ಶಕೀರಾನೂ ನಾಚುವಂತೆ ಲುಂಗಿ ಎತ್ತಿ ಕುಣಿದ ಕೇರಳದ ಅಂಕಲ್ಸ್‌: ವೀಡಿಯೋ ಸಖತ್ ವೈರಲ್‌

By Anusha Kb  |  First Published Oct 30, 2024, 11:53 AM IST

ಕೇರಳದ ನಾಲ್ವರು ಡ್ಯಾನ್ಸರ್‌ಗಳು ಲುಂಗಿ ಉಟ್ಟು, ಹವಾಯ್ ಚಪ್ಪಲ್ ಧರಿಸಿ ಶಕೀರಾ ಹಾಡಿಗೆ ಮಾಡಿದ ಡಾನ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 74xmanavalans ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋಗಳನ್ನು ಪೋಸ್ಟ್ ಮಾಡುವ ಇವರ ವಿಭಿನ್ನ ವೇಷಭೂಷಣ ಮತ್ತು ಡಾನ್ಸ್ ಶೈಲಿ ಗಮನ ಸೆಳೆಯುತ್ತಿದೆ.


ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮನೋರಂಜನೆ ನೀಡುವ ವೀಡಿಯೋಗಳು ವೈರಲ್ ಆಗ್ತಾನೆ ಇರ್ತಾವೆ. ಪ್ರತಿಭೆ ಇದ್ದು ವೇದಿಕೆ ಸಿಗದ ಅನೇಕರಿಗೆ ಸಾಮಾಜಿಕ ಜಾಲತಾಣಗಳು ವೇದಿಕೆ ಒದಗಿಸಿದ್ದು,  ವಿಶ್ವ ಮಟ್ಟದಲ್ಲಿ ಫೇಮಸ್‌ ಮಾಡ್ತಿವೆ. ಸಾಮಾನ್ಯ ಅಪ್ಲೈನ್ ವೇದಿಕೆಗಳು ಕೆಲ ಪ್ರದೇಶಗಳಿಗಷ್ಟೇ ಸೀಮಿತವಾಗಿದ್ದರೆ ಈ ಸಾಮಾಜಿಕ ಜಾಲತಾಣಗಳು ಜಾಗತಿಕ ಮಟ್ಟದಲ್ಲಿ ಪ್ರತಿಭೆಗಳಿಗೆ ವೇದಿಕೆ ಒದಗಿಸುತ್ತಿವೆ. ಇದೇ ಕಾರಣಕ್ಕೆ ಆಫ್ರಿಕಾದ ಕಿಲಿಪೌಲ್‌ ಭಾರತದಲ್ಲಿ ಫೇಮಸ್ ಆಗಿದ್ದರೆ, ಅತ್ತ ಭಾರತದ ಎಷ್ಟೋ ಪ್ರತಿಭೆಗಳು ವಿದೇಶಗಳಲ್ಲಿ ಫೇಮಸ್ ಆಗಿದ್ದು, ಅವರಿಗೂ ಸಾಗರೋತ್ತರದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಸೃಷ್ಟಿಸಿದೆ. ಅದೇ ರೀತಿ ಇಲ್ಲೊಂದು ಕಡೆ ಕೇರಳದ ನಾಲ್ವರು ವ್ಯಕ್ತಿಗಳ ಡಾನ್ಸ್ ಗ್ರೂಪೊಂದು ಸಾಮಾಜಿಕ ಜಾಲತಾಣದಲ್ಲಿ ಡಾನ್ಸ್ ಮಾಡುವ ಮೂಲಕವೇ ಇಂಟರ್‌ನ್ಯಾಷನಲ್ ಮಟ್ಟದಲ್ಲಿ ಫೇಮಸ್ ಆಗಿದ್ದಾರೆ.

74xmanavalans ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ವೀಡಿಯೋಗಳನ್ನು ಪೋಸ್ಟ್ ಮಾಡುವ ಇವರು ತಮ್ಮ ಡಾನ್ಸ್ ಹಾಗೂ ವಿಭಿನ್ನ ವೇಷಭೂಷಣಗಳಿಂದಲೇ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಹವಾಯ್‌ ಚಪ್ಪಲ್ ಧರಿಸಿ ಕಲರ್‌ ಕಲರ್‌ ಲುಂಗಿ(ಕಂಬಾಯ್) ಉಟ್ಟುಕೊಂಡು ಡಾನ್ಸ್ ಮಾಡುವ ಇವರು ತೊಡೆ ತೋರಿಸಿ ಹೆಣ್ಮಕ್ಕಳು ನಾಚುವಂತೆ ಸ್ಟೆಪ್ ಹಾಕುತ್ತಿದ್ದಾರೆ. ಅಂದಹಾಗೆ ಅವರು ಇತ್ತೀಚೆಗೆ ಪಾಪ್ ಗಾಯಕಿ ಶಕೀರಾ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದು, ಆ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ.

Tap to resize

Latest Videos

ಲುಂಗಿ ಎತ್ತಿಕೊಂಡು ಚಡ್ಡಿ ತೋರಿಸುತ್ತಾ ಯಾವ ಕ್ಯಾಬರೆ ನರ್ತಕಿಗೂ ಕಡಿಮೆ ಇಲ್ಲದಂತೆ ಡಾನ್ಸ್ ಮಾಡುವ ಮೂಲತಃ ಕೇರಳದ ಈ ಡಾನ್ಸರ್‌ಗಳ ಡಾನ್ಸ್ ನೋಡಿದರೆ ಶಕೀರಾನೂ ಒಂದು ಕ್ಷಣ ನಾಚೋದು ಪಕ್ಕಾ, ಇವರ ಡಾನ್ಸ್‌ ಪ್ರತಿಭೆಗೆ ಕೇರಳದ ಮಜವಿಲ್ ಮನೋರಮಾ ಚಾನೆಲ್‌ನಲ್ಲಿ ಪ್ರಸಾರವಾಗುವ ಡಿ4 ಡಾನ್ಸ್‌ ರಿಯಾಲಿಟಿ ಶೋ ಕೂಡ ಈ ಹಿಂದೆ ವೇದಿಕೆ ಒದಗಿಸಿತ್ತು. 74x__manavalans_ ಎಂಬ ಇನ್ಸ್ಟಾಗ್ರಾಮ್‌ ಪೇಜ್‌ ಹೊಂದಿದ್ದು ಅದರ ತುಂಬೆಲ್ಲಾ ಈ ನಾಲ್ವರ ಡಾನ್ಸ್‌ನ ವಿವಿಧ ಝಲಕ್‌ಗಳನ್ನು  ನೋಡಬಹುದಾಗಿದೆ. ಇವರ ಡಾನ್ಸ್ ಬಗ್ಗೆ ಒಂದೇ ಒಂದು ಅಪಸ್ವರವಿಲ್ಲ, ಆದರೆ ಲುಂಗಿ ಎತ್ತಿ ಡಾನ್ಸ್ ಮಾಡುವುದಕ್ಕೆ ಕೆಲವು ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡ್ತಿದ್ದಾರೆ. 

ಕೆಲವರು ಇವರು ಗಂಡಸರ ಒಳ ಉಡುಪಿನ ಜಾಹೀರಾತು ನೀಡುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದರೆ ಮತ್ತೆ ಕೆಲವರು ಇವರು ಹವಾಯ್ ಚಪ್ಪಲ್‌ ಹಾಗೂ ದಕ್ಷಿಣ ಭಾರತದ ಲುಂಗಿಯನ್ನು ಫೇಮಸ್ ಮಾಡಿದರು ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೆ ಇವರು ತೊಡೆ ತೋರಿಸುವುದರಲ್ಲಿ ಹುಡುಗಿಯರಿಗೆ ಸ್ಪರ್ಧೆ ನೀಡುತ್ತಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೆ ಕೆಲವರು ಇವರ ವೀಡಿಯೋಗೆ ಯಾರು ಏನು ಅನ್ನಲ್ಲ, ಅದೇ ಹೆಣ್ಮಕ್ಕಳು ಮಾಡಿದ್ರೆ ಫುಲ್ ದ್ವೇಷದ ಕಾಮೆಂಟೇ ಇರ್ತಿತ್ತು ಎಂದು ಕಾಮೆಂಟ್ ಮಾಡಿ ಲಿಂಗ ತಾರತಮ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

 ಇವರ ವಿಡಿಯೋವನ್ನು ನೀವು ಒಮ್ಮೆ ನೋಡಿ ಕಾಣ್ತುಂಬಿಕೊಳ್ಳಿ, ಹಾಗೂ ಈ ವೀಡಿಯೋ ಬಗ್ಗೆ ನಿಮ್ಮ ಅಭಿಪ್ರಾಯವೇನು ತಿಳಿಸಿ.

 

click me!