ಮುನಿರತ್ನ ವಿರುದ್ಧ ನಿಖಿಲ್ ಮುನಿಸು; ಕುರುಕ್ಷೇತ್ರಕ್ಕೆ ಟಾಟಾ?

Published : Jul 26, 2019, 12:12 PM ISTUpdated : Jul 26, 2019, 02:02 PM IST
ಮುನಿರತ್ನ ವಿರುದ್ಧ ನಿಖಿಲ್ ಮುನಿಸು; ಕುರುಕ್ಷೇತ್ರಕ್ಕೆ ಟಾಟಾ?

ಸಾರಾಂಶ

ಮುನಿರತ್ನ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸ್ಯಾಂಡಲ್‌ವುಡ್ ಬಹುನಿರೀಕ್ಷಿತ 'ಕುರುಕ್ಷೇತ್ರ' ಸಿನಿಮಾದಿಂದ ನಿಖಿಲ್ ಕುಮಾರಸ್ವಾಮಿ ಅಂತರ ಕಾಯ್ದುಕೊಂಡಂತಿದ್ದು ‘ಕುರುಕ್ಷೇತ್ರ’ ಸಿನಿಮಾದ ಯಾವುದೇ ಪ್ರಚಾರದಲ್ಲಿ ಭಾಗಿಯಾಗದ ಕಾರಣ ಅಭಿಮಾನಿಗಳಲ್ಲಿ ಇಂತಹ ಅನುಮಾನಕ್ಕೆ ಆಸ್ಪದವಾಗಿದೆ.

ಆರ್ ಆರ್ ನಗರ ಕ್ಷೇತ್ರದ ಶಾಸಕ ಮುನಿರತ್ನ ಒಂದೆಡೆ ರಾಜಕೀಯದಲ್ಲಿ ಬ್ಯುಸಿಯಾಗಿದ್ದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಸರ್ಕಾರ ರಚೆನೆಯಾಗುವ ಹಂತದಲ್ಲಿದೆ. ರಾಜಕೀಯ ಗುದ್ದಾಟದಲ್ಲಿ ಬ್ಯುಸಿಯಾಗಿದ್ದರೆ ಇನ್ನೊಂದೆಡೆ ಕುರುಕ್ಷೇತ್ರ ಸಿನಿಮಾ ರಿಲೀಸ್ ಡೇಟ್ ವಿಚಾರದಲ್ಲೂ ಗೊಂದಲದಲ್ಲಿದ್ದಾರೆ. 

ಸ್ಯಾಂಡಲ್‌ವುಡ್ ಸ್ಟಾರ್ ತಾರಾಗಣ ಸೇರಿ ಮಾಡಿರುವ 'ಕುರುಕ್ಷೇತ್ರ' ಪಂಚ ಭಾಷೆಯಲ್ಲಿ ಬಿಡುಗಡೆಯಾಗಲು ಸಿದ್ಧವಾಗುತ್ತಿದ್ದು ಕಾರಣಾಂತರಗಳಿಂದ ರಿಲೀಸ್ ದಿನಾಂಕ ಮುಂದೆ ಹೋಗುತ್ತಲೇ ಇದೆ. ಮೂಲಗಳ ಪ್ರಕಾರ ಸಿನಿಮಾ ಆಗಸ್ಟ್‌ 9 ರಂದು ದೇಶಾದ್ಯಂತ ಬಿಡುಗಡೆ ಮಾಡುವುದಾಗಿ ಚಿತ್ರತಂಡ ನಿರ್ಧರಿಸಿದೆ.

ಕುರುಕ್ಷೇತ್ರ 2 ನೇ ಟ್ರೇಲರ್ ರಿಲೀಸ್; ದರ್ಶನ್ ಅಬ್ಬರಕ್ಕೆ ಅಭಿಮಾನಿಗಳು ಫುಲ್ ಖುಷ್!

ಕೆಲ ದಿನಗಳ ಹಿಂದೆ ಅದ್ಧೂರಿಯಾಗಿ ಆಡಿಯೋ ಲಾಂಚ್‌ ಕಾರ್ಯಕ್ರಮ ನಡೆದಿದ್ದು ನಟಿಸಿರುವ ಎಲ್ಲಾ ಕಲಾವಿದರು ಭಾಗಿಯಾಗಿದ್ದರು. ಆದರೆ ನಿಖಿಲ್ ಕುಮಾರಸ್ವಾಮಿ ಮಾತ್ರ ಕಾಣಿಸಿಕೊಂಡಿರಲಿಲ್ಲ. ಅಷ್ಟೇ ಅಲ್ಲದೇ ಸಿನಿಮಾ ಸಂಬಂಧಪಟ್ಟ ಯಾವುದೇ ವಿಚಾರಕ್ಕೂ ಪ್ರತಿಕ್ರಿಯೆ ನೀಡದ ಕಾರಣ ಅಭಿಮಾನಿಗಳಿಗೆ ಗೊಂದಲ ಹೆಚ್ಚಾಗಿದೆ.

ಸಖತ್‌ ಸೌಂಡ್‌ ಮಾಡುತ್ತಿದೆ ಕುರುಕ್ಷೇತ್ರದ ಪ್ರೇಮ ಗೀತೆ!

ದರ್ಶನ್‌ಗೆಂದು ಒಂದು ಟೀಸರ್ ಹಾಗೂ ಟ್ರೇಲರ್‌ ರಿಲೀಸ್ ಆಗಿತ್ತು. ಆದರೆ ನಿಖಿಲ್‌ಗೆ ಮಾತ್ರ ಒಂದೇ ಒಂದು ಟೀಸರ್ ರಿಲೀಸ್ ಆಗಿದ್ದು ಬೇಸರ ತಂದಿದ್ಯಾ ಅಥವಾ ಮುನಿರತ್ನ ಮೇಲೆ ಮುನಿಸಿಕೊಂಡಿದ್ದಾರಾ ?

ಟ್ರೇಲರ್ ನೋಡಿದರೆ ಗೊತ್ತಾಗುತ್ತದೆ ನಿಖಿಲ್ ಸಿನಿಮಾದಲ್ಲಿ ಅಭಿಮನ್ಯು ಪಾತ್ರ ಮಾಡಿದ್ದಾರೆ. ಆದರೆ ಅದಕ್ಕೆ ನೀಡಿರುವ ಧ್ವನಿ ಮಾತ್ರ ಅವರದಲ್ಲ. ಮೊದಲ ಟೀಸರ್‌ ಬಿಡುಗಡೆಯಾದಾಗ ಅದರಲ್ಲಿ ನಿಖಿಲ್ ಧ್ವನಿಯಲ್ಲೇ 'ತಾತ, ಈ ಯುದ್ಧ ಸ್ವಾಭಿಮಾನದ ಸಂಕೇತ ' ಎಂಬ ಡೈಲಾಗೆ ಇತ್ತು. ಇದಾದ ಮೇಲೆ ಬಿಡುಗಡೆಯಾದ ಎರಡು ಟ್ರೇಲರ್‌ನಲ್ಲಿ ನಿಖಿಲ್ ಧ್ವನಿ ಬದಲಾಗಿದೆ. ನಿಖಿಲ್ ಯಾಕೆ ದಬ್‌ ಮಾಡಿಲ್ಲ? ಕುರುಕ್ಷೇತ್ರಕ್ಕೂ ನಿಖಿಲ್‌ಗೂ ಕ್ಲಾಶ್‌ ಆಗಿದ್ಯಾ ಎಂಬುದು ಕುತೂಹಲ ಮೂಡಿಸಿದೆ.

ದರ್ಶನ್ ಅಭಿಮಾನಿ ಬೆನ್ನ ಮೇಲೆ ದುರ್ಯೋಧನ ಟ್ಯಾಟೋ

ಇನ್ನೊಂದೆಡೆ ಮುನಿರತ್ನ ವಿರುದ್ಧ ಉಪಚುನಾವಣೆಯಲ್ಲಿ ಹಂಗಾಮಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಕುರಿತು ಗಂಭೀರವಾಗಿ ಚರ್ಚೆ ನಡೆದಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಟಿ ಮಂಜು ಭಾಷಿಣಿ ಫ್ಯಾನ್ಸ್​ ಕಣ್ಣಿಗೆ ಕಾಣಿಸಿದ್ರೆ ನಿಮ್​ ಕಥೆ ಗೋವಿಂದ: Bigg Boss ಡಾಗ್​ ಸತೀಶ್​ಗೆ ಯಾಕಿಂತ ಎಚ್ಚರಿಕೆ?
ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!