’ಪೈಲ್ವಾನ್’ ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ಕನ್ನಡದ ಜತೆಗೆ ಇದು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ತೆರೆಗೆ ಬರುತ್ತಿದೆ. ಅಲ್ಲೂ ಸೆನ್ಸಾರ್ ಪ್ರಕಿಯೆ ಮುಗಿಸಬೇಕಿದೆ.
ಕಿಚ್ಚ ಸುದೀಪ್ ’ಪೈಲ್ವಾನ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ’ಪೈಲ್ವಾನ್’ ನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪ್ರಮೋಶನ್ ಭರದಿಂದ ಸಾಗುತ್ತಿದೆ. ಈ ನಡುವೆ ಸುದೀಪ್ ಟ್ವಿಟರ್ ಲೈವ್ ಬಂದು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಕನ್ನಡ ಚಿತ್ರವನ್ನು ಬಾಲಿವುಡ್ ನಲ್ಲಿ ಪ್ರಮೋಶನ್ ಮಾಡಿದ ಕಿಚ್ಚ ಸುದೀಪ್
ಪೈಲ್ವಾನ್ ಸಿನಿಮಾ ಬಗ್ಗೆ, ವರ್ಕೌಟ್ ಬಗ್ಗೆ, ಸಿನಿಮಾ ವಿಶೇಷತೆಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬ ಯಾವ ಕ್ರಿಕೆಟಿಗರ ಬಯೋಪಿಕ್ ನಲ್ಲಿ ನಟಿಸಲು ಇಷ್ಟಪಡುತ್ತೀರಿ? ಎಂದಾಗ ಸುದೀಪ್ ಕೊಟ್ಟ ಉತ್ತರ ಹೀಗಿದೆ. ನನಗೆ ಕ್ರಿಕೆಟ್ ಎಂದರೆ ತುಂಬಾ ಇಷ್ಟ. ಯಾವ ಕ್ರಿಕೆಟಿಗರ ಬಯೋಪಿಕ್ ನಲ್ಲಿ ನಟಿಸಲು ರೆಡಿ ಇದ್ದೇನೆ. ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಹೈಟ್ ಗೆ ನಾನು ಮ್ಯಾಚ್ ಆಗ್ತೀನಿ. ಹಾಗಾಗಿ ಅವರ ಬಯೋಪಿಕ್ ನಲ್ಲಿ ನಟಿಸಲು ಇಷ್ಟಪಡುತ್ತೇನೆ’ ಎಂದಿದ್ದಾರೆ.
And we're live! https://t.co/YaiJuTpqnC
— Kichcha Sudeepa (@KicchaSudeep)ಸುದೀಪ್ ಪೈಲ್ವಾನ್‌ಗೆ U/A ಸರ್ಟಿಫಿಕೇಟ್!
ಪೈಲ್ವಾನ್ ಸಿನಿಮಾ ಸೆಪ್ಟೆಂಬರ್ 12 ರಂದು ತೆರೆಗೆ ಬರಲು ಸಿದ್ಧವಾಗಿದೆ. ಐದು ಭಾಷೆಗಳಲ್ಲಿ ರಿಲೀಸ್ ಆಗಲು ರೆಡಿಯಾಗಿದೆ. ಸದ್ಯಕ್ಕೆ ಚಿತ್ರತಂಡ ಪ್ರಮೋಶನ್ ನಲ್ಲಿ ಕೆಲಸದಲ್ಲಿ ಬ್ಯುಸಿ ಆಗಿದೆ. ಚಿತ್ರ ಅದ್ಧೂರಿಯಾಗಿ ತೆರೆಗೆ ಬರಲಿದೆ. ಈಗಾಗಲೇ ಕೆಆರ್‌ಜಿ ಸ್ಟುಡಿಯೋ ಕನ್ನಡದಲ್ಲಿ ವಿತರಣೆಯ ಹಕ್ಕು ಪಡೆದಿದೆ. ಹಾಗೆಯೇ ತೆಲುಗಿನಲ್ಲಿ ವರಾಹಿ ಸಂಸ್ಥೆ ವಿತರಣೆ ಮಾಡುತ್ತಿದೆ.
ಹಿಂದಿ, ತಮಿಳು ಹಾಗೂ ಮಲಯಾಳಂ ವಿತರಣೆಯ ಹಕ್ಕು ಝೀ ಸ್ಟುಡಿಯೋಸ್ ಪಾಲಾಗಿದೆ. ಉಳಿದಂತೆ ಈಗ ಗೊತ್ತಾಗಿರುವ ಮಾಹಿತಿ ಪ್ರಕಾರ ಪ್ರೈಮ್ ಮೀಡಿಯಾ ಸಂಸ್ಥೆ ಯ ಮೂಲಕ ಅಮೆರಿಕ ಸೇರಿದಂತೆ ವಿವಿಧ ದೇಶಗಳಲ್ಲಿ ಪೈಲ್ವಾನ್ ಬಿಡುಗಡೆ ಆಗುತ್ತಿದೆ.