
'ಪ್ರೇಮದ ಊರಲಿ' ಜನರ ಮನಸ್ಸು ಗೆದ್ದಾಗಿದೆ. ಸೆಪ್ಟೆಂಬರ್ 25 ರಂದು ಕೆಲವೇ ಕೆಲವು ಥಿಯೇಟರ್‍ಗಳಲ್ಲಿ ತೆರೆ ಕಂಡು ನಂತರ ಇಡೀ ರಾಜ್ಯಾದ್ಯಂತ ಆವರಿಸಿಕೊಂಡಿತ್ತು. ಈಗಲೂ ಕೂಡ ಇತ್ತೀಚೆಗಿನ ದಿನಗಳಲ್ಲಿ ಒಂದೊಳ್ಳೆ ಸಿನಿಮಾ ಯಾವುದು ಎಂದು ಕೇಳಿದಾಗ ಥಟ್ ಅಂತಾ ಹೇಳೋದೇ ಇದೇ 'ಪ್ರೇಮದ ಊರಲಿ' ಚಿತ್ರ.
ಸಿನಿಮಾ ಹಿಟ್ ಆಯ್ತು, ಸಿನಿಮಾದ ಸಾಂಗ್ ಕೂಡ ಹಿಟ್ ಆಯ್ತು. ಅಷ್ಟೇ ಅಲ್ಲ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಹಣವನ್ನೂ ಗಳಿಸಿ ಆಗಿದ್ದಾಗಿದೆ. ಜೊತೆಗೆ ಇಡೀ ಚಿತ್ರತಂಕ್ಕೆ ದೊಡ್ಡ ದೊಡ್ಡ ಗಣ್ಯರಿಂದ ಪ್ರಶಂಸೆಯ ಸುರಿಮಳೆ ಜೊತೆಗೆ ನೇಮು, ಫೇಮು ಎಲ್ಲವನ್ನೂ ತಂದುಕೊಟ್ಟಿದೆ. ಅಷ್ಟಕ್ಕೆ ಚಿತ್ರತಂಡದ ಗೆಲುವು ನಿಂತಿಲ್ಲ.
ನೀವು ಏನಾದರೂ ಇನ್‌ಸ್ಟಾಗ್ರಾಮ್ ಬಳಕೆ ಮಾಡೋರಾಗಿದ್ದರೆ ಗೊತ್ತಿರುತ್ತೆ. ರೀಲ್ಸ್ ಸ್ಕ್ರಾಲ್ ಮಾಡಿದ್ರೆ ಸಾಕು.. ಅದೇ ಪ್ರೇಮದ ಊರಲಿ ಸಿನಿಮಾದ ಸಾಂಗ್‌ಗೆ ಸಂಬಂಧಿಸಿದ ರೀಲ್ಸ್‌ಗಳ ಗೊಂಚಲುಗಳೇ ಸಿಗುತ್ತವೆ. ಅದರಲ್ಲೂ 'ಬಾನಲಿ ಜಾರಿದ' ಹಾಡಂತೂ ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿದೆ. ರೀಲ್ಸ್ ಪ್ರಿಯರಿಗೆ ಈ ಹಾಡು ದೊಡ್ಡ ಕಂಟೆಂಟ್ ನೀಡಿದ್ದು, ಬಗೆಬಗೆಯಾಗಿ ರೀಲ್ಸ್ ಮಾಡಿ ಮಿಲಿಯನ್ ಗಟ್ಟಲೆ ಜನ ವ್ಯೂವ್ಸ್ ಪಡೆದುಕೊಂಡು ಖುಷಿ ಪಡುತ್ತಿದ್ದಾರೆ.
ಇವತ್ತು ನವೆಂಬರ್ 14. ಮಕ್ಕಳ ದಿನಾಚರಣೆ ನಡೆಯುತ್ತಿದೆ. ವಿಶೇಷವಾಗಿ ಪುಟ್ಟ ಪುಟ್ಟ ಮಕ್ಕಳೇ ಈ ಹಾಡಿಗೆ ರೀಲ್ಸ್ ಮಾಡಿರುವ ವಿಡಿಯೋಗಳು ಇವತ್ತು ಅಬ್ಬರಿಸುತ್ತಿವೆ. ಒಂದೊಂದು ವಿಡಿಯೋಗಳು ಮಿಲಿಯನ್ಸ್ ವ್ಯೂವ್ಸ್ ಜೊತೆಗೆ ಲೈಕ್ ಹಾಕು ಕಾಮೆಂಟ್‌ಗಳನ್ನು ಪಡೆಯುತ್ತಿವೆ. ರೀಲ್ಸ್‌ಗೆ ಸಂಬಂಧಿಸಿದ ಕೆಲವು ಲಿಂಕ್‌ಗಳನ್ನ ಲಗತ್ತಿಸಲಾಗಿದ್ದು, ನೀವು ವೀಕ್ಷಿಸಬಹುದಾಗಿದೆ.
ಇನ್ನು, ಬಾನಲಿ ಜಾರಿದ ಹಾಡಿಗೆ ಅಭಿಜಿತ್ ತೀರ್ಥಹಳ್ಳಿ ಸಾಹಿತ್ಯ ಬರೆದಿದ್ದಾರೆ. ಸುನಂದ ಗೌತಮ್ ಅವರು ಸಂಗೀತ ನಿರ್ದೇಶನ ಈ ಹಾಡಿಗೆ ನಿನಾದ ನಾಯಕ್, ರಜತ್ ಹೆಗಡೆ ಧ್ವನಿಯಾಗಿದ್ದಾರೆ. ಮನೋಜ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಶ್ರೀ ರಾಮ್, ತಪಸ್ವಿನಿ ಪೂಣಚ್ಚ, ರಂಗಾಯಣ ರಘು ಸೇರಿ ಹಲವರು ನಟಿಸಿದ್ದಾರೆ. ಇದು ಅಪ್ಪ-ಮಗನ ಹಾಗೂ ರೈತರ ಮಕ್ಕಳ ಕಥೆಯಾಗಿದ್ದು, ಮನಸ್ಸಿಗೆ ಹತ್ತಿರವಾಗುವ ಪಾತ್ರಗಳು ಮತ್ತು ಸುಮಧುರ ಸಂಗೀತವನ್ನು ಹೊಂದಿದೆ.
ಸಿನಿಮಾವು 50 ದಿನಗಳನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದೇ ಖುಷಿಯಲ್ಲಿ ಸಿನಿಮಾ ತಂಡ ಸಂಭ್ರಮಿಸಿದೆ. ಇನ್ನು ವಿಶೇಷ ವಿಡಿಯೋ ಮೂಲಕ ನಾಯಕಿ ತಪಸ್ವಿನಿ ಪೂಣಚ್ಚ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. 50 ದಿನ ಪೂರೈಸಿರೋದನ್ನು ನೋಡಿ ನನಗೆ ತುಂಬಾನೇ ಖುಷಿ ಆಗುತ್ತಿದೆ. ನಮ್ಮ ಸಿನಿಮಾ ಥಿಯೇಟರ್‌ನಲ್ಲಿ ಇನ್ನೂ ಓಡುತ್ತಿದೆ. ಮೂವಿ ರಿಲೀಸ್ ಆದ್ಮೇಲೆ ಒಂದು ದಿನ ಮನೆಯಲ್ಲಿ ಇರೋಕೆ ಟೈಮ್ ಸಿಗುತ್ತಿಲ್ಲ. ಅಷ್ಟು ನಮಗೆ ಪ್ರೀತಿ ತೋರಿಸುತ್ತಿದ್ದೀರಿ. ಎಲ್ಲರೂ ಕೇಳ್ತಾಯಿದ್ರು ಸಕ್ಸಸ್ ಯಾವ ತರ ಸೆಲೆಬ್ರೇಟ್ ಮಾಡ್ತಾಯಿದ್ದೀರ ಎಂದು. ಜನರ ಜೊತೆಗೆ ಬೆರೆತಾಗ ಆ ಕೂಗು ನಮ್ಮ ಯಶಸ್ಸಿನ ಆಚರಣೆ. ಈ ಸಿನಿಮಾಗೆ ಹೆಣ್ಣುಮಕ್ಕಳು ಶಕ್ತಿ ಅಂತ ಹೇಳಬಹುದು, ನಮ್ಮ ನಿರ್ಮಾಪಕಿ, ರುಕ್ಮಿಣಿ, ವಸಂತ ಹಾಗೂ ಸಂತು ಪಾತ್ರಧಾರಿ ಶ್ರೀರಾಮ್ ಅವರ ಪತ್ನಿ ಕಾಲ್ಗುಣ ಎಂದು ತಪಸ್ವಿನಿ ಪೂಣಚ್ಚ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.