ಬಿಗ್'ಬಾಸ್ ಶೋನಲ್ಲಿ ಮಜಾ ಕೊಟ್ಟ ಕಿಚ್ಚ, ಕೀಟ ಮತ್ತು ನಿವೇದಿತಾ

Published : Oct 30, 2017, 06:45 PM ISTUpdated : Apr 11, 2018, 01:09 PM IST
ಬಿಗ್'ಬಾಸ್ ಶೋನಲ್ಲಿ ಮಜಾ ಕೊಟ್ಟ ಕಿಚ್ಚ, ಕೀಟ ಮತ್ತು ನಿವೇದಿತಾ

ಸಾರಾಂಶ

"ಗಾರ್ಡನ್'ನಲ್ಲಿ ತುಂಬಾ ಇನ್ಸೆಕ್'ಟ್ಸ್ ಇದ್ವು. ಅದಕ್ಕೆ ಒಳಗೆ ಹೋದೆ," ಎಂದು ನಿವೇದಿತಾ ಅಮಾಯಕವಾಗಿ ಹೇಳಿದರು. ಗಾರ್ಡನ್'ನಲ್ಲಿದ್ದ ಉಳಿದ ಕಂಟೆಸ್ಟೆಂಟ್ಸ್'ರನ್ನು ನೀವು ಇನ್ಸೆಕ್'ಟ್ಸ್ ಎಂದು ಕರೆಯುತ್ತಿದ್ದೀರಾ ಎಂದು ಕಿಚ್ಚ ಮತ್ತೆ ಕಾಲೆಳೆದರು. ಇಲ್ಲ, ನಾನು ಕಂಟೆಸ್ಟೆಂಟ್ಸ್ ಬಗ್ಗೆ ಹೇಳ್ನಿಲ್ಲ. ನಿಜವಾಗಿಯೂ ಇನ್ಸೆಕ್ಟ್ಸ್ ಇದ್ವು, ನನಗೆ ಅವೆಂದ್ರೆ ಅಲರ್ಜಿ. ಅದಕ್ಕೆ ನಾನು ಗಾರ್ಡನ್'ನಿಂದ ಎದ್ದುಹೋದೆ, ಎಂದು ನಿವೇದಿತಾ ವಿವರಿಸಿದರು.

ಬೆಂಗಳೂರು: ಕನ್ನಡ ಬಿಗ್'ಬಾಸ್ ಶೋನಲ್ಲಿ ಕಿಚ್ಚ ಸುದೀಪ್ ನಡೆಸಿಕೊಡುವ "ವಾರದ ಕಥೆ ಕಿಚ್ಚನ ಜೊತೆ" ವೀಕೆಂಡ್ ಕಾರ್ಯಕ್ರಮ ನಿಜಕ್ಕೂ ಬಹಳ ಜನಪ್ರಿಯ. ಕಿಚ್ಚ ಸುದೀಪ್ ವಾರವಿಡೀ ಬಿಗ್'ಬಾಸ್ ಮನೆಯಲ್ಲಿ ನಡೆಯುವ ಆಯ್ದ ಕೆಲ ಪ್ರಸಂಗಗಳನ್ನಿಟ್ಟುಕೊಂಡು ಸ್ಪರ್ಧಿಗಳನ್ನು ಕಾಲೆಳೆಯುತ್ತಾರೆ; ಸ್ಪರ್ಧಿಗಳ ಸಂತೋಷ, ದುಃಖಗಳನ್ನು ಹಂಚಿಕೊಳ್ಳುತ್ತಾರೆ; ಕೊನೆಗೆ ಎಲ್ಲರನ್ನೂ ಖುಷಿಪಡಿಸಿ ಹೋಗುತ್ತಾರೆ. ನಿನ್ನೆ ನಡೆದ ವಾರದ ಕಥೆಯಲ್ಲಿ ನಿವೇದಿತಾ ಗೌಡ ಎಂಬ ಕಾಲೇಜು ಹುಡುಗಿ ಮತ್ತು ಕಿಚ್ಚ ಸುದೀಪ್ ನಡುವಿನ ಸಂಭಾಷಣೆಗಳು ವೀಕ್ಷಕರಿಗೆ ಭಲೇ ಮಜಾ ಕೊಟ್ಟವು.

ಬಿಗ್'ಬಾಸ್ ಮನೆಯಲ್ಲಿ ಸೆಲಬ್ರಿಟಿಗಳು ಮತ್ತು ಕಾಮನ್'ಮ್ಯಾನ್ ಎಂದು ಎರಡು ಗುಂಪಾಗಿ ಮಾರ್ಪಟ್ಟಿರುವ ಕುರಿತು ಕಿಚ್ಚ ಸುದೀಪ್ ಪ್ರತಿಯೊಬ್ಬ ಸ್ಪರ್ಧಿಯನ್ನೂ ವಿಚಾರಿಸಿಕೊಂಡು ಬರುತ್ತಾರೆ. ಸಂಖ್ಯಾಶಾಸ್ತ್ರಜ್ಞ ಜಯಶೀಲನ್ ಅವರು ತಾನು ಸೆಲಬ್ರಿಟಿಯೋ ಇಲ್ಲವೋ ಗೊತ್ತಿಲ್ಲ ಆದರೆ, ದಿವಾಕರ್ ಅವರು ತನ್ನನ್ನು ಕಾಮನ್'ಮ್ಯಾನ್'ಗಿಂತ ಕಡೆಯಾಗಿ ಮಾಡಿಬಿಟ್ಟಿದ್ದಾರೆ ಎಂದು ಜೋಕ್ ಮಾಡಿದರು. ಅದಾದ ಬಳಿಕ ಬಿಂಕದ ಹುಡುಗಿ ನಿವೇದಿತಾ ಗೌಡಳ ಸರದಿ ಬಂತು. ಸೆಲಬ್ರಿಟಿ ಜಯಶೀಲನ್ ಬಿಗ್'ಬಾಸ್ ಮನೆಯಲ್ಲಿ ಕಾಮನ್'ಮ್ಯಾನ್ ಆದ್ರೆ, ತಾವು ಕಾಮನ್'ಮ್ಯಾನ್ ಆಗಿ ಬಂದು ಸೆಲಬ್ರಿಟಿ ಆಗಿಬಿಟ್ರಿ ಎಂದು ನಿವೇದಿತಾರನ್ನು ಹಾಸ್ಯವಾಗಿ ಕಿಚ್ಚ ಕಾಲೆಳೆದರು. ಗಾರ್ಡನ್'ನಿಂದ ರೂಮಿಗೆ ಯಾಕೆ ಹೋದ್ರಿ ಎಂದು ಕಿಚ್ಚ ಕೇಳಿದಾಗ ನಿವೇದಿತಾ ನೀಡಿದ ಉತ್ತರವು 'insects' ಚರ್ಚೆಗೆ ಎಡೆ ಮಾಡಿಕೊಟ್ಟಿತು. "ಗಾರ್ಡನ್'ನಲ್ಲಿ ತುಂಬಾ ಇನ್ಸೆಕ್'ಟ್ಸ್ ಇದ್ವು. ಅದಕ್ಕೆ ಒಳಗೆ ಹೋದೆ," ಎಂದು ನಿವೇದಿತಾ ಅಮಾಯಕವಾಗಿ ಹೇಳಿದರು. ಗಾರ್ಡನ್'ನಲ್ಲಿದ್ದ ಉಳಿದ ಕಂಟೆಸ್ಟೆಂಟ್ಸ್'ರನ್ನು ನೀವು ಇನ್ಸೆಕ್'ಟ್ಸ್ ಎಂದು ಕರೆಯುತ್ತಿದ್ದೀರಾ ಎಂದು ಕಿಚ್ಚ ಮತ್ತೆ ಕಾಲೆಳೆದರು. ಇಲ್ಲ, ನಾನು ಕಂಟೆಸ್ಟೆಂಟ್ಸ್ ಬಗ್ಗೆ ಹೇಳ್ನಿಲ್ಲ. ನಿಜವಾಗಿಯೂ ಇನ್ಸೆಕ್ಟ್ಸ್ ಇದ್ವು, ನನಗೆ ಅವೆಂದ್ರೆ ಅಲರ್ಜಿ. ಅದಕ್ಕೆ ನಾನು ಗಾರ್ಡನ್'ನಿಂದ ಎದ್ದುಹೋದೆ, ಎಂದು ನಿವೇದಿತಾ ವಿವರಿಸಿದರು.

ಇದೇ ಇನ್ಸೆಕ್ಟ್'ಸ್ ಪದದಿಂದಲೇ ಕಿಚ್ಚ ವಾರದ ಕಥೆ ಅಂತ್ಯಗೊಳಿಸಿದರು. "ಬಿಗ್ ಬಾಸ್ ಮನೆಯಲ್ಲಿ ಉದ್ಭವಿಸಿರುವ ಎಲ್ಲಾ ಸಮಸ್ಯೆಗಳಿಗೂ ಗಾರ್ಡನ್'ನಲ್ಲಿರುವ ಕೀಟಗಳೇ ಕಾರಣ," ಎಂದು ತಮಾಷೆ ಮಾಡಿ ಎಲ್ಲರ ಮೊಗದಲ್ಲೂ ನಗು ತಂದರು.

ಇನ್ನು, ಬಿಗ್ ಬಾಸ್ ಶೋನಲ್ಲಿ ಎರಡೂ ವಾರ ಸಾಮಾನ್ಯರ ಗುಂಪಿನವರೇ ಎಲಿಮಿನೇಟ್ ಆಗಿದ್ದಾರೆ. ಮೊದಲ ವಾರ ಗೃಹಿಣಿ ಸುಮಾ, ಎರಡನೇ ವಾರ ಮೇಘ ಬಿಗ್'ಬಾಸ್'ನಿಂದ ಔಟ್ ಆಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Hassan: ಕಾಂಪೌಂಡ್ ತೆರವು ಪ್ರಕರಣ: ಪುಷ್ಪಾ ಅರುಣ್‌ಕುಮಾರ್‌ಗೆ ಸವಾಲು ಹಾಕಿದ ದೇವರಾಜು
ಗಿಲ್ಲಿ ನಟನನ್ನು ಕೈಬಿಟ್ಟು ಗೋಲ್ಡ್ ಬೆನ್ನುಬಿದ್ದ ಬಿಗ್ ಬಾಸ್ ಡಾಗ್ ಸತೀಶ್!