
ಮಡಿಕೇರಿ(ಫೆ.11): ಪಂಚರಂಗಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ವೀರಬಾಹು, ಅಣ್ಣಾಬಾಂಡ್ ಚಿತ್ರಗಳ ಬೆಡಗಿ ನಿಧಿ ಸುಬ್ಬಯ್ಯ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಮುಂಬೈ ಮೂಲದ ಉದ್ಯಮಿ ಲವೇಶ್ ಖೈರಜನಿ ಅವರನ್ನು ನಿಧಿ ವರಿಸಿದ್ದಾರೆ.
ಶನಿವಾರ ವಿರಾಜಪೇಟೆಯ ಖಾಸಗಿ ರೆಸಾರ್ಟ್‌ವೊಂದರಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಲವೇಶ್‌ನ ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನಿಧಿ ಸುಬ್ಬಯ್ಯ ಅವರ ಕೆಲವು ಆಪ್ತ ಬಂಧುಗಳು ಮಾತ್ರ ಈ ವೇಳೆ ಇದ್ದರು. ಉಳಿದವರಿಗೆ ರಾತ್ರಿ ಮಡಿಕೇರಿಯ ಖಾಸಗಿ ಹೋಟೆಲ್‌ವೊಂದರಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಶುಕ್ರವಾರ ಮೆಹಂದಿ ಸಂಪ್ರದಾಯದ ಬಳಿಕ ಉತ್ತರ ಭಾರತೀಯ ಕಲಾವಿದರು ವಿವಿಧ ನೃತ್ಯಗಳನ್ನು ಪ್ರದರ್ಶಿಸಿದರು.
ಶನಿವಾರ ಕೂಡಾ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನ ಉತ್ತರ ಭಾರತೀಯ ಹಾಗೂ ಕೊಡವ ಶೈಲಿಯ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಆಮಂತ್ರಿತರನ್ನು ಹೊತರುಪಡಿಸಿ ಯಾರಿಗೂ ಪ್ರವೇಶವಿರಲಿಲ್ಲ.
ಲವೇಶ್ ಖೈರಜನಿ, ನಿಧಿ ಸುಬ್ಬಯ್ಯ ಅವರ ಗೆಳೆಯರ ಮೂಲಕ ಒಂದೂವರೆ ವರ್ಷಗಳ ಹಿಂದೆ ಪರಿಚಯ ಆಗಿತ್ತು ಎನ್ನಲಾಗಿದೆ. ಮುಂಬೈ ಮೂಲದ ಲವೇಶ್ ಖೈರಜನಿ ತಂದೆ ಉದ್ಯಮಿ. ಟೆಕ್ಸ್‌ಟೈಲ್ಸ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.