ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಮೇಶ್ ಅರವಿಂದ್ ಅವರಿಗೆ ಇಂದು(ಸೆಪ್ಟೆಂಬರ್ 10) ಹುಟ್ಟುಹಬ್ಬದ ಸಂಭ್ರಮ. ನಟನೆ, ನಿರ್ಮಾಣ, ನಿರ್ದೇಶನ ಅಂತ ಬ್ಯುಸಿ ಆಗಿರುವ ರಮೇಶ್ ಅರವಿಂದ್ ಜತೆ ಹುಟ್ಟುಹಬ್ಬದ ಮಾತುಕತೆ.
ಈ ವರ್ಷದ ಬತ್‌ರ್‍ಡೇ ವಿಶೇಷತೆ ಏನು ?
ಸಿನಿಮಾ ನನ್ನ ಕ್ಷೇತ್ರ. ಅದರಲ್ಲಿ ಬ್ಯುಸಿ ಆಗಿದ್ದರೆ ಅದೇ ವಿಶೇಷ. ಸದ್ಯಕ್ಕೆ ‘ಶಿವಾಜಿ ಸುರತ್ಕಲ್ ರಣಗಿರಿ ರಹಸ್ಯ’, ‘ಭೈರಾದೇವಿ’, ‘100’ ಹಾಗೂ ‘ಬಟರ್ ಫ್ಲೈ’ ಸಿನಿಮಾಗಳಿವೆ. ಒಂದೂವರೆ ವರ್ಷದಿಂದ ನಿರಂತರವಾಗಿ ಈ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಹುಟ್ಟುಹಬ್ಬಕ್ಕೆ ‘ಶಿವಾಜಿ ಸುರತ್ಕಲ್’ ಸಿನಿಮಾದ ಟೀಸರ್ ಲಾಂಚ್ ಆಗುತ್ತೆ. ನನ್ನ ಮಟ್ಟಿಗೆ ಇದು ತುಂಬಾ ಸ್ಪೆಷಲ್ ಸಿನಿಮಾ. ಕತೆ ಮತ್ತು ಪಾತ್ರವೇ ಇಲ್ಲಿ ವಿಭಿನ್ನ. ಈ ಚಿತ್ರದ ಮೂಲಕ ಪ್ರೇಕ್ಷಕರಿಗೆ ಹೊಸ ತೆರನಾದ ರಮೇಶ್ ಕಾಣಿಸಿಕೊಳ್ಳುವುದು ಗ್ಯಾರಂಟಿ. ಇನ್ನು ಸಂಜೆಗೆ ನಾನೇ ನಿರ್ದೇಶಿಸಿ, ಅಭಿನಯಿಸಿರುವ ‘100’ಚಿತ್ರದ ಕುರಿತು ಫೇಸ್‌ಬುಕ್ ಲೈವ್ ಬರುತ್ತಿದ್ದೇವೆ. ಆ ಸಿನಿಮಾ ಬಗ್ಗೆ ಒಂದಷ್ಟುಮಾತನಾಡಬೇಕೆಂದುಕೊಂಡಿದ್ದೇವೆ.
undefined
ಶಿವಾಜಿ ಸುರತ್ಕಲ್ ನಲ್ಲಿ ಡಿಟೆಕ್ಟವ್ ಕೆಲಸ ಶುರು ಮಾಡಿದ ರಮೇಶ್ ಅರವಿಂದ್!
ಬಹುನಿರೀಕ್ಷಿತ ‘ಬಟರ್ ಫ್ಲೈ’ಚಿತ್ರದ ರಿಲೀಸ್ ತಡವಾಗಿದ್ದೇಕೆ?
ಇದು ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾದ ಚಿತ್ರ. ಕನ್ನಡ ಮತ್ತು ತಮಿಳು ಅವತರಣಿಕೆಗೆ ನಾನು ನಿರ್ದೇಶಕ. ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾದ ಸಿನಿಮಾ ಇದು. ಸಾಕಷ್ಟುನಿರೀಕ್ಷೆ ನಮಗೂ ಇದೆ. ನಾಲ್ಕು ಭಾಷೆಗಳಲ್ಲೂ ಏಕಕಾಲದಲ್ಲೇ ತೆರೆಗೆ ತರಬೇಕೆನ್ನುವ ಆಲೋಚನೆ ನಿರ್ಮಾಪಕರದ್ದು. ಸೂಕ್ತ ಸಮಯಕ್ಕಾಗಿ ನಿರ್ಮಾಪಕರು ಕಾಯುತ್ತಿದ್ದಾರೆ. ಅದಕ್ಕಾಗಿ ತಡವಾಗಿದ್ದು ಬಿಟ್ಟರೆ, ಬೇರಾವುದೇ ಕಾರಣವಿಲ್ಲ.
ನಟನೆ, ನಿರ್ದೇಶನ ಹಾಗೂ ನಿರ್ಮಾಣದಲ್ಲೂ ಬ್ಯುಸಿ ಆಗಿದ್ದೀರಿ, ಹೇಗಿದೆ ಈ ಜರ್ನಿಯ ಅನುಭವ?
ಅತ್ಯಂತ ಖುಷಿಯಿದೆ. ಯಾಕಂದ್ರೆ, ಸಿನಿಮಾ ಕೆಲಸದಲ್ಲಿ ಸದಾ ಬ್ಯುಸಿ ಆಗಿರಬೇಕು ಎನ್ನುವ ಸ್ವಭಾವ ನನ್ನದು. ಮೊದಲಿನಿಂದಲೂ ಅದನ್ನೇ ಬಯಸಿದವನು ನಾನು. ಬರವಣಿಗೆಯಲ್ಲಿರುವವರಿಗೆ ಸದಾ ಬರವಣಿಗೆಯಲ್ಲಿರಬೇಕೆನ್ನುವ ಹಾಗೆ, ಸಿನಿಮಾ ಕ್ಷೇತ್ರದಲ್ಲಿರುವ ನನಗೆ ನಟನೆ, ನಿರ್ದೇಶನ, ನಿರ್ಮಾಣ ಅಂತೆಲ್ಲ ನಿತ್ಯವೂ ಕೆಲಸದಲ್ಲೇ ಬ್ಯುಸಿ ಆಗಿರಬೇಕು. ಕೆಲಸದ ಆ ಒತ್ತಡ ಸುಖ ಕಾಣಬೇಕೆನ್ನುವ ಆಸೆ. ಈ ವರ್ಷದಲ್ಲಿ ಅಂತಹದೊಂದು ಖುಷಿ ಸಿಕ್ಕಿದೆ.
ಸೈಬರ್ ಕ್ರೈಮ್ ಪೊಲೀಸ್ ಮೊರೆ ಹೋದ ನಟ ?
ಕಾಲಕ್ಕೆ ತಕ್ಕಂತೆ ಬದಲಾಗುವ ದಾರಿಯಲ್ಲಿ ನೀವು ಎದುರಿಸಿದ ಸವಾಲುಗಳೇನು?
ಬದಲಾವಣೆಯನ್ನು ಮುಕ್ತವಾಗಿ ಸ್ವೀಕರಿಸುವ ಮನಸ್ಥಿತಿಗೆ ನಿಮಗಿದ್ದರೆ ಇದು ಸವಾಲು ಎನಿಸಲು ಸಾಧ್ಯವಿಲ್ಲ. ನನಗೆ ಅಂತಹ ಅವಕಾಶ ಹೊಸಬರ ಜತೆಗೆ ಕೆಲಸ ಮಾಡುವಾಗೆಲ್ಲ ಸಿಕ್ಕಿದೆ. ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕಾದರೆ ಇದು ಸಹಜವೂ ಹೌದು. ಈಗ ನಾಲ್ಕೈದು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ಇಲ್ಲಿರುವವರೆಲ್ಲರೂ ಯುವ ಜನರು. ಈ ಕಾಲದ ಅತ್ಯಂತ ಕ್ರಿಯಾಶೀಲ ಮನಸ್ಸುಗಳು ಅವು. ನಮ್ಮ ಅನುಭವಗಳನ್ನು ಹಂಚಿಕೊಳ್ಳುವುದರ ಜತೆಗೆ ಅವರು ಹೇಳುವುದನ್ನು ಸ್ವೀಕರಿಸಬೇಕು. ಆಗ ಹೊಸದನ್ನು ಮಾಡಲು ಸಾಧ್ಯವಾಗುತ್ತೆ. ಅಂತಹದೊಂದು ಅನುಭವ ಇಲ್ಲಿ ನನಗೆ ಆಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮಲ್ಲಿ ಕಲಿಕೆ ಆಸಕ್ತಿ ಮುಖ್ಯ. ಅದು ಇದ್ದರೆ ಕಾಲಕ್ಕೆ ತಕ್ಕಂತೆ ಬದಲಾವಣೆ ಕಷ್ಟವಾಗದು.
ನಟನೆ, ನಿರ್ದೇಶನ ಹಾಗೂ ನಿರ್ಮಾಣದಲ್ಲಿ ನಿಮಗಿಷ್ಟವಾದ ಕ್ಷೇತ್ರ ಯಾವುದು?
ಇಲ್ಲ, ನಾನು ಯಾವುದೋ ಒಂದನ್ನು ಇಷ್ಟಪಡುವ ವ್ಯಕ್ತಿ ಅಲ್ಲ. ಇವೆಲ್ಲವೂ ಸಿನಿಮಾಕ್ಕೆ ಸಂಬಂಧಿಸಿದ ಕ್ರಿಯೇಟಿವ್ ಜಾಬ್ಸ್. ನಟನಾಗಿ ಬಂದರೂ ನನ್ನೊಳಗಿನ ಕಲಿಕೆಯ ಆಸಕ್ತಿಯ ಮೂಲಕವೇ ಎಲ್ಲವನ್ನೂ ಕಲಿಯುತ್ತಾ ಬಂದಿದ್ದೇನೆ. ನಾವು ಯಾವುದೋ ಒಂದಕ್ಕೆ ಸೀಮಿತವಾದರೆ, ಕಷ್ಟ. ಈಗಿನ ಯವಜನರು ಕೂಡ ಮಲ್ಟಿಟ್ಯಾಲೆಂಟೆಡ್ ಆಗಬೇಕು. ಯಾಕಂದ್ರೆ ಭವಿಷ್ಯದ ದಿನಗಳು ಹೀಗೆ ಇರುತ್ತವೆ ಎನ್ನುವುದಕ್ಕೆ ಆಗದು. ನಾನು ಕೂಡ ಅದನ್ನೇ ರೂಢಿಸಿಕೊಂಡವನು.
ಕಿರುತೆರೆಯ ಜರ್ನಿಯ ಅನುಭವ ಹೇಳೋದಾದ್ರೆ...
ಎಲ್ಲವೂ ಖುಷಿ ಕೊಡುವ ಕೆಲಸಗಳೇ. ಪ್ರತಿಯೊಂದನ್ನು ನೀವು ಏಕಾಗ್ರತೆಯಿಂದ, ಪ್ರಾಮಾಣಿಕತೆಯಿಂದ ಮಾಡುತ್ತಾ ಹೋದರೆ, ಅವು ಕೊಡುವ ಅನುಭವವೇ ಬೇರೆ. ಯಾವುದು ಕಷ್ಟಎನಿಸುವುದಿಲ್ಲ. ಅಂತಹ ಅನುಭವ ನನಗೆ ಅಲ್ಲೂ ಸಿಕ್ಕಿದೆ. ಈಗ ಧಾರಾವಾಹಿ ನಿರ್ಮಾಣದಲ್ಲೂ ಅಲ್ಲಿ ತೊಡಗಿಸಿಕೊಂಡಿದ್ದೇನೆ. ಅದು ಬರೀ ಬಂಡವಾಳ ಹಾಕುವ ಕೆಲಸವೇ ಆಗಿದ್ದರೂ, ಅಲ್ಲಿ ಕಲಿಯುವುದಕ್ಕೆ ಸಾಕಷ್ಟಿದೆ.
ಕಾಶ್ಮೀರಕ್ಕೆ ಹೊರಟ ರಮೇಶ್ ಅರವಿಂದ್ !
ಮುಂದಿನ ಒಂದು ವರ್ಷಕ್ಕೆ ನಿಮ್ಮ ಯೋಚನೆ, ಯೋಜನೆಗಳೇನು?
ಮುಂದಿನ ದಿನಗಳಲ್ಲೂ ಇದೇ ತರ ಇನ್ನಷ್ಟುಅರ್ಥ ಪೂರ್ಣ ಕೆಲಸವನ್ನು ಟೀವಿ, ಬರವಣಿಗೆ ಹಾಗೂ ಸಿನಿಮಾ ಮೂಲಕವೂ ಮಾಡಬೇಕೆನ್ನುವುದು ನನ್ನಾಸೆ. ಅದು ನಟನೆಯೋ, ನಿರ್ದೇಶನವೋ ಅಥವಾ ನಿರ್ಮಾಣವೋ, ಅವಕಾಶಗಳು ಬಂದ ಹಾಗೆ. ಏನೇ ಕೆಲಸ ಮಾಡಿದರೂ ಅದು ಅರ್ಥಪೂರ್ಣವಾಗಿರಬೇಕು, ನನಗೂ ಖುಷಿ ಕೊಡಬೇಕು, ಜನರಿಗೂ ಇಷ್ಟವಾಗಬೇಕು. ಜತೆಗೆ ನಾನು ಭೇಟಿ ಮಾಡುವಂತಹ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಇರುವಂತಹ ಅತ್ಯಮೂಲ್ಯ ವಿಚಾರಗಳನ್ನು ನನ್ನದಾಗಿಸಿಕೊಳ್ಳಬೇಕು, ನನ್ನಲ್ಲಿರುವ ವಿಷಯಗಳನ್ನು ಹಂಚಿಕೊಳ್ಳಬೇಕು, ಆ ಮೂಲಕ ಸಾಧ್ಯವಾದಷ್ಟುಒಳ್ಳೆಯದನ್ನು ಕೊಡ್ಬೇಕು ಎನ್ನುವುದು ನನ್ನ ಉದ್ದೇಶ.
ಕಳೆದ ಒಂದು ವರ್ಷದಲ್ಲಿ ನೋಡಿದ ಅತ್ಯುತ್ತಮ ಸಿನಿಮಾಗಳು
- ಹಿಂದಿಯ ‘ಅಂಧಾದುನ್’
- ತಮಿಳಿನ ‘ರಾಕ್ಷಸನ್’
- ಕನ್ನಡದ ‘ಕೆಜಿಎಫ್’
ಕಳೆದ ಒಂದು ವರ್ಷದಲ್ಲಿ ಓದಿದ ಅತ್ಯುತ್ತಮ ಪುಸ್ತಕ
ಯುವಲ್ ನೋವ ಹರಾರಿ ಬರೆದ ‘ಸೇಪಿಯನ್ಸ್’ ಹಾಗೂ ‘21 ಲೆಸನ್ಸ್ ಫಾರ್ ದ 21 ಸೆಂಚುರಿ’.