ನ.2ರಂದು ‘ಲೂಸ್ ಮಾದ’ ಯೋಗಿ ಮದುವೆ ? ದಿಗಂತ್, ಐಂದ್ರಿತಾ ರೇ ವಿವಾಹ ಕೂಡ ಫಿಕ್ಸ್ ಆಯ್ತು !

Published : Oct 29, 2017, 04:02 PM ISTUpdated : Apr 11, 2018, 12:53 PM IST
ನ.2ರಂದು ‘ಲೂಸ್ ಮಾದ’ ಯೋಗಿ ಮದುವೆ ? ದಿಗಂತ್, ಐಂದ್ರಿತಾ ರೇ ವಿವಾಹ ಕೂಡ ಫಿಕ್ಸ್ ಆಯ್ತು !

ಸಾರಾಂಶ

ತಮ್ಮ ಮದುವೆ ಹಾಗೂ ಪ್ರೀತಿಯ ಸುತ್ತ ಏನೇ ಸುದ್ದಿ ಕೇಳಿಬಂದರೂ ಮೌನವಾಗಿಯೇ ಇರುವ ಮೂಲಕ ಪರೋಕ್ಷವಾಗಿ ಸಮ್ಮತಿ ಸೂಚಿಸುತ್ತಿದ್ದ ದಿಗಂತ್, ಹಲವು ವರ್ಷಗಳಿಂದ ತಾವು ಪ್ರೀತಿಸುತ್ತಿದ್ದ ನಟಿ ಐಂದ್ರಿತಾ ರೇ ಅವರೊಂದಿಗೆ ಮುಂದಿನ ವರ್ಷ ಮದುವೆ ಆಗುವುದಕ್ಕೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು(ಅ.29): ನಟ ಲೂಸ್‌ಮಾದ ಖ್ಯಾತಿಯ ಯೋಗೇಶ್ ಮತ್ತು ಸಾಹಿತ್ಯ ನ.2ರಂದು ಹಸೆಮಣೆ ಏರಲಿದ್ದಾರೆ. ಹೌದು, ಯೋಗೇಶ್ ಮತ್ತು ಸಾಹಿತ್ಯ ಮದುವೆಯಾ ಗುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಇದೀಗ ಈ ಜೋಡಿ ಹಸೆಮಣೆ ಏರುವ ಕಾಲ ಸನ್ನಿಹಿತವಾಗಿದೆ.

‘ಶ್ರೀ ಕನ್ವೆನ್‌ಷನ್ ಸೆಂಟರ್, ನಂ.25/3. 80 ಅಡಿ ರಸ್ತೆ, ಬ್ರಿಗೇಡ್ ಒಮೇಗ ಹತ್ತಿರ, ಚನ್ನಸಂದ್ರ, ಬನಶಂಕರಿ 6ನೇ ಹಂತ, 1ನೇ ಬ್ಲಾಕ್ ಇಲ್ಲಿ ನ.2ರ ಗುರುವಾರ ಯೋಗೇಶ್ ಮತ್ತು ಸಾಹಿತ್ಯ ಅವರ ಮದುವೆ ಅದ್ದೂರಿಯಾಗಿ ನಡೆಯಲಿದೆ. ವಿವಾಹದ ಹಿನ್ನೆಲೆಯಲ್ಲಿ ಈಗಾಗಲೇ ವಧು ಮತ್ತು ವರ ಎರಡೂ ಮನೆಗಳಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಗುರುವಾರ ಬೆ.5ಕ್ಕೆ ಮುಹೂರ್ತ ಕಾರ್ಯಕ್ರಮ ನಡೆಯಲಿದೆ. ಅದೇ ದಿನ ಸಂಜೆ 6ಕ್ಕೆ ಆರತಕ್ಷತೆ ಏರ್ಪಡಿಸಲಾಗಿದೆ. ಬೆಂಗಳೂರಿನ ಯಡಿಯೂರಿನಲ್ಲಿರುವ ಸಾಹಿತ್ಯ ಅವರ ನಿವಾಸದಲ್ಲಿ ಕಳೆದ ಜೂ.೧೧ರಂದು ನಿಶ್ಚಿತಾರ್ಥ ಸರಳವಾಗಿ ನಡೆದಿತ್ತು. ಸಾಹಿತ್ಯ ಮೂಲತಃ ಐಟಿಉದ್ಯೋಗಿ ಸಿನಿಮಾರಂ ಗಕ್ಕೂ ಅವರಿಗೂ ನಂಟಿಲ್ಲ. ಜೀವದ ಗೆಳತಿ ಸಾಹಿತ್ಯ ಇದೀಗ ಯೋಗೇಶ್ ಅವರ ಜೀವನದ ಗೆಳತಿಯಾಗಲಿದ್ದಾರೆ.

ಮುಂದಿನ ವರ್ಷ ದಿಗಂತ್, ಐಂದ್ರಿತಾ ರೇ

ದಿಗಂತ್, ಐಂದ್ರಿತಾ ರೇ ಮದುವೆ ಮುಂದಿನ ವರ್ಷ ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ಜೋಡಿ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ಮುಂದಿನ ವರ್ಷ ಮದುವೆಯಾಗುವ ಸಾಧ್ಯತೆಯಿದೆ. ದಿಗಂತ್ ಹಾಗೂ ಐಂದ್ರಿತಾ ರೇ ಪ್ರೀತಿಸುತ್ತಿದ್ದಾರೆ, ಸದ್ಯದಲ್ಲೇ ಮದುವೆಯಾ ಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು.

ತಮ್ಮ ಮದುವೆ ಹಾಗೂ ಪ್ರೀತಿಯ ಸುತ್ತ ಏನೇ ಸುದ್ದಿ ಕೇಳಿಬಂದರೂ ಮೌನವಾಗಿಯೇ ಇರುವ ಮೂಲಕ ಪರೋಕ್ಷವಾಗಿ ಸಮ್ಮತಿ ಸೂಚಿಸುತ್ತಿದ್ದ ದಿಗಂತ್, ಹಲವು ವರ್ಷಗಳಿಂದ ತಾವು ಪ್ರೀತಿಸುತ್ತಿದ್ದ ನಟಿ ಐಂದ್ರಿತಾ ರೇ ಅವರೊಂದಿಗೆ ಮುಂದಿನ ವರ್ಷ ಮದುವೆ ಆಗುವುದಕ್ಕೆ ನಿರ್ಧರಿಸಿದ್ದಾರೆ ಎನ್ನಲಾಗಿದೆ. ದಿಗಂತ್ ಹಾಗೂ ಐಂದ್ರಿತಾ ರೇ ಜತೆಯಾಗಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ‘ಮನಸಾರೆ’ ಚಿತ್ರದ ನಂತರ ಅವರ ನಡುವೆ ಸ್ನೇಹ ಬೆಳೆದು ಆ ಸ್ನೇಹ ಪ್ರೀತಿಗೆ ತಿರುಗಿದೆ ಎನ್ನಲಾಗುತ್ತಿದೆ. ಇಬ್ಬರ ಪ್ರೀತಿಗೆ ಮುಂದಿನ ವರ್ಷ ಮದುವೆ ಮುದ್ರೆ ಬೀಳುವ ಸಾಧ್ಯತೆಗಳಿವೆ. ಈಗಷ್ಟೇ ತಾರಾ ಜೋಡಿಯಾದ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರ ನಿಶ್ಚಿತಾರ್ಥ ಆಗಿದೆ. ಮುಂದಿನ ತಿಂಗಳು ನಟ ಯೋಗೀಶ್ ತಮ್ಮ ಗೆಳತಿಯ ಕೈ ಹಿಡಿಯುತ್ತಿದ್ದಾರೆ. ಇವರ ನಂತರ ದಿಗಂತ್ ಹಾಗೂ ಐಂದ್ರಿತಾ ರೇ ಹೊಸ ಜೀವನಕ್ಕೆ ಕಾಲಿಡಲಿದ್ದು, ಸ್ಯಾಂಡಲ್‌ವುಡ್‌ನಲ್ಲಿ ತಾರಾ ಜೋಡಿಗಳ ಮದುವೆ ಸಂಭ್ರಮದ ಸುಗ್ಗಿ ಜೋರಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!