ಮಜಾ ಟಾಕೀಸ್ ರಾಣಿ ಕುಟುಂಬಕ್ಕೆ ವಾರಸುದಾರನ ಆಗಮನ!

Published : Sep 10, 2019, 10:43 AM IST
ಮಜಾ ಟಾಕೀಸ್ ರಾಣಿ ಕುಟುಂಬಕ್ಕೆ ವಾರಸುದಾರನ ಆಗಮನ!

ಸಾರಾಂಶ

ನಗುತ್ತಾ, ನಗಿಸುತ್ತಾ ಮಜಾ ಮನೆಯಲ್ಲಿ ಸುಜಾ ಕಾಲೆಳೆಯುತ್ತಾ ಎಲ್ಲರ ಮನೆ ಮಾತಾಗಿರುವ ರಾಣಿ ಅಲಿಯಾಸ್ ಶ್ವೇತಾ ಚಂಗಪ್ಪ ಅಮ್ಮನಾಗಿದ್ದಾರೆ. ಬಿಗ್‌ ಬಾಸ್ ಮನೆ, ಹಲವು ಧಾರಾವಾಹಿ ಹಾಗೂ ಚಿತ್ರಗಳ ಮೂಲಕ ಕನ್ನಡಿಗರ ಮನ ಗೆದ್ದ ನಟಿ ಸಂತೋಷದಲ್ಲಿ ಎಲ್ಲರೂ ಭಾಗಿಯಾಗೋಣ.

ನಟನೆ, ನಿರೂಪಣೆಯನ್ನು ಸಮಾನವಾಗಿ ಸಂಭಾಳಿಸುತ್ತಾ ಕಿರುತೆರೆ ಬ್ಯೂಟಿ ಎಂದೇ ಖ್ಯಾತರಾದ ಶ್ವೇತಾ ಚಂಗಪ್ಪ ಹಾಗೂ ಪತಿ ಕಿರಣ್ ಅಪಚ್ಚು ಕುಟುಂಬಕ್ಕೆ ಸೆಪ್ಟೆಂಬರ್ 10ರಂದು ವಾರಸುದಾರನ ಎಂಟ್ರಿ ಆಗಿದೆ.

ಇನ್‌ಸ್ಟಾಗ್ರಾಂ ಖಾತೆಯಲ್ಲಿ ‘We are 3 now, ತಂದೆ , ತಾಯಿ, ಪ್ಯಾಮಿಲಿ ಹಾಗೂ ನಿಮ್ಮೆಲ್ಲರ ಆಶೀರ್ವಾದ ಹಾಗೂ ಹಾರೈಕೆ ಹೀಗೆ ಇರಲಿ.... ಇಂದು ಕಿರಣ್ ಹಾಗೂ ನನ್ನ ಕುಟುಂಬಕ್ಕೆ ಸಂಭ್ರಮದ ಸುಗ್ಗಿ. ನಮಗೆ ಗಂಡು ಮಗುವಾಗಿದೆ,' ಎಂದು ಮಗನ ಬೆರಳು ಹಿಡಿದಿರುವ ಫೋಟೋ ಅಪ್ಲೋಡ್ ಮಾಡಿ, ಸಂತೋಷ ಹಂಚಿ ಕೊಂಡಿದ್ದಾರೆ.

ಪತಿಯೊಂದಿಗೆ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿಕೊಂಡ ಫೋಟೋಗಳನ್ನೂ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು ಶ್ವೇತಾ. ಸೆಲೆಬ್ರಿಟಿಗಳು ಶ್ವೇತಾಗೆ ಮಾಡಿದ ಸೀಮಂತದ ಫೋಟೋಗಳನ್ನೂ ಶೇರ್ ಮಾಡಿಕೊಂಡು, ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿದ್ದರು.

‘ಮಜಾ ಟಾಕೀಸ್’ ರಾಣಿ ತಾಯ್ತನಕ್ಕೆ ಬ್ಯಾಡ್ ಕಾಮೆಂಟ್; ಫ್ಯಾನ್ಸ್ ಮೇಲೆ ಗರಂ!

ಕಿರಣ್ ಹಾಗೂ ಶ್ವೇತಾ‌ಗೆ ಸುವರ್ಣನ್ಯೂಸ್.ಕಾಂ ಶುಭ ಹಾರೈಸುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ನನ್ನ ಸಂತೋಷ ಅಮೂಲ್ಯ, ಕರ್ಮದಲ್ಲಿ ನನಗೆ ನಂಬಿಕೆ ಇದೆ..' ದಿಲೀಪ್‌ ಖುಲಾಸೆ ಬೆನ್ನಲ್ಲೇ ವೈರಲ್‌ ಆದ ಜಾಕಿ ಭಾವನಾ ಮಾತು!
ಎಲ್ಲಾ ಸೀರಿಯಲ್​ ಜ್ಯೋತಿಷಿಗಳೇಕೇ ಮಹಾ ವಂಚಕರು? ಕರ್ಣ- ನಿಧಿ ಮದ್ವೆ ಮುಹೂರ್ತಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ!