Lakshmi Nivasa ಜಯಂತ್​ ಹುಟ್ಟಿದ್ದು- ರೀಲ್​ ಪತ್ನಿ ಚಿನ್ನುಮರಿ ರಿಯಲ್ಲಾಗಿ ಮದ್ವೆಯಾಗಿದ್ದು ಇವತ್ತೇ! ರೋಚಕ ಸ್ಟೋರಿ

Published : Nov 28, 2026, 11:59 AM IST
Deepak Subramanya and Chandana Ananthakrishna

ಸಾರಾಂಶ

ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಸೈಕೋ ಜಯಂತ್ ಆಗಿ ಮಿಂಚುತ್ತಿರುವ ದೀಪಕ್ ಸುಬ್ರಹ್ಮಣ್ಯ ಮತ್ತು ರೆಬಲ್ ಜಾಹ್ನವಿ ಆಗಿ ನಟಿಸುತ್ತಿರುವ ಚಂದನಾ ಅನಂತಕೃಷ್ಣ ಅವರ ಬಗ್ಗೆ ಆಸಕ್ತಿದಾಯಕ ಮಾಹಿತಿ. ದೀಪಕ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮವಾದರೆ, ಚಂದನಾಗೆ ವಿವಾಹ ವಾರ್ಷಿಕೋತ್ಸವ.

ಲಕ್ಷ್ಮೀ ನಿವಾಸ (Lakshmi Nivasa Serial) ಮೂಲಕ ಹೀರೋ ಕಮ್​ ವಿಲನ್​ ಪಾತ್ರದಲ್ಲಿಯೇ ಎಲ್ಲರನ್ನೂ ಮೋಡಿ ಮಾಡ್ತಿರೋ ನಟ ಸೈಕೋ ಜಯಂತ್​ ಉರ್ಫ್​ ದೀಪಕ್​ ಸುಬ್ರಹ್ಮಣ್ಯ. ಈ ಸೀರಿಯಲ್​ ಆರಂಭದಲ್ಲಿ, ಜಯಂತ್​ ಪತ್ನಿ ಚಿನ್ನುಮರಿಯನ್ನು ಪ್ರೀತಿಸುವ ಪರಿ ನೋಡಿ, ಇದ್ದರೆ ಇಂಥ ಗಂಡ ಇರಬೇಕಪ್ಪ ಎಂದುಕೊಂಡ ಹೆಣ್ಣುಮಕ್ಕಳೇ ಹೆಚ್ಚು. ಆದರೆ ಇದು ಪ್ರೀತಿಯಲ್ಲ, ಪೊಸೆಸಿವ್​ನೆಸ್ ರೂಪದಲ್ಲಿನ ಸೈಕೋ ಮೈಂಡ್​ಸೆಟ್​ ಎಂದು ತಿಳಿಯುತ್ತಿದ್ದಂತೆಯೇ ಅಬ್ಬಾ ಇಂಥ ಪತಿ ಮಾತ್ರ ನನಗೆ ಬೇಡಪ್ಪಾ ಎಂದವರೇ ಎಲ್ಲಾ. ಹೀಗೆ ವಿಭಿನ್ನ ಶೇಡ್​ನಲ್ಲಿ ಕಾಣಿಸಿಕೊಂಡು, ಕಣ್ಣಿನಲ್ಲಿಯೇ ನಟನೆ ಮಾಡುತ್ತಾ ಮೋಡಿ ಮಾಡುತ್ತಿರುವ ನಟ ದೀಪಕ್​ ಸುಬ್ರಹ್ಮಣ್ಯ (Deepak Subramanya) ಅವರಿಗೆ ಇಂದು ಅರ್ಥಾತ್​ ನವೆಂಬರ್​ 28 ಹುಟ್ಟುಹಬ್ಬದ ಸಂಭ್ರಮ.

ಇನ್ನು ಚಿನ್ನುಮರಿ ಉರ್ಫ್​ ಜಾಹ್ನವಿ ಈಗ ರೆಬಲ್​ ಆಗಿದ್ದಾಳೆ. ಆರಂಭದಲ್ಲಿ ಇವಳೂ ಇಂಥ ಪತಿ ತನಗೆ ಸಿಕ್ಕಿದ್ದು ​ತನ್ನ ಪುಣ್ಯ ಎಂದುಕೊಂಡವಳೇ. ಆದರೆ ಗಂಡನ ಸೈಕೋಪಾತ್​ತನ ತಿಳಿಯುತ್ತಿದ್ದಂತೆಯೇ ಬದಲಾಗಿದ್ದಾಳೆ. ಈಗ ಖುದ್ದು ಗಂಡ ತಾವು ಬದಲಾಗಿದ್ದೇನೆ ಎಂದು ತೋರಿಸಲು ಹೆಣಗಾಡುತ್ತಿದ್ದರೂ, ಅದನ್ನು ನಂಬುವ ಸ್ಥಿತಿಯಲ್ಲಿ ಇಲ್ಲಿ ಜಾನುಮರಿ. ಆಗ ಪೆದ್ದಿಯಂತೆ, ಈಗ ರೆಬಲ್​ ಆಗಿ ನಟಿಸಿ, ಎಲ್ಲರ ಮನಸ್ಸನ್ನು ಗೆಲ್ಲುತ್ತಿರುವ ನಟಿ ಚಂದನಾ ಅನಂತಕೃಷ್ಣ (Chandana Ananthakrishna). ಇವರಿಗೆ ಇಂದು 2ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಇದು ರಿಯಲ್​ ಮದುವೆಯ ವಿವಾಹ ವಾರ್ಷಿಕೋತ್ಸವ.

ನಟ ದೀಪಕ್​ ಕುರಿತು

ಇನ್ನು ದೀಪಕ್ ಸುಬ್ರಮಣ್ಯ ಕುರಿತು ಹೇಳುವುದಾದರೆ, ಇವರು ರಂಗಭೂಮಿ ಕಲಾವಿದ. ಎರಡು ದಶಕಗಳ ಬಣ್ಣದ ಲೋಕದಲ್ಲಿ ಪಳಗಿದ್ದಾರೆ. ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್​. ಇದಾಗಲೇ, ಸಾಲಗಾರ , ಜಾರು ಬಂಡೆ , ಪಿಂಕಿ ಎಲ್ಲಿ..? , ಶುದ್ಧಿ , ಆಯಾನಾ , ಸಾರಾಂಶ ಸೇರಿದಂತೆ ಹಲವು ಸಿನಿಮಾ ಮಾಡಿದ್ದಾರೆ. ಸಿನಿಮಾ ರಂಗ, ರಂಗಭೂಮಿ ಹಾಗೂ ಕಿರುತೆರೆ ಮೂರರಲ್ಲೂ ಈಗ ದೀಪಕ್ ಸುಬ್ರಮಣ್ಯ ಬಿಜಿಯಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ವರ್ಷ ಪ್ರಸಾರವಾಗಿದ್ದ ದಾಸ ಪುರಂದರ ಧಾರಾವಾಹಿಯಲ್ಲಿ ಪುರಂದರನಾಗಿ ನಟಿಸಿ ಅಪಾರ ಮೆಚ್ಚುಗೆ ಗಳಿಸಿದ್ದರು. ಈ ಸೀರಿಯಲ್​ ಮೂಲಕ ಕಿರುತೆರೆಗೆ ಎಂಟ್ರಿ ಪಡೆದರು. ಇದೀಗ ಲಕ್ಷ್ಮಿ ನಿವಾಸದಲ್ಲಿ ಸಕತ್​ ಫೇಮಸ್​ ಆಗಿದ್ದಾರೆ. ಸಿನಿಮಾ ಮಿಸ್ಟರ್​ ರಾಣಿಯಲ್ಲಿ ನಾಯಕಿ ಪಾತ್ರ ಹಾಕಿಯೂ ಗಮನ ಸೆಳೆದಿದ್ದಾರೆ ನಟ.

ನಟಿ ಚಂದನಾ ಕುರಿತು

ಇನ್ನು ಇನ್ನು ಚಂದನಾ ಕುರಿತು ಹೇಳುವುದಾದರೆ, ಇವರು ಭರತನಾಟ್ಯ ಕಲಾವಿದೆ ಕೂಡ. ಅದರ ಜೊತೆಯಲ್ಲಿಯೇ ತಾವು ಅತ್ಯಂತ ಸುಂದರವಾಗಿ ಹಾಡಬಲ್ಲೆ ಎನ್ನುವುದನ್ನೂ ಇದರಲ್ಲಿ ತೋರಿಸಿಕೊಟ್ಟಿದ್ದಾರೆ. ಗಾಯನವೊಂದಕ್ಕೆ ದನಿಯಾಗಿದ್ದಾರೆ. 2024ರ ನವೆಂಬರ್​ 28ರಂದು ಇವರ ಮದುವೆಯಾಗಿದೆ. ಇವರದ್ದು ಅರೆಂಜ್ಡ್​ ಮ್ಯಾರೇಜ್. ಪತಿ ಉದ್ಯಮಿ ಪ್ರತ್ಯಕ್ಷ್​. ಇವರದ್ದು ಹಿರಿಯರು ನೋಡಿ ಆಗಿರುವ ಮದುವೆ. ಮದುವೆಯ ಬಗ್ಗೆ ಈ ಹಿಂದೆ ಸಂದರ್ಶನವೊಂದರಲ್ಲಿ ಜೋಡಿ ಸಕತ್​ ತಮಾಷೆಯಾಗಿ ಉತ್ತರ ಕೊಟ್ಟಿದೆ. ಪ್ರತ್ಯಕ್ಷ್​ ಅವರು ಹೇಳಿದ್ದೇನೆಂದರೆ, ಹೀಗೆ ಒಂದು ದಿನ ಆಫೀಸ್​ನಲ್ಲಿ ಕೆಲಸ ಮಾಡುತ್ತಿರುವಾಗ, ಅಮ್ಮ ಮದುವೆಯ ಬಗ್ಗೆ ಹೇಳಿದ್ರು. ಅದು ಇದು ಮಾತೆಲ್ಲಾ ಆದ ಬಳಿಕ ಫೋಟೋ ನೋಡಿದೆ. ಫೋಟೋ ನೋಡಿದ ತಕ್ಷಣ ಈಕೆಯನ್ನು ನಾನು ಮದುವೆಯಾಗುವುದಿಲ್ಲ ಎಂದು ಹೇಳಿದೆ. ಆ ಫೋಟೋದಲ್ಲಿ ಇವಳು ಒಳ್ಳೆ ಮಗು ಥರ ಕಾಣಿಸ್ತಾ ಇದ್ಲು. ಬಾಲ್ಯ ವಿವಾಹ ಆಗತ್ತೆ, ಬೇಡಪ್ಪಾ ಇವಳು ನನಗೆ ಎಂದೆ ಎಂದು ತಮಾಷೆ ಮಾಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೆಂಗಳೂರಿಗೆ ಮೆಟ್ರೋ, ನಂದಿಬೆಟ್ಟಕ್ಕೆ ರೋಪ್‌ವೇ; 80ರ ದಶಕದಲ್ಲೇ ಭವಿಷ್ಯದ ಕನಸು ಕಂಡಿದ್ದ ಶಂಕರ್‌ ನಾಗ್!
ಕಿಚ್ಚ ಸುದೀಪ್‌ಗೆ 'ಕಿಂಗ್ ಕಿಚ್ಚ' ಎಂಬ ಹೊಸ ಬಿರುದು ನೀಡಿದ ಜೋಗಿ ಪ್ರೇಮ್! ಈ ಹೆಸರಿನ ಹಿಂದಿದೆ ಸ್ಪೆಷಲ್ ಕಾರಣ!