ಮಧುಬಾಲಾ ಜೊತೆ ಪ್ರೀಮಿಯರ್ ಪದ್ಮಿನಿ ಹತ್ತಿದ ಜಗ್ಗೇಶ್!

By Web Desk  |  First Published Sep 19, 2018, 3:05 PM IST

ರೋಜಾ ಖ್ಯಾತಿಯ ಮಧುಬಾಲಾ ಮತ್ತೆ ಕನ್ನಡ ಚಿತ್ರದಲ್ಲಿ | ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿ ಜಗ್ಗೇಶ್‌ ಜೊತೆ ನಟಿಸುತ್ತಿದ್ದಾರೆ  | ಶೃತಿ ನಾಯ್ಡು ಈ ಚಿತ್ರದ ನಿರ್ಮಾಪಕಿ. 


ಬೆಂಗಳೂರು (ಸೆ. 19): ಬಹುಭಾಷಾ ನಟಿ ಮಧುಬಾಲ ಕನ್ನಡದಲ್ಲೀಗ ಪೋಷಕ ಪಾತ್ರಗಳ ಮೂಲಕ ಬ್ಯುಸಿ ಆಗಿದ್ದಾರೆ. ರಮೇಶ್ ಇಂದಿರಾ ನಿರ್ದೇಶನದ, ನಿರ್ಮಾಪಕಿ ಶ್ರುತಿ ನಾಯ್ಡು ನಿರ್ಮಾಣದ ‘ಪ್ರೀಮಿಯರ್ ಪದ್ಮಿನಿ’ ಚಿತ್ರದಲ್ಲಿ ಜಗ್ಗೇಶ್ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ.

ಸದ್ಯಕ್ಕೀಗ ಅದರ ಚಿತ್ರೀಕರಣದಲ್ಲಿ ಭಾಗವಹಿಸಿರುವ ಮಧುಬಾಲ ವಿಶೇಷ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬೆಂಗಳೂರು ಹೊರವಲಯದ ಉತ್ತರಹಳ್ಳಿ ಬಳಿಯ ರುದ್ರಾಕ್ಷಿ ಎಂಬಲ್ಲಿ ಚಿತ್ರೀಕರಣ ಶುರುವಾಗಿದೆ. ಅಲ್ಲಿ ಜಗ್ಗೇಶ್ ಹಾಗೂ
ಮಧುಬಾಲ ಕಾಂಬಿನೇಷನ್ ಪಾತ್ರಗಳ ಚಿತ್ರೀಕರಣ ಭರದಿಂದ ಸಾಗಿದೆ.

Tap to resize

Latest Videos

‘ಜಗ್ಗೇಶ್ ಮತ್ತು ಮಧುಬಾಲ ದಂಪತಿ ಆಗಿ ಅಭಿನಯಿಸಿದ್ದರೂ ಅವರ ಪಾತ್ರಗಳದ್ದು ವಿಭಿನ್ನವಾದ ವ್ಯಕ್ತಿತ್ವ. ಪ್ರೀಮಿಯರ್ ಪದ್ಮಿನಿಯ ಒಡೆಯ ಜಗ್ಗೇಶ್ ಅವರಿಗೆ ಹಳೇ ಕಾಲದ, ಆಚಾರ-ವಿಚಾರಗಳಿಗೆ ತಕ್ಕಂತೆ ಬದುಕಬೇಕೆನ್ನುವ ಸ್ವಭಾವ. ಪತ್ನಿಗೆ ಮಾತ್ರ ಮಾತ್ರ ಮಾಡ್ರನ್ ಜೀವನವೇ ಬೇಕು. ಹಾಗೆಯೇ ಬದುಕಬೇಕೆನ್ನುವುದು ಆಕೆಯ ಆಸೆ. ತದ್ವಿರುದ್ಧವಾದ ಅವರಿಬ್ಬರ ಮನಸ್ಥಿತಿಯಿಂದ ಆ ದಂಪತಿ ಬದುಕು ಹೇಗೆಲ್ಲ ತಿರುವುಗಳಿಗೆ ಸಿಲುಕುತ್ತದೆ. ಅಲ್ಲಿಂದ ಏನಾಗುತ್ತೆ ಎನ್ನುವುದು ಕತೆ’ ಎನ್ನುತ್ತಾರೆ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು. 

click me!