ಗಣೇಶ್ ಅಭಿನಯದ ‘ಗೀತಾ’ ಚಿತ್ರಕ್ಕೆ ಈಗಷ್ಟೆಸೆನ್ಸಾರ್ ಮುಗಿದಿದೆ. ಸೆನ್ಸಾರ್ ಅಂಗಳದಲ್ಲಿ ಯು/ಎ ಸರ್ಟಿಫಿಕೆಟ್ ಪಡೆದುಕೊಂಡಿರುವ ಈ ಚಿತ್ರಕ್ಕೆ ಯಾವುದೇ ಮ್ಯೂಟ್ ಹಾಗೂ ಕಟ್ ಇಲ್ಲ.
ವಿಜಯ್ ನಾಗೇಂದ್ರ ನಿರ್ದೇಶಿಸಿ, ಸಯ್ಯಾದ್ ಸಲಾಂ ಹಾಗೂ ಶಿಲ್ಪಾ ಗಣೇಶ್ ಅವರು ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವನ್ನು ಇದೇ ಸೆ.27ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ನಿರ್ಮಾಪಕ ಜಾಕ್ ಮಂಜು ಅವರು ರಾಜ್ಯಾದ್ಯಾಂತ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ.
’ಗೀತಾ’ ಚಿತ್ರಕ್ಕೆ ಡಬ್ಬಿಂಗ್ ಮಾಡಿದ ಗೋಲ್ಡನ್ ಪುತ್ರ
ಗಣೇಶ್ ಹಾಗೂ ರೋನಿಕಾ ಸಿಂಗ್ ಜೋಡಿಯ ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಸಾಕಷ್ಟುಒಳ್ಳೆಯ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಅನೂಪ್ ರುಬೆನ್ಸ್ ಸಂಗೀತ ಹಾಡುಗಳಲ್ಲಿನ ಹೈಲೈಟ್. ಶ್ರೀಶ ಕೂದುವಳ್ಳಿ ಕ್ಯಾಮೆರಾ ಹಿಡಿದಿರುವ ಈ ಚಿತ್ರ ಟ್ರೇಲರ್ ಸೆ.28ರಂದು ಅನಾವರಣಗೊಳ್ಳುತ್ತಿದೆ. ಇಲ್ಲಿವರೆಗೂ ಟೈಟಲ್, ಫಸ್ಟ್ ಲುಕ್, ಟೀಸರ್ ಮೂಲಕ ಸದ್ದು ಮಾಡುತ್ತಿದ್ದ ಈ ಚಿತ್ರದ ಟ್ರೇಲರ್ ಹೇಗಿರುತ್ತದೆಂಬ ಕುತೂಹಲ ಇದೆ.
‘ಗೀತಾ’ಳಿಗಾಗಿ ಹೊಸ ಹಾಡು ಹೇಳಿದ್ದಾರೆ ಪವರ್ ಸ್ಟಾರ್!