ಅಮರ್ ಸಿನಿಮಾ ನಂತರ ಅಭಿಷೇಕ್ ಅಂಬರೀಶ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಅವರ ಮುಂದಿನ ಸಿನಿಮಾಗಳ ಬಗ್ಗೆ ಮಾತುಗಳು ಕೇಳಿ ಬಂದರೂ ಎಲ್ಲಿಯೂ ಅಧಿಕೃತವಾಗಿರಲಿಲ್ಲ. ಇದೀಗ ಹೊಸ ಫೋಟೋವೊಂದನ್ನು ರಿವೀಲ್ ಮಾಡಿದ್ದು ಮುಂದಿನ ಚಿತ್ರದ್ದಿರಬಹುದೆಂಬ ಕುತೂಹಲ ಮೂಡಿಸಿದೆ.
ಅಮರ್ ಸಿನಿಮಾ ನಂತರ ಅಭಿಷೇಕ್ ಅಂಬರೀಶ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಅವರ ಮುಂದಿನ ಸಿನಿಮಾಗಳ ಬಗ್ಗೆ ಮಾತುಗಳು ಕೇಳಿ ಬಂದರೂ ಎಲ್ಲಿಯೂ ಅಧಿಕೃತವಾಗಿರಲಿಲ್ಲ. ಅಮರ್ ಸಿನಿಮಾ ಹೇಳಿಕೊಳ್ಳುವಷ್ಟರ ಮಟ್ಟಿಗೆ ಹೆಸರನ್ನು ತಂದು ಕೊಡದಿದ್ದರೂ ಒಂದು ಮಟ್ಟಿಗೆ ಭರವಸೆ ಮೂಡಿಸಿದ್ದರು ಅಭಿಷೇಕ್.
ಇದೀಗ ಅಭಿಷೇಕ್ ಇನ್ಸ್ಟಾಗ್ರಾಮ್ ನಲ್ಲಿ ಹಾಕಿರುವ ಪೋಸ್ಟೊಂದು ಭಾರೀ ಕುತೂಹಲ ಮೂಡಿಸಿದೆ. ಸ್ವತಂತ್ರ ಹೋರಾಟಗಾರರ ರೀತಿ ಕಾಣಿಸುತ್ತಿರುವ ಈ ಲುಕ್ ಇವರ ಮುಂದಿನ ಸಿನಿಮಾ ಬಗ್ಗೆ ಸುಳಿವು ನೀಡುವಂತಿದೆ.
ವಿಶೇಷ ಎಂದರೆ ಕುಚಿಕೋ ಗೆಳೆಯನ ಈ ಲುಕ್ ಗೆ ನಿಖಿಲ್ ಕುಮಾರಸ್ವಾಮಿ ವಿಶ್ ಮಾಡಿದ್ದಾರೆ. ‘looking Sharp..ನಿನ್ನ ಮುಂದಿನ ಚಿತ್ರಕ್ಕೆ ಶುಭಾಶಯಗಳು’ ಎಂದು ಹಾರೈಸಿದ್ದಾರೆ.
ಇದಕ್ಕೆ ಅಭಿಷೇಕ್, ಥ್ಯಾಂಕ್ಯೂ. ಅಭಿಮನ್ಯು ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದೀಯಾ. ಒಳ್ಳೆಯದಾಗಲಿ ಎಂದು ಗೆಳೆಯನಿಗೆ ಶುಭ ಹಾರೈಸಿದ್ದಾರೆ.
ಮಂಡ್ಯ ಚುನಾವಣೆಯಲ್ಲಿ ಕುಚಿಕೋ ಗೆಳೆಯರ ನಡುವೆ ಅಪಸ್ವರ ಬಂದಿದೆ ಎನ್ನಲಾಗಿತ್ತು. ಈಗ ಒಬ್ಬರಿಗೊಬ್ಬರು ವಿಶ್ ಮಾಡಿಕೊಳ್ಳುವುದು, ಮಾತಾಡಿಕೊಳ್ಳುವುದು ನೋಡಿದರೆ ಇವೆಲ್ಲಾ ರಾಜಕೀಯಕ್ಕಷ್ಟೇ ಸೀಮಿತ. ಅದರಾಚೆಗೆ ಎಲ್ಲರೂ ಚೆನ್ನಾಗಿಯೇ ಇರುತ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ.