
ನವದೆಹಲಿ (ಅ. 15): ಬಾಲಿವುಡ್ ನಲ್ಲಿ #MeToo ಭಾರೀ ಸದ್ದು ಮಾಡುತ್ತಿದೆ. #MeToo ಬಿಸಿ ನಟಿ ಐಶ್ವರ್ಯಾ ರೈಗೂ ತಟ್ಟಿದೆ. ಕೆಲ ದಿನಗಳ ಹಿಂದೆ ಸಲ್ಮಾನ್ ಖಾನ್ ಐಶ್ವರ್ಯಾ ಬಗ್ಗೆ ಹೇಳಿರುವ ಹೇಳಿಕೆಗೂ, ಈಗ ಐಶ್ವರ್ಯಾ ಮಾಡಿರುವ ಟ್ವೀಟ್‌ಗೂ ಕಾಕತಾಳಿಯವಾಗಿದೆ. ಹಾಗಾಗಿ ಸಲ್ಮಾನ್‌ನಿಂದ ಐಶ್ವರ್ಯಾ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.
ನನಗೂ ಕೂಡಾ ಅವಮಾನ ಮಾಡಲಾಗಿತ್ತು. ಸಾಕಷ್ಟು ಬಾರಿ ಹೊಡೆತ ಕೂಡಾ ತಿಂದಿದೀನಿ. ಬಾಲಿವುಡ್ ನ ಖ್ಯಾತ ಚಾರಿಟಿ ಮ್ಯಾನ್ ಎಂದು ಕರೆಸಿಕೊಳ್ಳುವವರು ಮನುಷ್ಯತ್ವವನ್ನೇ ಕಳೆದುಕೊಂಡಿದ್ದಾರೆ ಎಂದು ಐಶ್ವರ್ಯಾ ಮಾಡಿರುವ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ.
ನಿಜವಾಗಿಯೂ ಐಶ್ವರ್ಯಾ ರೈ ಈ ರೀತಿ ಟ್ವೀಟ್ ಮಡಿದ್ದಾರಾ ಎಂದು ಪರಿಶೀಲಿಸಿದಾಗ, ಅವರ ಟ್ವಿಟರ್ ಖಾತೆಯಲ್ಲಿ ಈ ರೀತಿ ಅವರು ಬರೆದುಕೊಂಡಿಲ್ಲ. ಅವರ ಹೆಸರಿನಲ್ಲಿ ಸಾಕಷ್ಟು ಖಾತೆಗಳನ್ನು ಓಪನ್ ಮಾಡಲಾಗಿದ್ದು ಫೇಕ್ ಅಕೌಂಟ್ ನಿಂದ ಈ ರೀತಿಯಾಗಿ ಟ್ವೀಟ್ ಮಾಡಿರಬಹುದು ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.