
ನವದೆಹಲಿ (ಅ. 09): ಬಾಲಿವುಡ್ ಅಂಗಳದಲ್ಲಿ #MeToo ಅಭಿಯಾನದ ಕಾವು ಹೆಚ್ಚಾಗಿದೆ. ಕಂಗನಾ ರಾಣಾವತ್ ಸೇರಿದಂತೆ ಸಾಕಷ್ಟು ಮಂದಿ ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಏತನ್ಮಧ್ಯೆ ಸಲ್ಮಾನ್ ಖಾನ್ ತಮ್ಮ ಮಾಜಿ ಪ್ರೇಯಸಿ ಐಶ್ವರ್ಯ ರೈ ಬಗ್ಗೆ ಮಾತನಾಡಿರುವ ವಿಡಿಯೋ ಕ್ಲಿಪ್ಪಿಂಗ್ ಎಲ್ಲಾ ಕಡೆ ಸರ್ಕ್ಯೂಲೇಟ್ ಆಗುತ್ತಿದೆ.
ನನಗೆ ಸಲ್ಮಾನ್ ಖಾನ್ ಹೊಡೆದಿದ್ದ ಎಂದು ಈ ಹಿಂದೆ ಐಶ್ವರ್ಯಾ ರೈ ಮಾಡಿರುವ ಆರೋಪಕ್ಕೆ ಸಲ್ಮಾನ್ ಖಾನ್ ಉತ್ತರಿಸಿದ್ದಾರೆ. ಒಂದು ವೇಳೆ ನಾನು ನಿಜವಾಗಿಯೂ ಹೊಡೆದಿದ್ದರೆ ಆ ’ಮಹಿಳೆ’ ಖಂಡಿತಾ ಬದುಕುತ್ತಿರಲಿಲ್ಲ ಎಂದಿದ್ದಾರೆ.
ನಮ್ಮಿಬ್ಬರ ನಡುವೆ ಬ್ರೇಕ್ ಆದಾಗ ಸಲ್ಮಾನ್ ನನ್ನನ್ನು ಮಾತನಾಡಲು ಕರೆದಿದ್ದ. ಆ ವೇಳೆ ತುಂಬಾ ಬಾಲಿಶವಾಗಿ ಮಾತನಾಡಿದ್ದ. ಹೊಡೆಯಲು ಕೂಡಾ ಮುಂದಾಗಿದ್ದ. ಅದೃಷ್ಟವಶಾತ್ ನನಗೇನೂ ಆಗಿರಲಿಲ್ಲ. ಏನೂ ಆಗಿಲ್ಲವೆಂಬಂತೆ ಹೊರ ನಡೆದೆ ಎಂದು ಐಶ್ವರ್ಯಾ ರೈ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.