
ಇಂದಿನ ಯುವ ಸಮುದಾಯದ ದಂಪತಿ ಚಿಕ್ಕ ಚಿಕ್ಕ ವಿಚಾರಗಳಿಗೂ ಗಲಾಟೆ ಮಾಡಿಕೊಂಡು ದೂರವಾಗುವ ಮಾತುಗಳನ್ನಾಡುತ್ತಾರೆ. ನಾವು ಏನು ಮಾಡುತ್ತಿದ್ದೇವೆ? ತೆಗೆದುಕೊಳ್ಳುತ್ತಿರೋ ನಿರ್ಧಾರಗಳಿಂದ ಭವಿಷ್ಯದಲ್ಲಾಗವ ಪರಿಣಾಮಗಳೇನು ಎಂಬುದರ ಬಗ್ಗೆ ಒಂದು ಕ್ಷಣವೂ ಯೋಚಿಸಲ್ಲ. ಇಂತಹ ಕಥೆಯನ್ನೊಳಗೊಂಡ ಕಿರುಚಿತ್ರವೊಂದು ಬಿಡುಗಡೆಯಾಗಿದ್ದು, ಯುಟ್ಯೂಬ್‌ನಲ್ಲಿ ಹಲ್-ಚಲ್ ಸೃಷ್ಟಿಸುತ್ತಿದೆ. ಬಿಗ್‌ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ನಟನೆಯ ಕಿರುಚಿತ್ರದ ವ್ಯೂವ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಥ್ರಿಲ್ಲಿಂಗ್ ಆಂಡ್ ಸಸ್ಪೆನ್ಸ್ ಕಥೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಕೇವಲ 17 ನಿಮಿಷದ ಕ್ಲೈಮ್ಯಾಕ್ಸ್ ನಿಮ್ಮ ಎಲ್ಲಾ ಊಹೆಗಳನ್ನು ಮೀರಿ ನಿಮ್ಮನ್ನು ಅಚ್ಚರಿಗೊಳಿಸುತ್ತದೆ. ಕೊನೆಗೆ ಇಂತಹ ಆಟ ಆಡೋದು ಬೇಡ ಎಂದು ವೀಕ್ಷಕರು ಕೈ ಮುಗಿಯುತ್ತಾರೆ. ಮೋಕ್ಷ ಪಟಂ ಹೆಸರಿನ ಕಿರುಚಿತ್ರ ಆಗಸ್ಟ್ 27ರಂದು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಕಾರ್ತಿಕ್ ಮಹೇಶ್ ಮತ್ತು ಬೃಂದಾ ಆಚಾರ್ಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಮದುವೆಯಾಗಿ ಕೆಲವೇ ದಿನಗಳು ಆಗಿರುವ ಜೋಡಿ ರೊಮ್ಯಾಂಟಿಕ್ ಆಗಿ ಸಮಯ ಸ್ಪೆಂಡ್ ಮಾಡುತ್ತಿರುತ್ತಾರೆ. ಈ ವೇಳೆ ಮದುವೆಯಲ್ಲಿ ಬಂದ ಗಿಫ್ಟ್‌ನ್ನು ಜೋಡಿ ಓಪನ್ ಮಾಡುತ್ತಾರೆ. ಹಾವು-ಏಣಿ ಆಟದಂತಿರುವ ಒಂದು ಪ್ಲೇ ಬೋರ್ಡ್ ಮತ್ತು ಎರಡು ವಾಚ್‌ಗಳು ಗಿಫ್ಟ್‌ನಲ್ಲಿರುತ್ತವೆ. ವಾಚ್ ಕೈಗಳಿಗೆ ಕಟ್ಟಿಕೊಂಡು ಗೇಮ್ ಆರಂಭಿಸಬೇಕು. ಹಾವು-ಏಣಿಯಂತಿರೋ ಆಟದ ಹೆಸರು ಮೋಕ್ಷ ಪಟಂ.
ಕುತೂಹಲದಿಂದ ಜೋಡಿ ಮೋಕ್ಷ ಪಟಂ ಆಟವಾಡಲು ಮುಂದಾಗುತ್ತಾರೆ. ಮೊದಲಿಗೆ ಯುವತಿ ಕವಡೆ ಹಾಕಿದಾಗ 3 ಬೀಳುತ್ತೆ. ಆ 3ನೇ ಸಂಖ್ಯೆಯ ಚೌಕದಲ್ಲಿ ದುರಾಸೆ ಎಂದು ಬರೆಯಲಾಗಿರುತ್ತದೆ. ಇದನ್ನು ನೋಡಿದ ಕೂಡಲೇ ದುರಾಸೆ ಅಂದಕೂಡಲೇ ಮೊದಲಿಗೆ ನೆನಪಾಗೋದು ಏನು ಅಂತ ಕೇಳುತ್ತಾನೆ. ಅದಕ್ಕೆ ಆತನ ಹೆಂಡತಿ ಮುಚ್ಚುಮರೆ ಇಲ್ಲದೇ ಒಬ್ಬ ಕೋಟ್ಯಧಿಪತಿ ಸುಂದರ ಹುಡುಗ ನನಗೆ ಪ್ರಪೋಸ್ ಮಾಡಬೇಕೆಂಬ ದುರಾಸೆ ಇತ್ತು. ಹೀಗಾದ್ರೆ ಲೈಫ್ ಸೆಟೆಲ್ ಅನ್ನೋದು ವಿಚಾರ ಆಗಿತ್ತು ಎಂದು ಹೇಳಿದಾಗ ಗಂಡ, ಹಾಗಾದ್ರೆ ನನ್ನಂದ್ರೆ ನಿನಗೆ ಇಷ್ಟವಿಲ್ಲವಾ ಎಂದು ಪ್ರಶ್ನೆ ಮಾಡುತ್ತಾನೆ.
ಮುಂದೆ ಗಂಡ ಕವಡೆ ಹಾಕಿದಾಗ ಸಂಖ್ಯೆ 8 ಬೀಳುತ್ತೆ. ಆ ಚೌಕದಲ್ಲಿ ಭಯ ಎಂದು ಬರೆಯಲಾಗಿರುತ್ತದೆ. ಇದನ್ನು ನೋಡಿದ ಕೂಡಲೇ ನನಗೆ ಯಾವುದೇ ಭಯವಿಲ್ಲ ಎಂದು ಹೇಳುತ್ತಾನೆ. ಕೂಡಲೇ ಕೈಗೆ ಕಟ್ಟಿಕೊಂಡ ವಾಚ್‌ನಿಂದ ಇದು ಸುಳ್ಳು, ಮತ್ತೊಮ್ಮೆ ಪ್ರಯತ್ನಿಸಿ ಎಂಬ ದ್ವನಿ ಕೇಳುತ್ತದೆ. ಆಗ ಹೀರೋ ನನಗೆ ಸಾವಿನ ಭಯ ಎಂದು ಹೇಳಿಕೊಳ್ಳುತ್ತಾನೆ.
ಇದನ್ನೂ ಓದಿ: ನದಿಯಲ್ಲಿ ಒಬ್ಬಳೇ ಬೋಟಿಂಗ್ ಹೋದ ಮಹಿಳೆಗೆ ಆಗಿದ್ದೇನು? ಈ ಶಾರ್ಟ್ ಫಿಲಂ ವೀಕ್ಷಿಸುವ ಮುನ್ನ ಎಚ್ಚರ!
ಇದೇ ರೀತಿಯಲ್ಲಿ ಆಟ ಮುಂದುವರಿಯುತ್ತದೆ. ಈ ವೇಳೆ ಇಬ್ಬರು ವೈಯಕ್ತಿಕ ಆಸೆಗಳನ್ನು ಹೇಳಿಕೊಂಡಾಗ ಜೋಡಿ ನಡುವೆ ಮನಸ್ತಾಪ ಉಂಟಾಗಲು ಆರಂಭವಾಗುತ್ತದೆ. ಈ ಆಟವನ್ನು ಇಲ್ಲಿಗೆ ನಿಲ್ಲಿಸೋಣ ಅಂದ್ರೆ ಹೆಂಡ್ತಿ ಕೇಳಲ್ಲ. ನಂತರ ಇಬ್ಬರು ಆಟ ಮುಂದುವರಿಸುತ್ತಾರೆ. ಯಾವೆಲ್ಲಾ ಕಾರಣಗಳಿಂದ ಜೋಡಿ ನಡುವೆ ಭಿನ್ನಮತ ಉಂಟಾಗುತ್ತೆ ಅನ್ನೋದು ನೋಡುಗರಲ್ಲಿ ಕುತೂಹಲವನ್ನು ಹೆಚ್ಚಿಸುತ್ತದೆ. ಅಂತಿಮವಾಗಿ ಈ ಕಿರುಚಿತ್ರ ಕ್ಲೈಮ್ಯಾಕ್ಸ್ ನಿಮ್ಮಲ್ಲಿ ಅಚ್ಚರಿಯನ್ನುಂಟು ಮಾಡುತ್ತದೆ. ಈ ಕ್ಲೈಮ್ಯಾಕ್ಸ್ ಏನು ಅನ್ನೋದನ್ನು ತಿಳಿದುಕೊಳ್ಳಲು 'ಮೋಕ್ಷ ಪಟಂ' ಶಾರ್ಟ್ ಮೂವಿಯನ್ನು ತಪ್ಪದೇ PRK Audio Youtube Channelನಲ್ಲಿ ನೋಡಿ.
ಇದನ್ನೂ ಓದಿ: ಭೂತ-ಪ್ರೇತ ಇಲ್ಲ ಅನ್ನೋ ಸುಂದರ ಹುಡುಗರೇ ಸಸ್ಪೆನ್ಸ್-ಥ್ರಿಲ್ಲರ್ ಕಿರುಚಿತ್ರವನ್ನ ಒಮ್ಮೆ ನೋಡಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.