'ಸೀತಾರಾಮ ಕಲ್ಯಾಣ'ದ ನಿಖಿಲ್ ಆ್ಯಕ್ಟಿಂಗ್‌ಗೆ ಕಿಚ್ಚಾ ಫಿದಾ!

Published : Jan 29, 2019, 01:01 PM IST
'ಸೀತಾರಾಮ ಕಲ್ಯಾಣ'ದ ನಿಖಿಲ್ ಆ್ಯಕ್ಟಿಂಗ್‌ಗೆ ಕಿಚ್ಚಾ ಫಿದಾ!

ಸಾರಾಂಶ

ರಚಿತಾ ರಾಮ್, ನಿಖಿಲ್ ಕುಮಾರಸ್ವಾಮಿ ನಟಿಸಿದ 'ಸೀತಾರಾಮ ಕಲ್ಯಾಣ' ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಬಗ್ಗೆ ಸದಾಭಿಪ್ರಾಯ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕಿಚ್ಚ ಸುದೀಪ್ ಚಿತ್ರದ ಬಗ್ಗೆ ಹೇಳಿದ್ದಿಷ್ಟು...

'ಸೀತಾರಾಮ ಕಲ್ಯಾಣ' ಹೆಸರಿಗೆ ತಕ್ಕಂತೆ ನಿಖಿಲ್ ಹಾಗೂ ರಚಿತಾ ರಾಮ್ ಜೋಡಿ ಫ್ಯಾಮಿಲಿ ಚಿತ್ರವನ್ನು ನೀಡಿದೆ. ಚಿತ್ರದಲ್ಲಿ ಪ್ರೀತಿ, ಸ್ನೇಹ, ವಂಚನೆ ಹಾಗೂ ಒಂಚೂರು ಫ್ಲ್ಯಾಷ್ ಬ್ಯಾಕ್ ಸೇರಿ ಒಂದು ಒಳ್ಳೆಯ ಕಥೆಯಿದೆ.

ಕೆಲವು ದಿನಗಳ ಹಿಂದೆ ನಿಖಿಲ್ ಅಜ್ಜ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೂ ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿಯಂತೂ ತಮ್ಮ ಮಗನ ಅಭಿನಯನಕ್ಕೆ ಫುಲ್ ಫಿದಾ ಆಗಿದ್ದು, ಔಟ್ ಆಫ್ ಔಟ್ ಮಾರ್ಕ್ಸ್ ನೀಡಿದ್ದಾರೆ. ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಹ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಟ್ವೀಟ್ ಮಾಡಿದ್ದಾರೆ.

‘ಚಿತ್ರದಲ್ಲಿ ನಿಖಿಲ್ ಭರವಸೆ ಮೂಡಿಸುವ ನಟನಂತೆ ಕಾಣಿಸಿಕೊಂಡಿದ್ದಾರೆ. ಅವರ ಅಭಿನಯ ಹಾಗೂ ಸಂದರ್ಭವನ್ನು ವ್ಯಕ್ತ ಪಡಿಸಿದ ರೀತಿ ತುಂಬಾ ಇಷ್ಟವಾಯಿತು. ನಿಮ್ಮನ್ನು ಜನರಿಗೆ ಇನ್ನೂ ಹೆಚ್ಚು ಹತ್ತಿರವಾಗುವ ಪಾತ್ರದಲ್ಲಿ ನೋಡಲು ಇಚ್ಛಿಸುತ್ತೇನೆ. ಬೆಸ್ಟ್ ವಿಶ್ ಮೈ ಫ್ರೆಂಡ್..’ ಎಂದು ನಿಖಿಲ್ ನಟನೆಗೆ, ಚಿತ್ರಕ್ಕೆ ಬೇಷ್ ಎಂದಿದ್ದಾರೆ ಕಿಚ್ಚ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Untold Love Story: ಸ್ಟಾರ್ ನಟನ ಎರಡನೇ ಪತ್ನಿಯ ಲವ್‌ನಲ್ಲಿ ಬಿದ್ದು ಒದ್ದಾಡಿದ್ದ ರಜನಿಕಾಂತ್!
Sandalwood Films: ರಿಲೀಸ್'ಗೂ ಮುನ್ನ ಭಾರಿ ನಿರೀಕ್ಷೆ ಹುಟ್ಟಿಸಿ, ಬಳಿಕ ಸೋತ ಕನ್ನಡ ಸಿನಿಮಾಗಳು