ತೆಲುಗು ಹಿರಿಯ ನಟ ನಾಗಬಾಬು ಪುತ್ರಿ ನಿಹಾರಿಕಾ ಹಾಗೂ ಚೈತನ್ಯ ವಿಚ್ಛೇದನ ಖಚಿತವಾಗಿದೆ. 2020ರ ಡಿಸೆಂಬರ್ 9 ರಂದು ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆ ಸಮಾರಂಭ ನಡೆದಿತ್ತು. ಮದುವೆಯಾದ ಎರಡೂವರೆ ವರ್ಷಕ್ಕೆ ವಿಚ್ಛೇದನ ಖಚಿತವಾಗಿದೆ.
ಹೈದರಾಬಾದ್ (ಜು.4): ತೆಲುಗು ಸೂಪರ್‌ಸ್ಟಾರ್ ನಿಹಾರಿಕಾ ಕೊನಿಡೇಲ ಮತ್ತು ಚೈತನ್ಯ ಜೊನ್ನಲಗಡ್ಡ ದಂಪತಿಗಳು ಔಪಚಾರಿಕವಾಗಿ ವಿಚ್ಛೇದನ ಪಡೆದಿದ್ದಾರೆ. ದಂಪತಿ ಪರಸ್ಪರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡಿದೆ. ವಿಚ್ಛೇದನದ ತೀರ್ಪು ಕೂಡ ನೀಡಲಾಗಿದೆ ಎನ್ನುವ ಮಾಹಿತಿಗಳಿವೆ. ಇದರೊಂದಿಗೆ, ದಂಪತಿಗಳು ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ಆದರೆ, ದಂಪತಿ ವಿಚ್ಛೇದನಕ್ಕೆ ಕಾರಣ ತಿಳಿದುಬಂದಿಲ್ಲ. ದಂಪತಿಗಳ ನಡುವೆ ಇದ್ದ ಅಗಾಧ ಭಿನ್ನಾಭಿಪ್ರಾಯಗಳು ವಿಚ್ಛೇದನಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ. ನಿಹಾರಿಕಾ ಕೊನೆಡೇಲ ಕಳೆದ ಕೆಲವು ಸಮಯಗಳಿಂದ ಪತಿ ಚೈತನ್ಯರಿಂದ ದೂರವಿದ್ದರು. ನಾಗಬಾಬು ತೆಲುಗು ಸೂಪರ್‌ಸ್ಟಾರ್ ಚಿರಂಜೀವಿ ಅವರ ಸಹೋದರ. ಇಬ್ಬರೂ ವ್ಯಕ್ತಿಗಳು ಒಪ್ಪಿಗೆಯ ಮೇರೆಗೆ ವಿಚ್ಛೇದನ ಅರ್ಜಿಯನ್ನು ಸಲ್ಲಿಕೆ ಮಾಡಲಾಗಿತ್ತು. ಹೈದರಾಬಾದ್‌ನ ಕುಕಟ್‌ಪಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. 2020ರ ಡಿಸೆಂಬರ್ 9 ರಂದು ರಾಜಸ್ಥಾನದಲ್ಲಿ ಅದ್ದೂರಿಯಾಗಿ ನಿಹಾರಿಕಾ ಮದುವೆ ನಡೆದಿತ್ತು. ಈ ಸಮಾರಂಭದಲ್ಲಿ ಅಲ್ಲು ಅರ್ಜುನ್, ರಾಮ್‌ಚರಣ್, ಪವನ್ ಕಲ್ಯಾಣ್ ಸೇರಿದಂತೆ ತೆಲುಗು ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು.
2023ರ ಮಾರ್ಚ್‌ನಲ್ಲಿ ಚೈತನ್ಯ ಜೊನ್ನಲಗಡ್ಡ ಅವರು ತಮ್ಮ ಇನ್ಸ್‌ಟಾಗ್ರಾಮ್ ಖಾತೆಯಲ್ಲಿ ನಿಹಾರಿಕಾ ಅವರೊಂದಿಗಿನ ಚಿತ್ರಗಳನ್ನು ಡಿಲೀಟ್ ಮಾಡಿದಾಗ ಇವರಿಬ್ಬರು ಬೇರೆ ಬೇರೆ ಆಗುತ್ತಾರೆ ಎನ್ನುವ ಅನುಮಾನಗಳಿದ್ದವು. ಇದು ದೊಡ್ಡ ಮಟ್ಟದಲ್ಲಿ ಬ್ರೇಕಪ್ ವದಂತಿಗಳನ್ನು ಹುಟ್ಟುಹಾಕಿತ್ತು. ಆದರೆ, ಆಗ ನಿಹಾರಿಕಾ ಆ ಚಿತ್ರಗಳನ್ನು ತೆಗೆದು ಹಾಕಿರಲಿಲ್ಲ. ನಂತರ ನಿಹಾರಿಕಾ ಕೂಡ ತಮ್ಮ ಚಿತ್ರಗಳನ್ನು ಸೋಶಿಯಲ್ ಮೀಡಿಯಾ ಖಾತೆಗಳಿಂದ ತೆಗೆದುಹಾಕಿದ್ದರು.
ಇತ್ತೀಚೆಗೆ, ಚೈತನ್ಯ ಜೆವಿ ಗ್ಲೋಬಲ್ ವಿಪಸ್ಸನಾ ಪಗೋಡಾ ಧ್ಯಾನ ಕೇಂದ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಅವರು 10 ದಿನಗಳ ಕಾಲ ಧ್ಯಾನವನ್ನು ಅಭ್ಯಾಸ ಮಾಡಿದ್ದರು. ವಿಚ್ಛೇದನವು ಈಗ ಅಧಿಕೃತ ಮತ್ತು ಸಂಪೂರ್ಣವಾಗಿದೆ ಎನ್ನುವುದು ಖಚಿತಗೊಂಡಿದೆ.
Niharika Konidela: 'ಬದುಕಲು ಬಿಡಿ' ಹೊಸ ಪೋಸ್ಟ್ ಮೂಲಕ ವಿಚ್ಛೇದನ ದೃಢ ಪಡಿಸಿದ್ರಾ 'ಮೆಗಾ' ಕುಟಂಬದ ಮಗಳು?
ನಿಹಾರಿಕಾ ಮತ್ತು ಚೈತನ್ಯ ಮದುವೆ ರಾಜಾಸ್ಥಾನದ ಉದಯ್‌ಪುರದಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಇಡೀ ಮೆಗಾ ಕುಟುಂಬ ಮದುವೆಯಲ್ಲಿ ಭಾಗಿಯಾಗಿತ್ತು. ಚಿರಂಜೀವಿ, ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಕುಟುಂಬ ಸೇರಿದಂತೆ ಸಂಪೂರ್ಣ ಕುಟುಂಬ ಹಾಜರಿತ್ತು. ಅದ್ದೂರಿಯಾಗಿ ನಿಹಾರಿಕಾ ಮದುವೆ ನೆರವೇರಿತ್ತು. ಮದುವೆ ಫೋಟೋಗಳು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಮದುವೆಯಾಗಿ ಎರಡು ವರ್ಷಗಳಲ್ಲೇ ವಿಚ್ಛೇದನ ಪಡೆದ್ರಾ ರಾಮ್ ಚರಣ್ ಸಹೋದರಿ?
ರೇವ್ ಪಾರ್ಟಿ ದಾಳಿಯಲ್ಲಿ ಪೊಲೀಸ್ ವಶಕ್ಕೆ ನಿಹಾರಿಕಾ: 2022ರಲ್ಲಿ ಹೈದರಾಬಾದ್ ನ ಬಂಜಾರಾ ಹಿಲ್ಸ್ ನಲ್ಲಿ ಮಧ್ಯರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿಮೇಲೆ ಪೊಲೀಸರು ನಡೆಸಿದ್ದ ದಾಳಿಯಲ್ಲಿ ನಿಹಾರಿಕಾ ಅವರನ್ನು ಪೊಲೀಸರು ಬಂಧಿಸಿದ್ದರು. ನಿಹಾರಿಕಾ ಪೊಲೀಸ್ ವಶಕ್ಕೆ ಪಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಗಲೂ ಕೂಡ ನಿಹಾರಿಕಾ ಮತ್ತು ಚೈತನ್ಯ ನಡುವೆ ಯಾವುದೂ ಸರಿ ಇಲ್ಲ ಎನ್ನುವ ಸುದ್ದಿ ಕೇಳಿ ಬಂದಿತ್ತು. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಪತಿಯನ್ನು ಅನ್ ಫಾಲೋ ಮಾಡಿ ಫೋಟೋವನ್ನು ಡಿಲೀಟ್ ಮಾಡುವ ಮೂಲಕ ಇಬ್ಬರೂ ಬೇರೆ ಬೇರೆ ಆಗಿದ್ದಾರೆ ಎನ್ನುವ ವದಂತಿಗೆ ಪುಷ್ಠಿ ನೀಡಿದ್ದಾರೆ.