ಸದಾ ಚಿತ್ರ-ವಿಚಿತ್ರ ಧರಿಸಿ ಟ್ರೋಲ್ ಆಗ್ತಿರೋ ನಟಿ ಉರ್ಫಿ ಜಾವೇದ್, ಈಗ ಫುಲ್ ಡ್ರೆಸ್ ಹಾಕಿಕೊಂಡು ಶಾಕ್ ನೀಡಿದ್ದಾರೆ. ನೆಟ್ಟಿಗರು ಹೇಳ್ತಿರೋದೇನು?
ಉರ್ಫಿ ಜಾವೇದ್ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ ಸೋಷಿಯಲ್ ಮೀಡಿಯಾದಲ್ಲಿ (Social media) ಸೆನ್ಸೇಷನ್ ಕ್ರಿಯೇಟ್ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಕೆಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ದಿನವೂ ಬಟ್ಟೆಗಳಿಂದಲೇ ಟ್ರೋಲ್ (Troll) ಆಗುವುದು ಎಂದರೆ ಈಕೆಗೆ ತುಂಬಾ ಖುಷಿ. ಇತ್ತೀಚೆಗೆ ಈಕೆಯ ಡ್ರೆಸ್ಗಾಗಿಯೇ ಮುಂಬೈನ ರೆಸ್ಟೋರೆಂಟ್ನಲ್ಲಿ ಎಂಟ್ರಿ ಸಿಕ್ಕಿರಲಿಲ್ಲ. ಈ ಕುರಿತು, ಉರ್ಫಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ (Post) ಹಾಕುವ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದರು. ನಾವು ನಿಜವಾಗಿಯೂ 21 ನೇ ಶತಮಾನದಲ್ಲಿ ಬದುಕುತ್ತಿದ್ದೇವೆಯೇ ಎಂಬ ಪ್ರಶ್ನೆ ಕೇಳಿದ್ದರು.
ಕಳೆದ ವಾರವಷ್ಟೇ ಉರ್ಫಿಯನ್ನು ನೆಟ್ಟಿಗರ ಪೈಕಿ ಹಲವರು ಕೊಂಡಾಡಿದ್ದರು. ಇದಕ್ಕೆ ಕಾರಣ, ಈಕೆ ಹ್ಯಾಂಡ್ ಬ್ಯಾಗ್ ನಿಂದ ಡ್ರೆಸ್ ತೊಟ್ಟಿದ್ದರು. ಈ ಡ್ರೆಸ್ ಆಕೆಯ ವಿಚಿತ್ರ ಅವತಾರಗಳಲ್ಲಿ ಒಂದಾಗಿದ್ದರೂ ಉರ್ಫಿ ಜಾವೇದ್ ಅವರ ಕ್ರಿಯೇಟಿವಿಟಿ ನೋಡಿ ಅಭಿಮಾನಿಗಳು ಕೊಂಡಾಡಿದ್ದರು. ಉರ್ಫಿ ಜಾವೇದ್ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದರು. ಈ ವೀಡಿಯೊದಲ್ಲಿ, ಉರ್ಫಿ ಜೀನ್ಸ್ ಮತ್ತು ಟಿ-ಶರ್ಟ್ ಧರಿಸಿದ್ದರು. ಅದೇ ಸಮಯದಲ್ಲಿ, ಉರ್ಫಿ ಜಾವೇದ್ ಕೈಯಲ್ಲಿ ಒಂದು ಕೈಚೀಲ ಕಾಣಿಸಿಕೊಂಡಿದೆ. ಸ್ವಲ್ಪ ಸಮಯದ ನಂತರ ಉರ್ಫಿ ಈ ಕೈಚೀಲದ ಉಡುಪನ್ನು ತಯಾರಿಸಿ ಧರಿಸಿದ್ದರು. ಕೈಚೀಲದಿಂದ ತಮಗಾಗಿ ಸ್ಕರ್ಟ್ ಮತ್ತು ಟಾಪ್ ತಯಾರಿಸಿ ಅದರಲ್ಲಿ ಹಣ ಇಡಲು ಪಾಕೆಟ್ ಕೂಡ ಮಾಡಿಕೊಂಡಿದ್ದರು. 'ನಾನು ಬ್ಯಾಗ್‌ನಿಂದ ಡ್ರೆಸ್ ಮಾಡಿದ್ದೇನೆ. ಈ ಉಡುಗೆ ಸಂಪೂರ್ಣವಾಗಿ ಬಾಂಬ್ ಆಗಿದೆ. ಈ ಉಡುಪನ್ನು ಧರಿಸಲು ಯಾವುದೋ ಪಾರ್ಟಿಗಾಗಿ ಕಾಯಲು ನನಗೆ ಸಾಧ್ಯವಿಲ್ಲ. ಆದ್ದರಿಂದ ಈಗಲೇ ಇದನ್ನು ಧರಿಸುತ್ತಿದ್ದೇನೆ ಎಂದಿದ್ದರು. ಈ ಕ್ರಿಯೆಟಿವಿಟಿ ನೋಡಿ ಜನರು ಅಪರೂಪಕ್ಕೆ ಖುಷಿಪಟ್ಟಿದ್ದರು.
ಬ್ಯಾಗ್ ಒಳಗೆ ಉರ್ಫಿಯೋ, ಉರ್ಫಿ ಒಳಗೆ ಬ್ಯಾಗೊ? ಇನ್ನು ಕಾಯಲು ಸಾಧ್ಯವಿಲ್ಲವೆಂದ ನಟಿ
ಆದರೆ ಉರ್ಫಿ ಜಾವೇದ್ ಎಲ್ಲರನ್ನೂ ಬೆಚ್ಚಿಬೀಳಿಸಿದ್ದು ಈ ಸಲ. ಇದಕ್ಕೆ ಕಾರಣ, ಮೈತುಂಬ ಡ್ರೆಸ್ ತೊಟ್ಟು. ಅಂದರೆ ಕುರ್ತಾ, ಪ್ಯಾಂಟ್ ಧರಿಸಿ ಶಾಕ್ (Shock) ನೀಡಿದ್ದಾರೆ. ತಮಗೆ ಬಟ್ಟೆ ಎಂದರೆ ಅಲರ್ಜಿ. ಬಟ್ಟೆ ಧರಿಸಿದರೆ ಮೈಮೇಲೆ ಗುಳ್ಳೆಗಳು ಏಳುತ್ತವೆ ಎಂದು ಕೆಲ ತಿಂಗಳ ಹಿಂದೆ ಉರ್ಫಿ ಹೇಳಿಕೆ ಕೊಟ್ಟಿದ್ದರು. ಆದರೆ ಇದೀಗ ಮೈತುಂಬಾ ಬಟ್ಟೆ ಧರಿಸಿ ಸಾವರ್ಜನಿಕ ಸ್ಥಳದಲ್ಲಿ ಕಾಣಿಸಿಕೊಂಡಿದ್ದಾರೆ. ನಿಜವಾಗಿಯೂ ಈಕೆ ಉರ್ಫಿ ಹೌದಾ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಇವತ್ತು ಸೂರ್ಯ ಯಾವ ಕಡೆ ಹುಟ್ಟಿದ್ದಾನೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಅವರು ಕಾರಿನಿಂದ ಇಳಿಯುತ್ತಿದ್ದಂತೆಯೇ ಯುವಕರು ಅರೇ ಇವತ್ತು ಕುರ್ತನಾ ಎಂದುಪ್ರಶ್ನಿಸಿದ್ದಾರೆ. ಕೆಲ ಜನರು ಈಕೆಯ ಹೊಸ ಅವತಾರದ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಕೆಲವರು ಹೀಗೆಲ್ಲಾ ನೀವು ಡ್ರೆಸ್ ಹಾಕಿದರೆ, ನಮಗೆ ಗುರುತಿಸಲು ಕಷ್ಟವಾಗುತ್ತದೆ ಎಂದು ಕಾಲೆಳೆದಿದ್ದರೆ, ಇನ್ನು ಕೆಲವರು ಹಾಗಿದ್ದರೆ ನಾಳೆ ಮೈತುಂಬಾ ಗುಳ್ಳೆಗಳು ಏಳುವುದು ಗ್ಯಾರೆಂಟಿ ಎಂದಿದ್ದಾರೆ.
ಹಚ್ಚೆ ಹಾಕಿಸ್ಕೊಂಡು ಹಲವು ಬಾರಿ ಮೋಸ ಮಾಡ್ದ: ಗೋಳು ತೋಡಿಕೊಂಡ Urfi Javed