
ಕೆಲವು ವರ್ಷಗಳಿಂದ ಕಂಗನಾ ಹಾಗೂ ಹೃತಿಕ್ ವಿವಾದಾತ್ಮಕ ಸಂಬಂಧ ದೊಡ್ಡ ಮಟ್ಟದಲ್ಲಿ ಬಿ-ಟೌನ್‌ನಲ್ಲಿ ಸದ್ದು ಮಾಡುತ್ತಿದೆ. ಎಲ್ಲವೂ ತಣ್ಣಗಾಯಿತು ಎನ್ನುವಷ್ಟರಲ್ಲಿ ಆಲಿಯಾ ಭಟ್ ಕುಟುಂಬಕ್ಕೂ ಕಂಗನಾಳ ಸಹೋದರಿ ರಂಗೋಲಿಗೂ ವಾರ್ ಶುರುವಾಗಿತ್ತು. ಆದರೆ ಈಗ ವಾರ್ ಶುರುವಾಗಿರುವುದು ರಂಗೋಲಿ ಹಾಗೂ ಹೃತಿಕ್ ನಡುವೆ.
ಕಂಗನಾ ಅಭಿನಯದ ಸಿನಿಮಾ 'ಸೂಪರ್-30' ಸಿನಿಮಾ ಹಾಗೂ ಹೃತಿಕ್ ಅಭಿನಯದ 'ಮೆಂಟಲ್ ಹೈ ಕ್ಯಾ ' ಸಿನಿಮಾ ಜುಲೈ 26 ಕ್ಕೆ ಬಿಡುಗಡೆಯಾಗುತ್ತಿದ್ದು ಇದಕ್ಕೆ ಹೃತಿಕ್ ತಂಡದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಂಗೋಲಿ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರ 'ಸೂಪರ್-30 'ಗೆ ಹೃತಿಕ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ಗರಂ ಆಗಿದ್ದಾರೆ. ಆಕ್ರೋಶ ವ್ಯಕ್ತಪಡಿಸಿದ ಅಭಿಮಾನಿಗಳಿಗೆ ರಂಗೋಲಿ 'ಸೂಪರ್-30’ ನನ್ನ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಇದರ ರಿಲೀಸ್ ಡೇಟ್ ನಾನೇ ಅನೌನ್ಸ್ ಮಾಡಿದ್ದು. ಇದರಲ್ಲಿ ಯಾರ ಹಸ್ತಕ್ಷೇಪವು ಇಲ್ಲ. ಇದು ನನ್ನ ನಿರ್ಧಾರ. ತಂಡದ್ದು ಅಥವಾ ನಟಿಯದ್ದಲ್ಲ' ಎಂದು ಟ್ಟೀಟ್ ಮಾಡಿದ್ದಾರೆ.
ಕಂಗನಾಗೆ ಚಪ್ಪಲಿ ಎಸೆದ್ರಾ ಮಹೇಶ್ ಭಟ್?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.