ಕ್ಷಮೆ ಕೇಳಿ ಚಿತ್ರರಂಗದ ಘನತೆ ಉಳಿಸಿ: ಲಿಂಗದೇವರು

Published : Oct 26, 2018, 12:41 PM ISTUpdated : Oct 26, 2018, 01:00 PM IST
ಕ್ಷಮೆ ಕೇಳಿ ಚಿತ್ರರಂಗದ ಘನತೆ ಉಳಿಸಿ: ಲಿಂಗದೇವರು

ಸಾರಾಂಶ

ಶೃತಿ ಹರಿಹರನ್ ರವರೇ ನೀವು ಅಧ್ಬುತ ನಟಿ, ಚಲನಚಿತ್ರ ರಂಗಕ್ಕೆ ಬೇಕು. ವೈಯಕ್ತಿಕ ಹೋರಾಟದ ತೀವ್ರತೆ ಕಾಲ ಕಳೆದಂತೆ ಇರಲ್ಲ. ಈಗ ನಿಮ್ಮ ಈ ಆಂದೋಲನ/ ಹೋರಾಟಕ್ಕೆ ಬೆಂಬಲಿಸುತ್ತಿರುವವರು ನಿಮ್ಮ ಬದುಕನ್ನ ರೂಪಿಸಲು ಬರಲ್ಲ. ನಾನು ನನ್ನ ಸ್ವ ಅನುಭವದಿಂದ ನಿಮ್ಮಲ್ಲಿ ಈ ಮಾತನ್ನ ಹೇಳ್ತಾ ಇದ್ದೇನೆ ಎಂದು ನಿರ್ದೇಶಕ ಲಿಂಗದೇವರು ಹೇಳಿದ್ದಾರೆ. 

ಬೆಂಗಳೂರು (ಅ. 26): ನಟ ಅರ್ಜುನ್ ಸರ್ಜಾ ಮೇಲೆ ಶೃತಿ ಹರಿಹರನ್ ಮಾಡಿರುವ ಮೀಟೂ ಬಗೆಹರಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ನಿನ್ನೆ ಅಂಬರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಾರಥ್ಯ ಸಭೆ ಕೂಡಾ ವಿಫಲವಾಗಿದೆ. ಸಮಸ್ಯೆ ಮಾತ್ರ ಕಗ್ಗಂಟಾಗೆ ಉಳಿದಿದೆ. ಮೀಟೂ ಅಭಿಯಾನದ ಬಗ್ಗೆ ನಿರ್ದೇಶಕ ಲಿಂಗದೇವರು ಪ್ರತಿಕ್ರಿಯೆ ನೀಡಿದ್ದಾರೆ. ಶೃತಿ ಹರಿಹರನ್ ಗೆ ಕಿವಿಮಾತು ಹೇಳಿದ್ದಾರೆ.  

#MeToo ಸಿನಿಮಾ ಉದ್ಯಮದ ಘನತೆ ಮತ್ತು ಸದರಿ ಉದ್ಯಮದಲ್ಲಿ ತೊಡಗಿಕೊಂಡಿರುವ ಹಲವಾರು ಕುಟುಂಬಗಳ ಘನತೆಯನ್ನ ಬೀದಿಗೆ ತಂದು ಸಂಭ್ರಮಿಸುತ್ತಿದ್ದಾರ ಅನ್ನಿಸ್ತಾ ಇದೆ..

ಸಂಧಾನ ವಿಫಲ : ಕೋರ್ಟ್'ನಲ್ಲೇ ಬಗೆಹರಿಯಲಿ ಎಂದ ನಟರು

ಸೂಕ್ಷ್ಮವಾದದನ್ನ ಕೇವಲ ತಮ್ಮ ತಮ್ಮ ದೃಷ್ಟಿಕೋನಕ್ಕೆ 

ಸೀಮಿತ ಮಾಡಿಕೊಂಡು, ನಮ್ಮ ದೇಶದ ಕಾನೂನಿನ ಅನ್ವಯ ಈ ರೀತಿಯ ಅಪರಾಧಗಳನ್ನ ಹೇಗೆ ಪ್ರತಿಕ್ರಿಯೆ ಮಾಡಬೇಕು ಅನ್ನುವುದನ್ನ ಗಮನಿಸಿಲ್ಲ ಎಂಬ ಭಾವನೆ ನನ್ನದು. ಉದಾಹರಣೆಗೆ ನ್ಯಾಯಕ್ಕಾಗಿ ಈ ಹೋರಾಟ ಅನ್ನೋದೆ ಇದ್ದರೆ, ನ್ಯಾಯ ಎಲ್ಲಿ ಸಿಗುತ್ತೆ ? ಸಾಮಾಜಿಕ ಜಾಲತಾಣ ? ಮಾಧ್ಯಮದಲ್ಲಿ ? ಎಲ್ಲಿ ? 

ಈ ಸದರಿ ಅಪರಾಧಗಳಿಗೆ IPC sec 354, 354A B C ಮತ್ತು 509ರ ಅನ್ವಯ ಆಗುತ್ತೆ. ( ಪೋಲಿಸ್ ಅಧಿಕಾರಿಯ ಪ್ರಕಾರ ) ಸದರಿ ಐಪಿಸಿ ಸೆಕ್ಷನ್‌ಗಳಲ್ಲಿ ವಿವರಿಸಿರುವಂತೆ ನ್ಯಾಯ ಸಿಗೋದು ಕಷ್ಟ ಎಂಬ ಅನಿಸಿಕೆ ನನ್ನದು. ಇಲ್ಲಿ ಇನ್ನೊಂದು ಜ್ಞಾಪಕ ಇಟ್ಕೋಬೇಕಾಗಿರೋದು Justice delayed itself is a Injustice. 

ಮುಗಿಯದ ಮೀಟೂ ಘಾಟು; ಪ್ರಶಾಂತ್ ವಿರುದ್ಧ ಶೃತಿ ದೂರು

ಇವತ್ತಿನ Tv ಮಾಧ್ಯಮ ಪ್ರಸಿದ್ಧ ವ್ಯಕ್ತಿಗಳ ವೈಯಕ್ತಿಕ ಬದುಕಿನಲ್ಲಿ ಪ್ರವೇಶ ಮಾಡಿರುವ ಹಿನ್ನೆಲೆಯಲ್ಲಿ ಸಿನಿಮಾದಲ್ಲಿ ದುಡಿಯುವ ಎಲ್ಲರೂ ಸ್ವಲ್ಪ ಸಂಯಮದಿಂದ ಮತ್ತು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ ಅನ್ನುವ ಭಾವನೆ ನನ್ನದು . TV ಮಾಧ್ಯಮದವರಿಗೆ ವ್ಯಾಪಾರ, ಹಾಗಾಗಿ ಅದನ್ನ ನಾವು ಪ್ರಶ್ನಿಸಿದೇ ನಾವು ನಮ್ಮಲ್ಲೇ ಮಾರ್ಪಾಡು ಮಾಡುವ  ಮೂಲಕ ಮಾದರಿ ಆಗಬೇಕಿದೆ. 

ಶೃತಿ ಹರಿಹರನ್ ರವರೇ ನೀವು ಅಧ್ಬುತ ನಟಿ, ಚಲನಚಿತ್ರ ರಂಗಕ್ಕೆ ಬೇಕು.  ವೈಯಕ್ತಿಕ ಹೋರಾಟದ ತೀವ್ರತೆ ಕಾಲ ಕಳೆದಂತೆ ಇರಲ್ಲ. ಈಗ ನಿಮ್ಮ ಈ ಆಂದೋಲನ/ ಹೋರಾಟಕ್ಕೆ ಬೆಂಬಲಿಸುತ್ತಿರುವವರು ನಿಮ್ಮ ಬದುಕನ್ನ ರೂಪಿಸಲು ಬರಲ್ಲ. ನಾನು ನನ್ನ ಸ್ವ ಅನುಭವದಿಂದ ನಿಮ್ಮಲ್ಲಿ ಈ ಮಾತನ್ನ ಹೇಳ್ತಾ ಇದ್ದೇನೆ. Dont carried away with the "temporary" support you are getting.

ಒಂದು ಕ್ಷಮೆ ಕೇಳಿ ದಯವಿಟ್ಟು

ಹಾಗೆ, ಅರ್ಜುನ್ ಸರ್ಜಾ ರವರು ಮತ್ತು ಅವರ ಕುಟುಂಬ ಚಲನಚಿತ್ರ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ. ಹಿರಿಯರು ಇರುವ ನಿಮ್ಮ ಕುಟುಂಬ ಕೂಡ  ಕ್ಷಮಿಸಿ ಮತ್ತು ಆಗ ನಡೆದ ಘಟನೆ ಶೃತಿ ಹರಿಹರನ್ ಅವರನ್ನ  ಘಾಸಿ ಗೊಳಿಸಿದೆ. ಹಾಗಾಗಿ ನೀವು ಕೂಡ ಕ್ಷಮೆ ಕೇಳುವ ಮೂಲಕ ಸಮಾಜಕ್ಕೆ ಕ್ಷಮಾದಾನದ ಶಕ್ತಿಯನ್ನ ಹೇಳಿ ಎಂಬ ಮನವಿ ನನ್ನದು.

ಯೋಚಿಸಿ ನೋಡಿ, ತುಂಬ ಸಲಹೆಗಳನ್ನ ತೆಗೆದುಕೊಳ್ಳಲು ಹೋಗಬೇಡಿ. ಇದು ನಿಮ್ಮ ನಿರ್ಧಾರ ಆಗಬೇಕೆ ವಿನಃ ಬೇರೆಯವರ ಮಾತುಗಳು ಪ್ರೇರಣೆ ಆಗಬಾರದು. ನೀವಿಬ್ಬರೂ ಕೇಳುವ ಒಂದು ಕ್ಷಮೆ ಚಲನಚಿತ್ರ ರಂಗದ ಘನತೆಯನ್ನ ಹೆಚ್ಚಿಸುತ್ತೆ ಎಂಬ ಭಾವನೆ ನನ್ನದು.  

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕರ್ನಾಟಕ ನನ್ನ ಅಣ್ಣನ ಮನೆ.. 'ಅಖಂಡ 2'ನಲ್ಲಿ ಬಾಲಯ್ಯ ಡೈಲಾಗ್‌ಗೆ ಶಿಳ್ಳೆ-ಚಪ್ಪಾಳೆ ಜೈಜೈ ಘೋಷ!
ಡೆವಿಲ್ ಇನ್ ಟ್ರಬಲ್: ನಟ ದರ್ಶನ್‌ನಿಂದ ಒಂದು ಗನ್ ಕಿತ್ತುಕೊಂಡರೂ ಮತ್ತೊಂದು .22mm ರೈಫಲ್ ಮರೆತ ಪೊಲೀಸರು