'ನಾನು ಮಾಡಿದ ದೊಡ್ಡ ತಪ್ಪಿದು': ಪ್ರಕಾಶ್ ಬೆಳವಾಡಿ

By Web Desk  |  First Published May 10, 2019, 8:43 AM IST

‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಪ್ರಕಾಶ್ ಬೆಳವಾಡಿ ತಮ್ಮ ಜೀವನದ ದೊಡ್ಡ ತಪ್ಪೊಂದರ ಬಗ್ಗೆ ಜನರೊಂದಿಗೆ ಬಹಿರಂಗವಾಗಿ ಹಂಚಿಕೊಂಡಿದ್ದಾರೆ.


ಎಷ್ಟೇ ದೊಡ್ಡ ವ್ಯಕ್ತಿ ಆದ್ರೂ ಜೀವನದಲ್ಲಿ ತಪ್ಪು ಮಾಡುವುದು ಸಹಜ. ಅದನ್ನು ಒಪ್ಪಿಕೊಂಡು ಸರಿ ಮಾಡಿಕೊಳ್ಳುವುದು ದೊಡ್ಡ ಗುಣ. ಅಂತಹ ಕೆಲವೊಂದು ತಪ್ಪುಗಳ ಬಗ್ಗೆ ಪ್ರಕಾಶ್ ಬೆಳವಾಡಿ ’ವೀಕೆಂಡ್ ವಿತ್ ರಮೇಶ್’ ನಲ್ಲಿ ಹಂಚಿಕೊಂಡಿದ್ದಾರೆ.

ನಟ ಹಾಗೂ ರಂಗಕರ್ಮಿ ಪ್ರಕಾಶ್ ಬೆಳವಾಡಿ ತಮ್ಮ ನೇರ ಗುಣದಿಂದ ಫೇಮಸ್ ಆದವರು. ವೀಕೆಂಡ್ ಕಾರ್ಯಕ್ರಮದ ಕೊನೆಯಲ್ಲಿ ರಮೇಶ್ ಆಗಮಿಸಿರುವ ಅತಿಥಿಗಳ ಬಳಿ ಒಂದು ಪ್ರಶ್ನೆ ಹೇಳುತ್ತಾರೆ ‘ನೀವು ಯಾರಿಗಾದರೂ ಸಾರಿ, ಥ್ಯಾಂಕ್ಸ್ ಹೇಳುವುದಾದರೆ ಹೇಳಬಹುದು ’ ಎಂದು. ಅದಕ್ಕೆ ಪ್ರಕಾಶ್ ಬೆಳವಾಡಿ ಕೊಟ್ಟ ಉತ್ತರವಿದು.

Tap to resize

Latest Videos

undefined

‘ನಾನು ಮಾಡಿದ ದೊಡ್ಡ ತಪ್ಪು ಅಂದ್ರೆ ಸಾಲ. ಇದರಿಂದ ಸಾಲಗಾರರು ಮನೆ ಬಾಗಿಲಿಗೆ ಬಂದು ನಿಲ್ಲುವಂತಾಗುತ್ತದೆ. ಅದಕ್ಕೆ ನನ್ನ ಕುಟುಂಬದವರನ್ನು ಕ್ಷಮೆ ಕೇಳುತ್ತೇನೆ. ಇದರಿಂದ ಅವರಿಗೂ ಕೂಡ ಬಹಳ ಅವಮಾನ ಆಗಿದೆ. ಎಷ್ಟೋ ಜನರಿಗೆ ಇನ್ನೂ ಹಣ ನೀಡಿಲ್ಲ. ಆದರೆ ಆದಷ್ಟು ಬೇಗ ಕೊಡುತ್ತೇನೆ’ ಎಂದು ಹೇಳಿದರು.

 

click me!