ಹ ತ್ತು ವರ್ಷಗಳ ಹಿಂದೆ ದೂರದ ಲಂಡನ್‌ನಲ್ಲಿ ಸೌತ್ ಏಷ್ಯನ್ ಸಿನಿಮಾಗಳ ಪ್ರದರ್ಶನಕ್ಕಾಗಿಯೇ ಹುಟ್ಟಿಕೊಂಡಿದ್ದ ‘ಬಗ್ರಿ ಫೌಂಡೇಷನ್ ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಈ ವರ್ಷ ಕನ್ನಡದಿಂದ ‘ಅರಿಷಡ್ವರ್ಗ’ ಸಿನಿಮಾ ಸ್ಕ್ರೀನಿಂಗ್ ಆಗುತ್ತಿದೆ.
ಈ ಹಿಂದೆ ‘ಲೂಸಿಯಾ’, ‘ಕನಸೆಂಬೋ ಕುದುರೆಯನ್ನೇರಿ’,‘ಒಂದು ಮೊಟ್ಟೆಯ ಕತೆ’ ಚಿತ್ರಗಳು ಪ್ರದರ್ಶನ ಕಂಡಿದ್ದವು. ಅವಿನಾಶ್, ಸುಧಾ ಬೆಳವಾಡಿ, ಸಂಯುಕ್ತಾ ಹೊರನಾಡು ಬಿಟ್ಟರೆ ಮಿಕ್ಕವರೆಲ್ಲರೂ ಹೊಸಬರೇ ಸೇರಿಕೊಂಡು ಮಾಡಿರುವ ‘ಅರಿಷಡ್ವರ್ಗ’ಕ್ಕೆ ಪ್ರಾರಂಭಿಕ ಹಂತದಲ್ಲಿಯೇ ಈ ರೀತಿಯ ದೊಡ್ಡ ಫೆಸ್ಟ್‌ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದು ಇಡೀ ಚಿತ್ರತಂಡದ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.
ಅಜಯ್ ದೇವಗನ್ ಇನ್ನು ಗುಟ್ಕಾ ಜಾಹೀರಾತಲ್ಲಿ ನಟಿಸಲ್ಲ!
‘ಬಗ್ರಿ ಫೌಂಡೇಷನ್ ಲಂಡನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸುವುದು ಎಂದರೆ ಇಂಡಿಯನ್ ಫಿಲ್ಮ್‌ಗಳಿಗೆ ಯುರೋಪ್‌ನಲ್ಲಿ ಸಿಗುವ ದೊಡ್ಡ ಗೌರವ. ಅದಕ್ಕೆ ನಮ್ಮ ಚಿತ್ರ ಆಯ್ಕೆಯಾಗಿದೆ. ಜೂನ್ 23 ಮತ್ತು 26 ಎರಡು ಶೋ ಇದ್ದು, ಅಲ್ಲಿನ ಕನ್ನಡಿಗರೆಲ್ಲರನ್ನೂ ಒಟ್ಟಾಗಿಸಿ ಸಿನಿಮಾ ತೋರಿಸುವುದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ನಾವು ಚಿತ್ರವನ್ನು ಕಮರ್ಷಿಯಲ್ ದೃಷ್ಟಿಯಿಂದಲೇ ಮಾಡಿದ್ದರೂ ಇಲ್ಲಿ ಕಲಾತ್ಮಕ ಅಂಶಗಳು ಇವೆ. ಇದೇ ಕಾರಣಕ್ಕೆ ನಮ್ಮ ಸಿನಿಮಾ ಆಯ್ಕೆಯಾಗಿದೆ ಎನ್ನಿಸುತ್ತದೆ’ ಎನ್ನುವುದು ಚಿತ್ರದ ನಿರ್ಮಾಪಕ ಹರೀಶ್ ಮಲ್ಯ ಮಾತು.
ಟ್ರೋಲಿಗರಿಗೆ ಮತ್ತೊಂದು ಹಾಟ್ ಪೋಟೋ ಗಿಫ್ಟ್ ಕೊಟ್ಟ ಚೆಲುವೆ!
ನಿರ್ದೇಶಕ ಅರವಿಂದ್ ಕಾಮತ್ ಅವರಿಗೆ ಇದು ಮೊದಲ ಪ್ರಯತ್ನ. ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ಸಂಕೇತವಾಗಿ ಇಟ್ಟುಕೊಂಡು ಆರು ಪ್ರಧಾನ ಪಾತ್ರಗಳೊಂದಿಗೆ ಒಂದು ಮರ್ಡರ್ ಮಿಸ್ಟರಿಯನ್ನು ಚಿತ್ರದಲ್ಲಿ ತೋರಿಸಿದ್ದಾರೆ. ಮುಂದಿನ ದಿನಗಳಲ್ಲಿ ಸೂಕ್ತ ತಯಾರಿಯೊಂದಿಗೆ ಥಿಯೇಟರ್‌ಗೆ ಲಗ್ಗೆ ಇಡುವ ಪ್ಲ್ಯಾನ್ ಮಾಡಿಕೊಂಡಿದೆ ಚಿತ್ರತಂಡ.