ಹರ್ಷಿಕಾ ಪೂಣಚ್ಚಗೆ ಪ್ರತಿಷ್ಟಿತ ವ್ಯಕ್ತಿಗಳಿಂದ ಬೆದರಿಕೆ

Published : Oct 27, 2018, 09:52 AM IST
ಹರ್ಷಿಕಾ ಪೂಣಚ್ಚಗೆ  ಪ್ರತಿಷ್ಟಿತ ವ್ಯಕ್ತಿಗಳಿಂದ ಬೆದರಿಕೆ

ಸಾರಾಂಶ

ಮೀಟೂ ವೀರರಿಗೆ ಏಟು ಕೊಟ್ಟಿದ್ದಕ್ಕೆ ಈ ಪಾಟಿ ಬೆದರಿಕೆ ಹಾಕುವುದೇ!? - ಹೀಗೆ ಹರ್ಷಿಕಾ ಪೂಣಚ್ಚ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಾರೆ. ಈ ಕಾಟ ಹೀಗೆ ಮುಂದುವರೆದರೆ ಪೊಲೀಸ್ ಠಾಣೆಯ ಮೆಟ್ಟಿಲೇರುವುದಾಗಿಯೂ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ

ಹರ್ಷಿಕಾ ಇತ್ತೀಚೆಗೆ ಪಬ್ಲಿಸಿಟಿಗಾಗಿ ಮೀಟೂ ಬಳಸಿಕೊಳ್ಳುತ್ತಿರುವವರ ವಿರುದ್ಧ ಗರಂ ಆಗಿ ಹೇಳಿಕೆ ನೀಡಿದ್ದರು. ಆ್ಯಕ್ಟಿಸ್ಟ್ ಹೋರಾಟಗಾರ್ತಿಯರು ಪ್ರಸಿದ್ಧ ನಟ, ನಿರ್ಮಾಪಕರು, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬಿದ್ದಿದ್ದನ್ನು ನಾನು ನೋಡಿದ್ದೇನೆ ಎಂದು ಹೇಳಿದ್ದರು. ಇದೀಗ ಅವರು ಈ ಕಾರಣಕ್ಕೆ ತನಗೆ ಬೆದರಿಕೆ ಕರೆಗಳು ಬರುತ್ತಿವೆ, ಪ್ರತಿಷ್ಟಿತ ವ್ಯಕ್ತಿಗಳು ಬೆದರಿಸುತ್ತಿದ್ದರೆ ಎಂದು ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರಾಣ ಬೆದರಿಕೆಯ ಹಿಂದಿರೋದು ಯಾರು?
ಹರ್ಷಿಕಾ ಪೂಣಚ್ಚರ ಈ ತಿರುಗೇಟು ಅವರಿಗೆ ಪ್ರಾಣ ಬೆದರಿಕೆಗಳು ಬರುವಂತೆ ಮಾಡಿವೆಯಂತೆ. ಇಷ್ಟಕ್ಕೂ ಈ ಕೊಡಗಿನ ಪುಟ್ಟಿಗೆ ಯಾರು ಪಟ್ಟಾಗಿ ಪ್ರಾಣ ಬೆದರಿಕೆ ಹಾಕುತ್ತಿರುವುದು? ‘ನಾನು ಸತ್ಯದ ಪರವಾಗಿ ಮಾತನಾಡಿದ್ದೇನೆ. ಇಲ್ಲಿ ಯಾರ ಪರವೋ, ವಿರುದ್ಧವೋ ಮಾತನಾಡಿಲ್ಲ. ಅನ್ಯಾಯ ಆದಾಗಲೇ ಪ್ರತಿಭಟನೆ ಮಾಡಬೇಕು. ಬಾಲಿವುಡ್ ಚಿತ್ರವನ್ನು ನಾನು ರಿಜೆಕ್ಟ್ ಮಾಡಿ ಬಂದಿದ್ದು ಅದೇ
ಕಾರಣಕ್ಕೆ. ಆದರೆ, ಈಗ ಏನಾಗುತ್ತಿದೆ? ಅವಕಾಶನೂ ಬೇಕು. ಅದನ್ನು ಪಡೆದುಕೊಳ್ಳುವುದಕ್ಕೆ ಹೊಂದಾಣಿಕೆಯನ್ನೂ ಮಾಡಿಕೊಳ್ಳುತ್ತೀರಿ.

ಈಗ ಮೀಟೂ ಅಂತೀರಿ. ಇದು ಸರಿನಾ? ಅಂತ ನಾನು ಕೇಳುತ್ತಿರುವುದು. ಹೀಗೆ ವಾಯ್ಸ್ ಮಾಡಿದ ಮರು ದಿನದಿಂದಲೇ ಒಂದೇ ಸಮನೇ ಬೆದರಿಕೆಗಳು ಬರುತ್ತವೆ. ಮೀಟೂ ಅಭಿಯಾನದ ವಿಚಾರದಲ್ಲಿ ನೀವು ಮಾತನಾಡಬಾರದು ಎಂದು ನನ್ನ ಧ್ವನಿಯನ್ನು ತಡೆಯಲಿಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ದೂರು ದಾಖಲಿಸುತ್ತೇನೆ. ಅನ್‌ನೋನ್ ನಂಬರ್‌ಗಳಿಂದ ಕಾಲ್ ಬರುತ್ತಿವೆ.ಇದು ಹೀಗೆ ಮುಂದುವರೆದರೆ ನಾನು ಖಂಡಿತ ಪೊಲೀಸ್ ಸ್ಟೇಷನ್ ಮೆಟ್ಟಿಲೇರುತ್ತೇನೆ. ಕಾನೂನು ಮೂಲಕ ತಕ್ಕ ಪಾಠ ಕಲಿಸುತ್ತೇನೆ’ ಎಂಬುದು ಹರ್ಷಿಕಾ ಅವರ ಎಚ್ಚರಿಕೆ ಮಾತುಗಳು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕರ್ನಾಟಕ ನನ್ನ ಅಣ್ಣನ ಮನೆ.. 'ಅಖಂಡ 2'ನಲ್ಲಿ ಬಾಲಯ್ಯ ಡೈಲಾಗ್‌ಗೆ ಶಿಳ್ಳೆ-ಚಪ್ಪಾಳೆ ಜೈಜೈ ಘೋಷ!
ಡೆವಿಲ್ ಇನ್ ಟ್ರಬಲ್: ನಟ ದರ್ಶನ್‌ನಿಂದ ಒಂದು ಗನ್ ಕಿತ್ತುಕೊಂಡರೂ ಮತ್ತೊಂದು .22mm ರೈಫಲ್ ಮರೆತ ಪೊಲೀಸರು