
ಬೆಂಗಳೂರು(ಅ. 31): ಸ್ಯಾಂಡಲ್‍ವುಡ್'ನ ಯಂಗ್ ಸ್ಟಾರ್ ಲೂಸ್ ಮಾದ ಖ್ಯಾತಿಯ ಯೋಗಿ ಮದುವೆಗೆ ಕ್ಷಣಗಣನೆ ಆರಂಭವಾಗಿದೆ. ಬಾಲ್ಯದ ಗೆಳತಿ ಸಾಹಿತ್ಯ ಅರಸ್ ಅವರೊಂದಿಗೆ ಇದೇ ನವೆಂಬರ್ 2ರಂದು ಹಸೆಮಣೆ ಏರಲಿದ್ದಾರೆ. ಯೋಗಿ ಮತ್ತು ಸಾಹಿತ್ಯ ಜೂನ್ 11ರಂದು ಸರಳವಾಗಿ ಉಂಗುರ ಬದಲಿಸಿಕೊಂಡು ಎಂಗೇಜ್ ಆಗಿದ್ದರು. ಈಗ ಮದುವೆಯ ಸಿದ್ದತೆಯೊಂದಿಗೆ ಹಲವು ಶಾಸ್ತ್ರಗಳು ನಡೆಯುತ್ತಿದೆ. ಇಂದು ಕೋಣನಕುಂಟೆಯಲ್ಲಿರುವ ಯೋಗಿ ಮನೆಯಲ್ಲಿಂದು ಚಪ್ಪರ ಪೂಜೆ, ಬಳೆ ಶಾಸ್ತ್ರ, ಅರಿಶಿನ ಕುಟ್ಟುವ ಶಾಸ್ತ್ರ, ಮಂಗಳ ಸ್ನಾನ, ಅಕ್ಕಿ ಹಸೆ ಶಾಸ್ರ್ರ ಅದ್ಧೂರಿಯಾಗಿ ನಡೆದಿದೆ. ಹಿರಿಯರ ಆಶಿರ್ವಾದದೊಂದಿಗೆ ಮಧು ಮಗನಂತೆ ಯೋಗಿ ವಿವಾಹ ಶಾಸ್ತ್ರಗಳಲ್ಲಿ ಮಿಂಚಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.