಾಯಕಿ' ಸಿನಿಮಾ ಮೂಲಕ ನಿಶಾ ಚಿತ್ರರಂಗ ಪ್ರವೇಶಿಸಿದರು. ಮುಂದೆ 'ಇಲ್ಲಮೈ ಕೋಲಂ', 'ಎನಕ್ಕಾಗ ಕಾತಿರು', 'ಅವಳ್ ಸುಮಂಗಲಿತಾನ್', 'ಶ್ರೀ ರಾಘವೇಂದ್ರ' ಸೇರಿದಂತೆ ಹಲವು ತಮಿಳು ಸಿನಿಮಾಗಳಲ್ಲಿ ಮಿಂಚಿದರು. ಮಮ್ಮುಟಿ ಜೊತೆ 'ಅಯ್ಯರ್ ದ ಗ್ರೇಟ್' ಹಾಗೂ ಮೋಹನ್ ಲಾಲ್ ಜೊತೆ 'ದೇವಸುರಮ್' ಸೇರಿದಂತೆ ಕೆಲ ಮಲಯಾಳಂ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಬಾಲಚಂದ್ರನ್, ವಿಸು ಚಂದ್ರಶೇಖರ್, ಭಾರತಿ ರಾಜಾರಂತಹ ನಿರ್ದೇಶಕ ಸಿನಿಮಾಗಳಲ್ಲಿ ನಟಿಸಿದರು. ಕಮಲ್ ಹಾಸನ್ ಜೊತೆ 'ಟಿಕ್ ಟಿಕ್ ಟಿಕ್' ಚಿತ್ರದ ಮೂವರು ನಟಿಯರಲ್ಲಿ ಒಬ್ಬರಾಗಿದ್ದರು. ಆದರೆ ಕೊನೆಗೆ ಅವರು ಕಂಡಿದ್ದು ದುರಂತ ಅಂತ್ಯ!
ಇಷ್ಟೆಲ್ಲಾ ಹಿಟ್ ಸಿನಿಮಾ ಕೊಟ್ಟರೂ ನಟಿಗೆ 90ರ ದಶಕದ ಮಧ್ಯ ಭಾಗದಲ್ಲಿ ಅವಕಾಶಗಳೇ ಸಿಗಲಿಲ್ಲ. ಬೋಲ್ಡ್ ದೃಶ್ಯಕ್ಕೂ ಸೈ ಎಂದರೂ ಯಾಕೋ ಅದೃಷ್ಟ ಕೈಕೊಟ್ಟಿತ್ತು. ದುಡಿದದ್ದು ಖಾಲಿ ಆಯಿತು. ಹೊಟ್ಟೆಪಾಡಿಗೆ ಏನಾದರೂ ಮಾಡಲೇಬೇಕಿತ್ತು. ಕೈಯಲ್ಲಿ ಹಣವಿದ್ದಾಗ ಮೆರೆದಿದ್ದ ನಟಿ ಈಗ ದುಡ್ಡಿಗಾಗಿ ಏನು ಬೇಕಾದರೂ ಮಾಡುವುದಕ್ಕೂ ಹೇಸದೇ ಹಿಡಿದದ್ದೇ ವೇ*ಶ್ಯಾವಾಟಿಕೆ ಧಂದೆ. ನಿರ್ಮಾಪಕರೊಬ್ಬರ ಮಾತು ನಂಬಿ, ಅವರಿಗೇ ಎಲ್ಲವನ್ನೂ ಅರ್ಪಿಸಿಬಿಟ್ಟರು ನಟಿ. ಅಲ್ಲಿಂದ ಮುಂದೆ ಆದದ್ದೆಲ್ಲವೂ ದುರಂತಮಯ. ಇದೇ ದಂಧೆಯಲ್ಲಿದ್ದ ನಿಶಾಗೆ ಹೆಚ್‌ಐವಿ ಸೋಂಕು ಹರಡಿತು ಎನ್ನಲಾಗುತ್ತಿದೆ. ಕೊನೆಯ ದಿನಗಳಲ್ಲಿ ನಿಶಾ ಸರಿಯಾದ ಸೂರು ಇಲ್ಲದೇ ಒಂದು ದರ್ಗಾ ಬಳಿ ಮಲಗಿದ್ದರಂತೆ. ಆಕೆಯ ದೇಹ ಬಡಕಲಾಗಿ, ಕಳಾಹೀನವಾಗಿ ಗುರುತು ಸಿಗದ ಸ್ಥಿತಿ ತಲುಪಿದ್ದರು. ನಿಶಾ ದಯನೀಯ ಸ್ಥಿತಿ ನೋಡಿ ಎನ್‌ಜಿಓವೊಂದು ಆಕೆಯ ಸಹಾಯಕ್ಕೆ ಮುಂದಾಗಿತ್ತು. ಆಕೆಯ ಆರೋಗ್ಯ ಪರೀಕ್ಷೆ ಮಾಡಿಸಿದ ಬಳಿಕ ಆಕೆ ಮಾರಣಾಂತಿಕ ಏಡ್ಸ್ ಕಾಯಿಲೆಯಿಂದ ಬಳಲುತ್ತಿರುವುದು ಗೊತ್ತಾಗಿತ್ತಂತೆ. 2007ರಲ್ಲಿ ಆಕೆ ಹೆಚ್‌ಐವಿ ವಿರುದ್ಧ ಹೋರಾಡುತ್ತಲೇ ಕೊನೆಯುಸಿರೆಳೆದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.